ಬೆಂಗಳೂರು :  Motorola Moto G42 ನ ಮೊದಲ ಮಾರಾಟ ಇಂದು ಭಾರತದಲ್ಲಿ ಪ್ರಾರಂಭವಾಗಲಿದೆ. ಫೋನ್ ಅನ್ನು ಕಳೆದ ತಿಂಗಳಷ್ಟೇ ಜಾಗತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಇಂದಿನಿಂದ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.  ಇದು Qualcomm Snapdragon 680 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಅಂದರೆ ಇದು 5G ಅನ್ನು  ಸಪೋರ್ಟ್ ಮಾಡುವುದಿಲ್ಲ.  ಭಾರತದಲ್ಲಿ Moto G42 ಬೆಲೆ,  ಫೋನ್ ಮೇಲಇನ ಆಫರ್ ಮತ್ತು ವೈಶಿಷ್ಟ್ಯಗಳನ್ನು  ನೋಡೋಣ. 


COMMERCIAL BREAK
SCROLL TO CONTINUE READING

Moto G42 ಮೊದಲ ಮಾರಾಟದ ವಿವರಗಳು ಮತ್ತು ಕೊಡುಗೆಗಳು :
Moto G42 ಇಂದು ಮಧ್ಯಾಹ್ನ 12:00 ಗಂಟೆಗೆ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತದೆ.  SBI ಕ್ರೆಡಿಟ್ ಕಾರ್ಡ್ ಬಳಸಿದರೆ ಪ್ರತಿ ಖರೀದಿಯ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ.  ಇದಲ್ಲದೆ, Moto G42 ಖರೀದಿದಾರರು Zee5 ವಾರ್ಷಿಕ ಚಂದಾದಾರಿಕೆಯಲ್ಲಿ 549 ರೂ.ಗಳ ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 4 ಆಪ್‌ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ


ಭಾರತದಲ್ಲಿ Moto G42 ಬೆಲೆ : 
Moto G42 ಕೇವಲ ಒಂದು ಕಾನ್ಫಿಗರೇಶನ್‌ನಲ್ಲಿ ಬರುತ್ತದೆ. 4GB + 64GBಯ ಬೆಲೆ 13,999 ರೂ. ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿದರೆ ಸಾವಿರ್ ರೂಪಾಯಿಗಳ ರಿಯಾಯಿತಿಯೊಂದಿಗೆ ಫೋನ್‌ನ ಬೆಲೆ 12,999 ರೂ. ಆಗಿರಲಿದೆ. ಈ ಫೋನ್‌ನಲ್ಲಿ 12,500 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡಾ ಇದೆ. ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡಾಗ ಇಷ್ಟು ರಿಯಾಯಿತಿ ಪಡೆಯಬಹುದು. 12,500 ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾದರೆ ಈ  ಫೋನ್ ಅನ್ನು ಕೇವಲ   499 ರೂ.ಗೆ ಖರೀದಿಸಬಹುದು. 


Moto G42 ವಿಶೇಷಣಗಳು : 
Moto G42 2400×1080 ಪಿಕ್ಸೆಲ್ ರೆಸಲ್ಯೂಶನ್, 409ppi ಪಿಕ್ಸೆಲ್ ಡೆನ್ಸಿಟಿ  ಮತ್ತು 20:9  ಆಸ್ಪೆಕ್ಟ್ ರೇಶಿಯೋನೊಂದಿಗೆ 6.4-ಇಂಚಿನ ಫುಲ್  HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ ಪ್ಯಾನಲ್ ಕೇಂದ್ರಿತ ಪಂಚ್ ಹೋಲ್ ನಾಚ್‌ನೊಂದಿಗೆ ಬರುತ್ತದೆ. Moto G42 ಆಕ್ಟಾ-ಕೋರ್ Qualcomm Snapdragon 680 ಪ್ರೊಸೆಸರ್ ಅನ್ನು ಹೊಂದಿದೆ. 


ಇದನ್ನೂ ಓದಿ : Flipkart ಸಿಗುತ್ತಿರುವ ಈ ಕೊಡುಗೆ ಮತ್ತೆ ಸಿಗಲ್ಲ, ಕೇವಲ ರೂ.149ಕ್ಕೆ ಖರೀದಿಸಿ ರಿಯಲ್ ಮೀ ಕಂಪನಿಯ ಈ ಜಬರ್ದಸ್ತ್ ಸ್ಮಾರ್ಟ್ ಫೋನ್


Moto G42 ಕ್ಯಾಮೆರಾ : 
Moto G42 ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡುತ್ತದೆ. ಅದು 50MP ಪ್ರಾಥಮಿಕ ಶೂಟರ್ ಅನ್ನು ಒಳಗೊಂಡಿದೆ. Moto G42ನಲ್ಲಿನ ಹೆಚ್ಚಿನ-ರೆಸಲ್ಯೂಶನ್ ಸೆನ್ಸಾರ್ ಜೊತೆಗೆ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಪಡೆಯುತ್ತದೆ. ಹಿಂಭಾಗದಲ್ಲಿ 2MP ಮ್ಯಾಕ್ರೋ ಸೆನ್ಸಾರ್ ಮತ್ತು LED ಫ್ಲ್ಯಾಷ್ ಕೂಡ ಇದೆ. ಇದು ಸೆಲ್ಫಿಗಾಗಿ 16MP ಫ್ರಂಟ್ ಶೂಟರ್ ಅನ್ನು ಹೊಂದಿದೆ.


Moto G42 ಬ್ಯಾಟರಿ :
Moto G42 5000mAh ಬ್ಯಾಟರಿ ಘಟಕ ಮತ್ತು 20W TurboPower ವೇಗದ ಚಾರ್ಜಿಂಗ್ ಬೆಂಬಲವನ್ನು ಪ್ಯಾಕ್ ಮಾಡುತ್ತದೆ. ಸಾಧನವು ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ರೆಸೆರ್ವ್ದ್ ಮೈಕ್ರೊ-ಎಸ್‌ಡಿ ಕಾರ್ಡ್ ಸ್ಲಾಟ್, 3.5 ಎಂಎಂ ಆಡಿಯೊ ಜಾಕ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಸಹ ಹೊಂದಿದೆ.  Moto G42 ಅಟ್ಲಾಂಟಿಕ್ ಗ್ರೀನ್ ಮತ್ತು ಮೆಟಾಲಿಕ್ ರೋಸ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಡ್ಯುಯಲ್-ಸಿಮ್ 4G, ವೈಫೈ 802.11 a/b/g/n/ac, ಬ್ಲೂಟೂತ್ 5.0, NFC, GPS, ಗ್ಲೋನಾಸ್ ಮತ್ತು ಗೆಲಿಲಿಯೋವನ್ನು ಹೊಂದಿರುತ್ತದೆ. 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.