Reliance 5G Service: ರಿಲಯನ್ಸ್ ಜಿಯೋ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತನ್ನ 5ಜಿ ಸೇವೆ ಬಿಡುಗಡೆಯನ್ನು ಆರಂಭಿಸಿತ್ತು ಮತ್ತು ಪ್ರಸ್ತುತ 50ಕ್ಕೂ ಹೆಚ್ಚು ನಗರಗಳಲ್ಲಿ ಇದೀಗ 5ಜಿ ಸೇವೆಯನ್ನು ಕಂಪನಿ ಒದಗಿಸುತ್ತಿದೆ. ಇಲ್ಲಿ ಸಂತಸದ ವಿಷಯ ಎಂದರೆ ಮುಂದಿನ ವರ್ಷ ದೇಶಾದ್ಯಂತದ ಜಿಯೋ ಬಳಕೆದಾರರಿಗೆ 5ಜಿ ಸೇವೆಯ ಲಾಭ ಸಿಗಲಿದೆ ಮತ್ತು ಕಂಪನಿ ಪ್ಯಾನ್ ಇಂಡಿಯಾ ರೊಲ್ ಔಟ್ ಗುರಿಯನ್ನು ಸಾಧಿಸಲಿದೆ.

COMMERCIAL BREAK
SCROLL TO CONTINUE READING

ದೇಶಾದ್ಯಂತ 5ಜಿ ಸೇವೆಯ ರೊಲ್ ಔಟ್ ಪ್ರಕ್ರಿಯೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ ಅಂಬಾನಿ ನೀಡಿದ್ದಾರೆ. ಕಂಪನಿಯ ಕುಟುಂಬ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ' ಜಿಯೋ ಕಂಪನಿಯ 5ಜಿ ರೊಲ್ ಔಟ್ ವರ್ಷ 2023 ರಲ್ಲಿ ಪೂರ್ಣಗೊಳ್ಳಲಿದೆ ಮತ್ತು ಡಿಜಿಟಲ್ ಕನೆಕ್ಟಿವಿಟಿ ಉದ್ಯಮದಲ್ಲಿ ನಂಬರ್ 1 ಪಟ್ಟ ಸಾಧನೆಯ ಪ್ರಯುಕ್ತ ಇಡೀ ಜಿಯೋ ತಂಡಕ್ಕೆ ನನ್ನ ಅಭಿನಂದನೆಗಳು' ಎಂದಿದ್ದಾರೆ.


ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಅಂತರ ಕಡಿಮೆಯಾಗಲಿದೆ
ಈ ಸಂದರ್ಭದಲ್ಲಿ 5ಜಿ ಸಂಪರ್ಕಕ್ಕೆ ಒತ್ತು ನೀಡಿ ಮಾತನಾಡಿದ ಮುಕೇಶ್ ಅಂಬಾನಿ, ಕಂಪನಿ ತನ್ನ 5ಜಿ ಸೇವೆಯ ಜೊತೆಗೆ ನಗರ ಹಾಗೂ ಗ್ರಾಮೀಣ ಕ್ಷೇತ್ರಗಳ ನಡುವಿನ ಅಂತರವನ್ನು ತೊಡೆದುಹಾಕಲಿದೆ ಹಾಗೂ ಎಲ್ಲಾ ಬಳಕೆದಾರರಿಗೆ ಒಂದೇ ರೀತಿಯ ಇಂಟರ್ನೆಟ್ ಸೇವೆಗಳನ್ನು ನೀಡಲಿದೆ. 5ಜಿ ಇಂಟರ್ನೆಟ್ ಸೇವೆಯ ಸಹಾಯದಿಂದ ಎಲ್ಲಾ ಬಳಕೆದಾರರಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಆರೋಗ್ಯ ಸೇವೆಗಳು ಹಾಗೂ ಇತರ ಸೌಕರ್ಯಗಳು ಸಿಗಲಿವೆ.


ಇದನ್ನೂ ಓದಿ-Viral News: MRI Machine ನಲ್ಲಿ ರೋಮಾನ್ಸ್ ಮಾಡಿದ ಜೋಡಿ! ಭಾರಿ ವೈರಲ್ ಆದ ಸ್ಕ್ಯಾನ್ ಚಿತ್ರಗಳು

ಭಾರತೀಯ ಬಳಕೆದಾರರಿಗೆ ಎಲ್ಲಕ್ಕಿಂತ ಉತ್ತಮ ಸೇವೆ ಒದಗಿಸಲು ಪ್ರಮಾಣ
ಈ ಸಂದರ್ಭದಲ್ಲಿ ಪ್ರಮಾಣ ಮಾಡಿರುವ ಮುಕೇಶ್ ಅಂಬಾನಿ, ಮುಂದಿನ ವರ್ಷ ಪ್ರತಿ ಹಳ್ಳಿಗಳ ವರೆಗೆ 5ಜಿ ಕನೆಕ್ಟಿವಿಟಿ ತಲುಪಿಸಲಾಗುವುದು ಹಾಗೂ ದೀರ್ಘಾವಧಿಯಿಂದ ನಡೆದುಕೊಂಡು ಬಂದ ನಗರ ಹಾಗೂ ಗ್ರಾಮೀಣ ಅಂತರವನ್ನು ತೆಗೆದುಹಾಕಲಾಗುವುದು. ಜಿಯೋ ಕಂಪನಿಯ ಬಳಿ ಇದಕ್ಕಾಗಿ ಒಂದು ದೊಡ್ಡ ಅವಕಾಶವಿದ್ದು, ಎಲ್ಲಾ ನಾಗರಿಕರಿಗೆ ಯುನಿಕ್ ಡಿಜಿಟಲ್ ಉತ್ಪನ್ನಗಳು ಹಾಗೂ ಸೌಕರ್ಯಗಳು ಇರಲಿವೆ. ಅವುಗಳನ್ನು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಭಾಗವನ್ನಾಗಿಸಲಾಗುವುದು.


ಇದನ್ನೂ ಓದಿ-Electric Bill Saver: 333 ರೂ.ಬೆಲೆಯ ಈ ಉಪಕರಣದ ಅಳವಡಿಸಿ ವಿದ್ಯುತ್ ಉಚಿತವಾಗಿ ಬಳಸಿ!


ದೇಶದ ಈ ನಗರಗಳಲ್ಲಿ ಸಿಗುತ್ತಿದೆ ಜಿಯೋ 5ಜಿ ಇಂಟರ್ನೆಟ್ ಸ್ಪೀಡ್
ರಿಲಯನ್ಸ್ ಜಿಯೋ ವತಿಯಿಂದ ಪ್ರಸ್ತುತ 5ಜಿ ಇಂಟರ್ನೆಟ್ ಸ್ಪೀಡ್ ಲಾಭವನ್ನು ಪಡೆದುಕೊಳ್ಳುತ್ತಿರುವ ನಗರಗಳಲ್ಲಿ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರೀದಾಬಾದ್, ದೆಹಲಿ ಎನ್ಸಿಆರ್ ಜೊತೆಗೆ ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ನಾಥದ್ವಾರಾ ಶಾಮೀಲಾಗಿವೆ. ಇತ್ತೀಚೆಗಷ್ಟೇ ಕಂಪನಿ ಲಖನೌಮ್ ಮೈಸೂರು ಹಾಗೂ ತ್ರಿವೆಂದ್ರಂ ಸೇರಿದಂತೆ 11 ಹೊಸ ನಗರಗಳಲ್ಲಿ ತನ್ನ 5ಜಿ ಸೇವೆಯನ್ನು ಬಿಡುಗಡೆಗೊಳಿಸಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.