ಬೆಂಗಳೂರು : ಮಾರ್ಚ್ ತಿಂಗಳು ಆರಂಭವಾಗಿದೆಯಷ್ಟೇ. ರಾಜ್ಯದ ಕೆಲವು ಭಾಗದಲ್ಲಿ ಈಗಲೇ ಬಿಸಿಲು ನೆತ್ತಿ ಸುಡುತ್ತಿದೆ. ಇನ್ನು ಏಪ್ರಿಲ್ ಮೇ ಬಂದರೆ ಹೇಗೆ ಎನ್ನುವ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಬಿಸಿಲ ಧಗೆಯಿಂದ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜನರು ಕೂಲರ್‌ಗಳು ಮತ್ತು ಎಸಿಗಳತ್ತ ಮುಖ ಮಾಡುತ್ತಿದ್ದಾರೆ. ಹಲವು ಬಗೆಯ ಎಸಿಗಳು ಮಾರುಕಟ್ಟೆಗೆ ಬಂದಿವೆ. ಪೋರ್ಟಬಲ್ ಕೂಲರ್, ಮಿನಿ ಎಸಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.   ಇದೀಗ ಅತ್ಯಂತ ಅಗ್ಗದ ಮಿನಿ ಎಸಿ ಮಾರುಕಟ್ಟೆಗೆ ಕಾಲಿಟ್ಟಿದೆ.  ಈ ಅಗ್ಗದ ಮಿನಿ ಎಸಿ ಕೇವಲ ನಿಮಿಷಗಳಲ್ಲಿ ಕೋಣೆಯನ್ನು ತಂಪಾಗಿಸುತ್ತದೆ. 


COMMERCIAL BREAK
SCROLL TO CONTINUE READING

ಪೋರ್ಟಬಲ್ ಮಿನಿ ಎಸಿ :
ಬೇಸಿಗೆಯಲ್ಲಿ ಸದಾ ಏಸಿಯ ಕೆಳಗೆ ಕುಳಿತುಕೊಳ್ಳಬೇಕು ಅನ್ನಿಸುತ್ತಿರುತ್ತದೆ. ಆದರೆ ಎಸಿ ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ಎಶಿ ತುಸು ದುಬಾರಿ. ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ  ಈ ಪೋರ್ಟಬಲ್ ಮಿನಿ ಎಸಿಯನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುತ್ತದೆ. ಈ ಸಾಧನವನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ  ಖರೀದಿಸಬಹುದು. ಈ ಮಿನಿ ಎಸಿ 400 ರೂಪಾಯಿಯಿಂದ ಆರಂಭವಾಗುತ್ತದೆ.  ಸುಮಾರು  2 ಸಾವಿರ ರೂ.ವರೆಗಿನ ಮಿನಿ ಎಸಿ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. 


ಇದನ್ನೂ ಓದಿ :  ಅದ್ಭುತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ ಹೊಸ ಲ್ಯಾಪ್‌ಟಾಪ್


ಕಡಿಮೆ ವೆಚ್ಚದಲ್ಲಿ ಸಿಗುವುದು ತಂಪು ಗಾಳಿ : 
ಮಿನಿ ಎಸಿಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಮುಖ ಆಯ್ಕೆಗಳು ಲಭ್ಯವಿವೆ. ಇಲ್ಲಿ ನೀವು ನಿಮಗೆ ಬೇಕಾದ ಮಿನಿ ಎಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಈ ಮಿನಿ ಎಸಿಗೆ ಕೇವಲ ಒಂದು ಲೀಟರ್ ನೀರು ಬೇಕಾಗುತ್ತದೆ. ಇದಲ್ಲದೆ, ಐಸ್ ಅನ್ನು ಸಹ ಬಳಸಬಹುದು. ವಿಶೇಷವೆಂದರೆ ಇದಕ್ಕೆ ವಿದ್ಯುತ್‌ನ ಅಗತ್ಯ ಕೂಡಾ ಇಲ್ಲ.   ಚಾರ್ಜ್ ಮಾಡುವ ಮೂಲಕ ಅದನ್ನು ಚಲಾಯಿಸಬಹುದು. ಒಮ್ಮೆ ಚಾರ್ಜ್ ಮಾಡಿದರೆ  3 ರಿಂದ 5 ಗಂಟೆಗಳ ಕಾಲ  ಉಪಯೋಗಿಸಬಹುದು. ಲೋ, ಮೀಡಿಯಂ, ಹೈ ಎನ್ನುವ ಮೂರು ಮೋಡ್ ಗಳಲ್ಲಿ ಈ ಎಸಿ ಲಭ್ಯವಿದೆ. 


ಇದನ್ನೂ ಓದಿ :  ಏರ್‌ಟೆಲ್-ಜಿಯೋಗೆ ಟಕ್ಕರ್ ನೀಡಿ ಅದ್ಭುತ ಪ್ಲಾನ್ ಬಿಡುಗಡೆ ಮಾಡಿದ ವೊಡಾಫೋನ್ ಐಡಿಯಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.