ಬೆಂಗಳೂರು : ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಇಂದು ಕೂಡಾ ಅನೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.ಮಳೆಗಾಲದಲ್ಲಿ ಬೆಲೆಬಾಳುವ ಕೆಲವು ವಸ್ತುಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಮಾಹಿತಿ ಇರಬೇಕು.ಹಾಗಾಗಿ ಮಾನ್ಸೂನ್ ಸಮಯದಲ್ಲಿ ನಿಮ್ಮ ಬಳಿ ಇರಲೇಬೇಕಾದ ಕೆಲವು ವಸ್ತುಗಳಿವೆ. 


COMMERCIAL BREAK
SCROLL TO CONTINUE READING

​​ಛತ್ರಿ : 
ಆನ್‌ಲೈನ್‌ನಲ್ಲಿ ಅನೇಕ ರೀತಿಯ ಛತ್ರಿಗಳನ್ನು ಖರೀದಿಸಬಹುದು.ಒಂದಕ್ಕಿಂತ ಒಂದು ಸುಂದರ ಎನ್ನುವಂಥಹ ಛತ್ರಿಗಳು ಮಾರುಕಟ್ಟೆಯಲ್ಲಿ ಬಂದಿವೆ.ಇತ್ತೀಚಿನ ದಿನಗಳಲ್ಲಿ  ನಿಭಾಯಿಸಲು ಸುಲಭವಾದ ಛತ್ರಿಗಳು ಎಲ್ಲರ ಮೊದಲ ಆಯ್ಕೆಯಾಗಿರುತ್ತವೆ. ಅಂದರೆ ಕೊಂಡೊಯ್ಯಲು ಸುಲಭವಾಗಬೇಕು.ಇದನ್ನು ಸುಲಭವಾಗಿ ಪಾಕೆಟ್ ನಲ್ಲಿ ಇರಿಸಿಕೊಳ್ಳುವುದು ಸಾಧ್ಯವಾಗುತ್ತದೆ.ಈ ಛತ್ರಿಯನ್ನು  ಮುಚ್ಚಿದರೆ ಬಾಳೆಹಣ್ಣಿನ ರೂಪ ಪಡೆಯುತ್ತದೆ.ಅಂದರೆ ಮುಚ್ಚಿದಾಗ ಛತ್ರಿ 10 ಇಂಚು ಮತ್ತು ತೆರೆದಾಗ 35 ಇಂಚು ಇರುತ್ತದೆ. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯಲಿದೆ.


ಇದನ್ನೂ ಓದಿ : ನಿಮ್ಮ ಬಳಿ ಇರುವ ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮ


ವಾಟರ್ ಪ್ರೂಫ್ ಮೊಬೈಲ್  ಬ್ಯಾಗ್ : 
ಮಳೆಯ ಸಮಯದಲ್ಲಿ, ನೀರಿನ ಕಾರಣದಿಂದ ಫೋನ್ ಹೆಚ್ಚು ಹಾಳಾಗುತ್ತದೆ. ಆದರೆ ಇದಕ್ಕೂ ಪರಿಹಾರವಿದೆ.200ಕ್ಕಿಂತ ಕಡಿಮೆ ಬೆಲೆಗೆ ಮೊಬೈಲ್ ವಾಟರ್ ಪ್ರೂಫ್ ಪೌಚ್ ಖರೀದಿಸಿದರೆ ಮಳೆಗಾಲದಲ್ಲೂ ಫೋನ್ ಹಾಳಾಗುವುದಿಲ್ಲ.


ವಾಟರ್ ಪ್ರೂಫ್ ಲ್ಯಾಪ್ಟಾಪ್ ಬ್ಯಾಗ್ :
ಮಳೆಯಲ್ಲೇ ಕಚೇರಿಗೆ ತೆರಳುವವರಿಗೂ ಲ್ಯಾಪ್ ಟಾಪ್ ಚಿಂತೆ ಕಾಡುತ್ತಿದೆ. ನಿಮ್ಮ ಲ್ಯಾಪ್‌ಟಾಪ್ ಅನ್ನು ಮಳೆಯಿಂದ ರಕ್ಷಿಸಲು ಬಯಸಿದರೆ ವಾಟರ್ ಪ್ರೂಫ್  ಲ್ಯಾಪ್‌ಟಾಪ್ ಬ್ಯಾಗ್ ಅನ್ನು ಬಳಸಬೇಕು. ಆನ್‌ಲೈನ್ ಮಾರುಕಟ್ಟೆಯಲ್ಲಿ ನಿಮಗೆ 400 ರಿಂದ ಸಾವಿರ ರೂಪಾಯಿಗಳ ನಡುವೆ ಉತ್ತಮ ಬ್ಯಾಗ್ ಸಿಗುತ್ತದೆ.


ಪವರ್ ಬ್ಯಾಂಕ್ : 
ಮಳೆಗಾಲದಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬಳಿ ಪವರ್ ಬ್ಯಾಂಕ್ ಅನ್ನು ಹೊಂದಿರಬೇಕು. ಹೀಗಾಗಿ ನಿಮ್ಮ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುವಂತೆ ನಿಮ್ಮ ಬಾಲಿ ಪವರ್ ಬ್ಯಾಂಕ್ ಇರಬೇಕು.1000 ಮತ್ತು 2000 ರೂ.ಗಳ ನಡುವೆ ಉತ್ತಮ ಪವರ್ ಬ್ಯಾಂಕ್ ಅನ್ನು ಪಡೆಯಬಹುದು.


ಇದನ್ನೂ ಓದಿ :  Royal Enfield : ಸದ್ಯದಲ್ಲೇ ಬರಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್, ಲಾಂಚ್ ಯಾವಾಗ?


ಟಾರ್ಚ್ : 
ಮಳೆಯ ಸಮಯದಲ್ಲಿ ಟಾರ್ಚ್ ಹೊಂದುವುದು ಕೂಡಾ ಮುಖ್ಯವಾಗಿದೆ.ಹೆಚ್ಚು ಬೆಳಕು ಚೆಲ್ಲುವ ಟಾರ್ಚ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ನಿಮ್ಮ ಬಳಿ ಟಾರ್ಚ್ ಇರುವುದು ಅಗತ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.