ದೇಶದಲ್ಲಿ ಕಾರುಗಳಿಗಿಂತ ದ್ವಿಚಕ್ರ ವಾಹನಗಳು ಹೆಚ್ಚು ಮಾರಾಟವಾಗುತ್ತವೆ. ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಬೈಕ್‌ಗಾಗಿ ಹುಡುಕುತ್ತಿದ್ದಾರೆ. Hero MotoCorp ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. ಅದೇ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾಗುವ ಬೈಕ್ ಆಗಿ ಮುಂದುವರಿದಿದೆ. ಟಾಪ್ 10 ಮಾರಾಟವಾಗುವ ದ್ವಿಚಕ್ರ ವಾಹನಗಳಲ್ಲಿ ಈ ಒಂದೇ ಬೈಕು ಶೇಕಡಾ 26 ರಷ್ಟಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Hair Tips: ತೆಂಗಿನಎಣ್ಣೆಗೆ ಈ ಸೊಪ್ಪಿನ ರಸ ಬೆರೆಸಿ ತಲೆಗೆ ಹಚ್ಚಿ: ಕೆಲವೇ ದಿನಗಳಲ್ಲಿ ಮಾಯವಾಗುತ್ತೆ ಬಿಳಿ ಕೂದಲು!


Hero MotoCorp ಆಗಸ್ಟ್ 2022 ರಲ್ಲಿ ಹೆಚ್ಚು ಮಾರಾಟವಾದ ಬೈಕು ಆಗಿತ್ತು. ಕಳೆದ ತಿಂಗಳಲ್ಲಿ ಒಟ್ಟು 2,86,007 ಯುನಿಟ್‌ಗಳು ಮಾರಾಟವಾಗಿವೆ. 2021ರಲ್ಲಿ ಇದೇ ಅವಧಿಯಲ್ಲಿ 2,41,703 ಬೈಕ್‌ಗಳು ಮಾರಾಟವಾಗಿವೆ. ಈ ರೀತಿಯಾಗಿ, ಹೀರೋ ಸ್ಪ್ಲೆಂಡರ್ ವಾರ್ಷಿಕ ಮಾರಾಟದಲ್ಲಿ 18.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಹೋಂಡಾ ಸಿಬಿ ಶೈನ್ ಕಳೆದ ತಿಂಗಳು 1,20,139 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿದೆ.


ಬಜಾಜ್ ಪ್ಲಾಟಿನಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಇದಾಗಿದೆ. ಬಜಾಜ್ ಪ್ಲಾಟಿನಾ ಆಗಸ್ಟ್ 2022 ರಲ್ಲಿ 99,987 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದೇ ರೀತಿ ಬಜಾಜ್ ಪಲ್ಸರ್ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಹೀರೋ ಹೆಚ್ಎಫ್ ಡಿಲಕ್ಸ್ ಐದನೇ ಸ್ಥಾನದಲ್ಲಿದೆ. ಈ ಬೈಕ್‌ಗಳು ಆಗಸ್ಟ್ 2022 ರಲ್ಲಿ ಕ್ರಮವಾಗಿ 97,135 ಯುನಿಟ್ ಮತ್ತು 72,224 ಯುನಿಟ್‌ಗಳನ್ನು ಮಾರಾಟ ಮಾಡಿದೆ. 


ಇದನ್ನೂ ಓದಿ: Viral Video: ಸ್ನೇಕ್ ಬೋಟ್ ರೇಸ್‍ನಲ್ಲಿ ರಾಹುಲ್ ಗಾಂಧಿ ಭಾಗಿ


ಕಂಪನಿಯು ಹೀರೋ ಸ್ಪ್ಲೆಂಡರ್ ಅನ್ನು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ. ಇದರ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಮಾದರಿಯೆಂದರೆ ಹೀರೋ ಸ್ಪ್ಲೆಂಡರ್ ಪ್ಲಸ್. ಇದರ ಬೆಲೆ ರೂ 70,658 ರಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ, ದೆಹಲಿ). ಇದಲ್ಲದೆ, ಸೂಪರ್ ಸ್ಪ್ಲೆಂಡರ್, ಸ್ಪ್ಲೆಂಡರ್ ಇಸ್ಮಾರ್ಟ್, ಸ್ಪ್ಲೆಂಡರ್ + ಎಕ್ಸ್‌ಟೆಕ್‌ನಂತಹ ಮಾದರಿಗಳು ಸಹ ಕಂಪನಿಯಲ್ಲಿ ಲಭ್ಯವಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.