ಬೆಂಗಳೂರು: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ಪಾಲಿಗೆ ಒಂದು ಗುಡ್ ನ್ಯೂಸ್ ಪ್ರಕಟಗೊಂಡಿದೆ. ಹೌದು, ಶೀಘ್ರದಲ್ಲಿಯೇ ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸಂಪೂರ್ಣವಾಗಿ ಜಾಹೀರಾತು-ಮುಕ್ತವಾಗಲಿವೆ. ಅಂದರೆ, ಬಳಕೆದಾರರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ನೋಡುವುದಿಲ್ಲ. ಮೆಟಾ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಾಗಿ ಹೊಸ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಈ ಚಂದಾದಾರಿಕೆ ಯೋಜನೆಯನ್ನು ತೆಗೆದುಕೊಳ್ಳುವ ಬಳಕೆದಾರರು ಮಾತ್ರ ಜಾಹೀರಾತು-ಮುಕ್ತ ಅನುಭವವನ್ನು ಪಡೆಯಲಿದ್ದಾರೆ. ಆದಾಗ್ಯೂ, ಈ ಸೌಲಭ್ಯವು ಪ್ರಸ್ತುತ ಭಾರತದಲ್ಲಿ ಲಭ್ಯವಿಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಪ್ರಸ್ತುತ ಇದನ್ನು ಯುರೋಪಿಯನ್ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗಿದೆ. ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ (Technology News In Kannada)


COMMERCIAL BREAK
SCROLL TO CONTINUE READING

Facebook ಮತ್ತು Instagram ನಿಂದ ಹೊಸ ಚಂದಾದಾರಿಕೆ ಯೋಜನೆಗಳು
ಮೇಟಾ ನವೆಂಬರ್ ಆರಂಭದಿಂದ ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಗಾಗಿ ಪೈಡ್ ಜಾಹೀರಾತು-ಮುಕ್ತ ಚಂದಾದಾರಿಕೆ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಯುರೋಪಿಯನ್ ಬಳಕೆದಾರರಿಗೆ ಪರಿಚಯಿಸಲಾಗಿದೆ. ಈ ಯೋಜನೆಯ ಬೆಲೆ ವೆಬ್‌ಸೈಟ್‌ಗಳಿಗೆ €9.99 (ತಿಂಗಳಿಗೆ ಅಂದಾಜು 881 ರೂ) ಮತ್ತು Android ಮತ್ತು iOS ಬಳಕೆದಾರರಿಗೆ € 12.99 (ತಿಂಗಳಿಗೆ ಅಂದಾಜು 1,146 ರೂ.) ರಷ್ಟು ಇರಲಿದೆ. ಯುರೋಪಿಯನ್ ಯೂನಿಯನ್, ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಈ ಯೋಜನೆಗಳು ಲಭ್ಯವಿರುತ್ತವೆ.


ಯುರೋಪಿಯನ್ ಬಳಕೆದಾರರು ಈ ಚಂದಾದಾರಿಕೆ ಯೋಜನೆಯನ್ನು ತೆಗೆದುಕೊಳ್ಳದಿದ್ದರೂ ಕೂಡ, ಅವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಉಚಿತ ಪ್ರವೇಶವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಹೌದು, ಬಳಕೆದಾರರು ಉಚಿತ ಪ್ರವೇಶದಲ್ಲಿ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ನೋಡಲಿದ್ದಾರೆ. ಆದಾಗ್ಯೂ, ಅವರು ಈ ಯೋಜನೆಯನ್ನು ತೆಗೆದುಕೊಂಡರೆ, ಅವರು ಫೆಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಂಪೂರ್ಣವಾಗಿ ಜಾಹೀರಾತು-ಮುಕ್ತ ಅನುಭವವನ್ನು ಪಡೆಯುತ್ತಾರೆ.


ಇದನ್ನೂ ಓದಿ-Whatsapp Channel ಸಂದೇಶಗಳನ್ನು ನೀವು ಇನ್ಮುಂದೆ ಎಡಿಟ್ ಮಾಡಬಹುದು!


ಕೆಲವು ಸಮಯದ ಹಿಂದೆ ಯುರೋಪಿಯನ್ ಒಕ್ಕೂಟವು ಮೆಟಾದ ಜಾಹೀರಾತು ಗುರಿಗಳು ಮತ್ತು ಡೇಟಾ ಸಂಗ್ರಹಣೆಗೆ ಸಂಬಂಧಿಸಿದಂತೆ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಏತನ್ಮಧ್ಯೆ, ಈಗ ಮೆಟಾ ಯುರೋಪಿಯನ್ ಬಳಕೆದಾರರಿಗಾಗಿ ಈ ಹೊಸ ಚಂದಾದಾರಿಕೆ ಯೋಜನೆಯೊಂದಿಗೆ ಬಂದಿದೆ. ಜಾಹೀರಾತುಗಳ ಮೂಲಕ ಡೇಟಾ ಸಂಗ್ರಹಣೆಯ ಬಗ್ಗೆ ಚಿಂತಿಸುತ್ತಿದ್ದ ಬಳಕೆದಾರರು ಈ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು-ಮುಕ್ತ ಅನುಭವವನ್ನು ಪಡೆಯಬಹುದು. ಇದರೊಂದಿಗೆ ಬಳಕೆದಾರರ ಡೇಟಾ ಕೂಡ ಸುರಕ್ಷಿತವಾಗಿರುತ್ತದೆ.


ಇದನ್ನೂ ಓದಿ-ರೂ.500ಕ್ಕೂ ಕಡಿಮೆ ಬೆಲೆಯ ಅದ್ಭುತ ರಿಚಾರ್ಜ್ ಯೋಜನೆ, ಏಕಕಾಲಕ್ಕೆ 15 ಓಟಿಟಿ ವೇದಿಕೆಗಳಿಗೆ ಉಚಿತ ಪ್ರವೇಶ!


ಪೈಡ್  ಪರಿಶೀಲಿಸಿದ ಬಳಕೆದಾರರಿಗೆ ಇನ್ಸ್ಟಾಗ್ರಾಮ್ ಹೊಸ ಫೀಡ್ ಅನ್ನು ತರುತ್ತಿದೆ!
ಇನ್‌ಸ್ಟಾಗ್ರಾಮ್ ಶೀಘ್ರದಲ್ಲೇ ತನ್ನ ಪಾವತಿಸಿದ ಚಂದಾದಾರರಿಗೆ ಹೊಸ ಫೀಡ್ ಅನ್ನು ತರಲಿದೆ ಎಂದು ಇತ್ತೀಚೆಗಷ್ಟೇ ವರದಿಯೊಂದರಲ್ಲಿ ಮಾಹಿತಿ ಸೋರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹೊಸ ಫೀಡ್‌ನ ಪರೀಕ್ಷೆ ನಡೆಯುತ್ತಿದೆ. ಪಾವತಿಸಿದ ಪರಿಶೀಲಿಸಿದ ಬಳಕೆದಾರರ ಪೋಸ್ಟ್‌ಗಳು ಮಾತ್ರ ಈ ಫೀಡ್‌ನಲ್ಲಿ ಗೋಚರಿಸಲಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ