Motorola Moto G75 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.ಕಂಪನಿಯು ತನ್ನ ಯುರೋಪಿಯನ್ ವೆಬ್‌ಸೈಟ್‌ನಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ Moto G75 ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್ ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ.Moto G75 ನ ಬೆಲೆ, ವೈಶಿಷ್ಟ್ಯಗಳು ಮತ್ತು ಸಂಪೂರ್ಣ ವಿಶೇಷಣ ಹೀಗಿದೆ. 


COMMERCIAL BREAK
SCROLL TO CONTINUE READING

Moto G75 ಬೆಲೆ : 
Moto G75 5G ಯುರೋಪ್‌ನಲ್ಲಿCZK 8,999 (ಅಂದಾಜು ರೂ 33,317.14) ಗೆ ಲಭ್ಯವಿದೆ.ಇದು ನವೆಂಬರ್ 5 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.ಆದರೆ ಈ ಫೋನ್ ಚೀನಾ ಮತ್ತು ಬಹುಶಃ ಭಾರತದ ಮಾರುಕಟ್ಟೆಗೂ ಸದ್ಯದಲ್ಲಿಯೇ ಕಾಲಿಡಲಿದೆ ಎನ್ನಲಾಗಿದೆ. 


ಇದನ್ನೂ ಓದಿ : ಕೇವಲ 7 ರೂಪಾಯಿಗಳ ದೈನಂದಿನ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ನೀಡಿದ ಬಿ‌ಎಸ್‌ಎಲ್‌ಎನ್


Moto G75 ವಿನ್ಯಾಸ : 
Moto G75 ಫೋನ್ ಸರಳವಾಗಿ ಕಾಣುತ್ತದೆ. ಅಂಚುಗಳು ಸಮತಟ್ಟಾಗಿದ್ದು,ಸ್ಕ್ರೀನ್  ಕೂಡಾ ಫ್ಲಾಟ್ ಆಗಿದೆ.ಇದು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದ್ದು ಮುಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ.ಇದನ್ನು ಬೂದು, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದು. ಫೋನ್ ಚಾರ್ಜ್ ಮಾಡಲು USB-C ಪೋರ್ಟ್ ಅನ್ನು ನೀಡಲಾಗಿದೆ. ಆದರೆ ಹೆಡ್‌ಫೋನ್ ಜ್ಯಾಕ್ ಇಲ್ಲ.ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಕಾರ್ಯನಿರ್ವಹಿಸುವ ಎರಡು ಸ್ಪೀಕರ್‌ಗಳನ್ನು ಹೊಂದಿದೆ.ಬೂದು ಬಣ್ಣದ ಫೋನ್‌ನ ತೂಕ 205 ಗ್ರಾಂ ಮತ್ತು ಹಸಿರು (ವೆಗಾನ್ ಲೆದರ್) ಬಣ್ಣದ ಫೋನ್ ತೂಕ 208 ಗ್ರಾಂ. 


Moto G75 ವಿಶೇಷಣಗಳು : 
Moto G75 ದೊಡ್ಡ 6.78 ಇಂಚಿನ LCD ಪರದೆಯನ್ನು ಹೊಂದಿದೆ. ಅದರ ಚಿತ್ರಗಳು ತುಂಬಾ ಸ್ಪಷ್ಟವಾಗಿ ಕಾಣುತ್ತವೆ.ಈ ಪರದೆಯು 120 Hz ವೇಗದಲ್ಲಿ ರಿಫ್ರೆಶ್ ಆಗುತ್ತದೆ ಮತ್ತು ತುಂಬಾ ಪ್ರಕಾಶಮಾನವಾಗಿರುತ್ತದೆ.ಈ ಫೋನಿನ ಟಚ್ ನೀರಿನಲ್ಲೂ ಕೆಲಸ ಮಾಡುತ್ತದೆ. Motorola ಈ ಫೋನ್‌ಗಾಗಿ 5 ವರ್ಷಗಳ ಹೊಸ ಸಾಫ್ಟ್‌ವೇರ್ ಅಪ್ಡೇಟ್  ಮತ್ತು 6 ವರ್ಷಗಳ ಭದ್ರತಾ ಅಪ್ಡೇಟ್ ಗಳನ್ನೂ ನೀಡುತ್ತದೆ. 


ಇದನ್ನೂ ಓದಿ : ಗ್ಯಾಸ್ ಮೇಲಿಟ್ಟ ಹಾಲು ಉಕ್ಕಿ ಚೆಲ್ಲಬಾರದು ಎಂದಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ !ಎಷ್ಟೇ ಹೊತ್ತಾದರೂ ಹಾಲು ಪಾತ್ರೆಯಿಂದ ಚೆಲ್ಲುವುದಿಲ್ಲ


ಈ ಫೋನ್ Snapdragon 6 Gen 3 ಚಿಪ್ ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ.ಈ ಚಿಪ್ ಹಿಂದಿನ Snapdragon 6 Gen 1 ಚಿಪ್‌ಗಿಂತಲೂಫಾಸ್ಟ್ ಆಗಿದೆ. ಇದು 8GB RAM ಮತ್ತು 256GB ಸ್ಟೋರೇಜ್ ಅನ್ನು ಹೊಂದಿದೆ.ಮೆಮೊರಿ ಕಾರ್ಡ್ ಅನ್ನು ಸೇರಿಸುವ ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಬಹುದು.  


ಈ ಫೋನ್ 5,000mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ.ಅದನ್ನು 30 ವ್ಯಾಟ್‌ಗಳ ವೇಗದಲ್ಲಿ ಮತ್ತು ವೈರ್‌ಲೆಸ್‌ನಲ್ಲಿ 15 ವ್ಯಾಟ್‌ಗಳ ವೇಗದಲ್ಲಿ ಚಾರ್ಜ್ ಮಾಡಬಹುದು. ಫೋನ್‌ನ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ.50MP ಮೇನ್ ಕ್ಯಾಮೆರಾ ಸೋನಿ  ಸೆನ್ಸಾರ್ ಹೊಂದಿದ್ದು, OIS ಎಂಬ ವೈಶಿಷ್ಟ್ಯವನ್ನು ಹೊಂದಿದೆ.ಎರಡನೇಯದ್ದು 8MP ಅಲ್ಟ್ರಾವೈಡ್ ಕ್ಯಾಮೆರಾ.ಮೂರನೇಯದ್ದು ಮ್ಯಾಕ್ರೋ ಕ್ಯಾಮೆರಾ.ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.