Aadhaar Card ಕಳೆದು ಹೋಗಿದೆಯೇ? ಕೇವಲ 1 SMS ಮೂಲಕ ಮಾಡಿ ಈ ಕೆಲಸ
ನೀವು ಆಧಾರ್ ಕಾರ್ಡ್ ಕಳೆದುಕೊಂಡರೆ, ಚಿಂತೆ ಮಾಡುವ ಅಗತ್ಯವಿಲ್ಲ. ನೀವು ಇರುವಲ್ಲಿಯೇ ಒಂದೇ ಒಂದು ಸಂದೇಶದ ಮೂಲಕ ನೀವು ಅದನ್ನು ನಿರ್ಬಂಧಿಸಬಹುದು.
ನವದೆಹಲಿ: ಆಧಾರ್ ಕಾರ್ಡ್ ಇಂದು ನಮ್ಮೆಲ್ಲರಿಗೂ ಅತ್ಯಗತ್ಯ ದಾಖಲೆಯಾಗಿದೆ. ಇಂದು, ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಸಿಮ್ ಕಾರ್ಡ್ ಖರೀದಿಸುವವರೆಗೆ ಪ್ರತಿ ಸಣ್ಣ ಸಣ್ಣ ಕೆಲಸಕ್ಕೂ ಆಧಾರ್ ಸಂಖ್ಯೆ ಅಗತ್ಯವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ. ಆದರೆ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ.
ಹೌದು, ಆಧಾರ್ ಕಾರ್ಡ್ (Aadhaar Card) ಮುಖ್ಯ ದಾಖಲೆಯಾಗಿದೆ. ಹಾಗಾಗಿ ಅದು ಕಳೆದು ಹೋದಲ್ಲಿ ಯಾರೇ ಆದರೂ ಚಿಂತೆಗೀಡಾಗುವುದು ಸರ್ವೇ ಸಾಮಾನ್ಯ. ಆದರೆ ಅಂತಹ ಸಂದರ್ಭದಲ್ಲಿ ನೀವು ಚಿಂತಿಸುವ ಬದಲಿಗೆ ಈ ಒಂದು ಕೆಲಸ ಮಾಡಿ ನಿಮ್ಮ ವೈಯಕ್ತಿಕ ಡೇಟಾ ಸೋರಿಕೆಯಾಗುವ ಅಪಾಯವನ್ನು ತಡೆಯಬಹುದು. ಆಧಾರ್ ಕಾರ್ಡ್ ಕಳೆದುಹೋದರೆ ನೀವು ಇರುವಲ್ಲಿಯೇ ಒಂದೇ ಒಂದು ಸಂದೇಶ ಕಳುಹಿಸುವ ಮೂಲಕ ನೀವು ಅದನ್ನು ನಿರ್ಬಂಧಿಸಬಹುದು.
ಇದನ್ನೂ ಓದಿ - PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..!
ಕಳೆದುಹೋದ ಆಧಾರ್ ಕಾರ್ಡ್ ಅನ್ನು ಹೇಗೆ ನಿರ್ಬಂಧಿಸಬೇಕು?
>> ಆಧಾರ್ ಕಾರ್ಡ್ ಕಳೆದುಹೋದರೆ, ಮೊದಲು ಅದನ್ನು ನಿರ್ಬಂಧಿಸುವುದು ಮುಖ್ಯ ಮತ್ತು ನಿರ್ಬಂಧಿಸಲು ನೀವು ಕೇವಲ ಒಂದು ಸಂಖ್ಯೆಗೆ ಸಂದೇಶ ಕಳುಹಿಸಬೇಕಾಗುತ್ತದೆ.
>> ಆಧಾರ್ ಕಾರ್ಡ್ ಅನ್ನು ನಿರ್ಬಂಧಿಸಲು, ನಿಮ್ಮ ನೋಂದಾಯಿತ ಸಂಖ್ಯೆಯಿಂದ 1947 ಗೆ GETOTP ಎಂದು ಬರೆಯುವ ಮೂಲಕ ನೀವು SMS ಕಳುಹಿಸಬೇಕು. ಇದರ ನಂತರ, ನಿಮ್ಮ ಸಂಖ್ಯೆಗೆ ಒಟಿಪಿ ಬರುತ್ತದೆ.
>> ಈ ಒಟಿಪಿಯನ್ನು 1947 ಸಂಖ್ಯೆಗೆ 'LOCKUID ಆಧಾರ್ ಸಂಖ್ಯೆ' ಎಂದು ಬರೆಯುವ ಮೂಲಕ ಮತ್ತೆ ಸಂದೇಶ ಕಳುಹಿಸಬೇಕು. ನೀವು ಈ ಸಂದೇಶಗಳನ್ನು ಕಳುಹಿಸಿದ ಕೂಡಲೇ ನಿಮ್ಮ ಆಧಾರ್ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತದೆ. ಅದನ್ನು ಯಾರೂ ತಪ್ಪಾಗಿ ಬಳಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ - Aadhaar Card : 'ಆಧಾರ್ ಕಾರ್ಡ್'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ
ಆಧಾರ್ ಕಾರ್ಡ್ ಅನ್ನು ಅನ್ಲಾಕ್ ಮಾಡುವುದು ಹೇಗೆ?
ಒಂದೊಮ್ಮೆ ನಿಮ್ಮ ಕಳೆದುಹೋದ ಆಧಾರ್ ಕಾರ್ಡ್ ಸಿಕ್ಕಾಗ ನಿಮ್ಮ ಲಾಕ್ ಮಾಡಿರುವ ಆಧಾರ್ ಕಾರ್ಡ್ ಅನ್ನು ಅನ್ಲಾಕ್ ಮಾಡಬಹುದು.
>> ಇದಕ್ಕಾಗಿ, ನಿಮ್ಮ ರಿಜಿಸ್ಟರ್ ಸಂಖ್ಯೆಯಿಂದ ನಿಮ್ಮ ಆಧಾರ್ ನಂಬರ್ ಬರೆದು GETOTP ಎಂದು 1947 ಗೆ ಸಂದೇಶ ಕಳುಹಿಸಬೇಕು.
>> ಇದರ ನಂತರ ನೀವು ಒಟಿಪಿಯನ್ನು ಸ್ವೀಕರಿಸುತ್ತೀರಿ. ಬಳಿಕ UNLOCKUID ಆಧಾರ್ ಸಂಖ್ಯೆ ಮತ್ತು ಒಟಿಪಿ ಬರೆಡು ಮತ್ತೆ 1947 ಗೆ ಸಂದೇಶವನ್ನು ಕಳುಹಿಸಬೇಕಾಗುತ್ತದೆ. >> ಇದರ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಅನ್ಲಾಕ್ ಮಾಡಲಾಗುತ್ತದೆ.
ಗಮನಿಸಿ: ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು ಅಥವಾ ಅನ್ಲಾಕ್ ಮಾಡಲು ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ಬಳಸಬೇಕಾಗುತ್ತದೆ ಎಂದು ನೀವು ನೆನಪಿಡಿ. ಏಕೆಂದರೆ ನೋಂದಾಯಿತ ಸಂಖ್ಯೆಯಲ್ಲಿ ಒಟಿಪಿ ಸ್ವೀಕರಿಸಲಾಗುವುದು. ಈ ಒಟಿಪಿ ಸಂಖ್ಯೆಯನ್ನು ಬಳಸಿ ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡಬಹುದು ಅಥವಾ ಅನ್ಲಾಕ್ ಮಾಡಬಹುದು. ಇದಲ್ಲದೆ ಆಧಾರ್ ಗೆ ಸಂಬಂಧಿಸಿದ ಅಧಿಸೂಚನೆಯನ್ನು ಸಹ ನೀವು ಪಡೆಯುತ್ತೀರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.