ನಿಮ್ಮ ಬಳಿ ಇರುವ ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮ

ಹೊಸ ಸಿಮ್‌ನೊಂದಿಗೆ ಬದಲಾಯಿಸಿದ್ದರೆ, ಮುಂದಿನ 7 ದಿನಗಳವರೆಗೆ ಆ ಸಂಖ್ಯೆಯನ್ನು ಬೇರೆ ಕಂಪನಿಗೆ ವರ್ಗಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.  

Written by - Ranjitha R K | Last Updated : Jun 26, 2024, 11:34 AM IST
  • ಜುಲೈ 1ರಿಂದ ನಿಯಮಗಳು ಅನ್ವಯ
  • ವಿಶಿಷ್ಟ ಪೋರ್ಟಿಂಗ್ ಕೋಡ್ ಲಭ್ಯವಿರುವುದಿಲ್ಲ
  • ನಿಯಮಗಳನ್ನು ಬದಲಾಯಿಸುವ ಹಿಂದಿನ ಉದ್ದೇಶ
ನಿಮ್ಮ ಬಳಿ ಇರುವ  ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮ  title=

ಬೆಂಗಳೂರು : ಭಾರತದಲ್ಲಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಿಮ್ ಸ್ವಾಪ್ ವಂಚನೆಯನ್ನು ಕಡಿಮೆ ಮಾಡಲು,ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್)ಇತ್ತೀಚೆಗೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಹೊಸ ನಿಯಮಗಳ ಪ್ರಕಾರ,ನಿಮ್ಮ ಸಿಮ್ ಕಳೆದು ಹೋಗಿದ್ದರೆ ಅಥವಾ ಹಾನಿಗೊಳಗಾಗಿದ್ದು, ಹೊಸ ಸಿಮ್‌ನೊಂದಿಗೆ ಬದಲಾಯಿಸಿದ್ದರೆ, ಮುಂದಿನ 7 ದಿನಗಳವರೆಗೆ ಆ ಸಂಖ್ಯೆಯನ್ನು ಬೇರೆ ಕಂಪನಿಗೆ ವರ್ಗಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಜುಲೈ 1ರಿಂದ ನಿಯಮಗಳು ಅನ್ವಯ : 
ಟೆಲಿಕಾಂ ಇಲಾಖೆಯ (DoT) ಸಲಹೆ ಮತ್ತು ವಿವಿಧ ಕಂಪನಿಗಳೊಂದಿಗೆ ಚರ್ಚೆಯ ನಂತರ ಈ ಹೊಸ ನಿಯಮಗಳನ್ನು ಮಾಡಲಾಗಿದೆ ಎಂದು TRAI ಹೇಳಿದೆ. ಗಮನಿಸಬೇಕಾದ ಅಂಶವೆಂದರೆ ಈ ಹೊಸ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ Royal Enfield : ಸದ್ಯದಲ್ಲೇ ಬರಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್, ಲಾಂಚ್ ಯಾವಾಗ?

ವಿಶಿಷ್ಟ ಪೋರ್ಟಿಂಗ್ ಕೋಡ್ ಲಭ್ಯವಿರುವುದಿಲ್ಲ : 
ಮೊಬೈಲ್ ನಂಬರ್ ಪೋರ್ಟಿಂಗ್ ನಿಯಮಗಳನ್ನು ಬದಲಾಯಿಸುವ ಹಿಂದಿನ ಕಾರಣವನ್ನು TRAI ವಿವರಿಸಿದೆ.'ಈ ಬದಲಾದ ನಿಯಮಗಳು ನಕಲಿ ಸಿಮ್ ವಿನಿಮಯ ಅಥವಾ ಸಿಮ್ ಬದಲಾವಣೆಗೆ ಸಂಬಂಧಿಸಿದ ಮೊಬೈಲ್ ನಂಬರ್ ಪೋರ್ಟಿಂಗ್ ಪಡೆಯಲು ವಂಚಕರು ಮಾಡುವ ಪ್ರಯತ್ನಗಳನ್ನು ವಿಫಲಗೊಳಿಸುವ ಉದ್ದೇಶ ಎಂದು ಹೇಳಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಹೊಸ ನಿಯಮವನ್ನು ಮಾಡಲಾಗಿದೆ ಎಂದು TRAI ಹೇಳಿದೆ.ಈಗ ಟೆಲಿಕಾಂ ಕಂಪನಿಗಳು ಸಿಮ್ ಬದಲಾಯಿಸುವ ಅಥವಾ ಹೊಸ ಸಿಮ್ ಪಡೆಯುವ ಏಳು ದಿನಗಳು ಪೂರ್ಣಗೊಳ್ಳುವ ಮೊದಲು 'ಯೂನಿಕ್ ಪೋರ್ಟಿಂಗ್ ಕೋಡ್'(ಯುಪಿಸಿ) ನೀಡಲು ಸಾಧ್ಯವಾಗುವುದಿಲ್ಲ. ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವಲ್ಲಿ UPC ಮೊದಲ ಹಂತವಾಗಿದೆ.ಅಲ್ಲಿ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಟೆಲಿಕಾಂ ಆಪರೇಟರ್‌ಗೆ ಸಂದೇಶವನ್ನು ಕಳುಹಿಸುತ್ತಾರೆ ಮತ್ತು ಅವರು 8 ಅಂಕಿಯ ಕೋಡ್ ಅನ್ನು ಪಡೆಯುತ್ತಾರೆ.

ಜನರು ವಂಚನೆ ಮಾಡಲು ಹಳೆಯ ನಿಯಮಗಳ ಲಾಭವನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು TRAI ವಿವರಿಸದಿದ್ದರೂ, ಹೆಚ್ಚಿನ ಸಿಮ್ ಸ್ವಾಪ್ ವಂಚನೆಗಳು ಮೊಬೈಲ್ ಸಂಖ್ಯೆಯನ್ನು ಮತ್ತೊಂದು ಕಂಪನಿಗೆ ವರ್ಗಾಯಿಸುವಾಗ ಮತ್ತು ಹೊಸ ಸಿಮ್ ಪಡೆಯುವಲ್ಲಿ ಸಂಭವಿಸುತ್ತವೆ ಎಂದು ಹಲವಾರು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ : ಬಿಡುಗಡೆಗೆ ಸಿದ್ದವಾಗಿ ನಿಂತಿದೆ Redmi 13 5G : ವೈಶಿಷ್ಟ್ಯ ತಿಳಿದರೆ ಖರೀದಿಸುವುದು ಗ್ಯಾರಂಟಿ

ನಿಯಮಗಳನ್ನು ಬದಲಾಯಿಸುವ ಹಿಂದಿನ ಉದ್ದೇಶ :
ಒಂದು ವೇಳೆ ನೀವು ಯಾವ್ ಕಂಪನಿಯ ಸಿಮ್ ಬಳಸುತ್ತಿದ್ದೀರೋ ಆ ಕಂಪನಿಯ ಸರ್ವಿಸ್ ನಿಂದ ದಿಗೆ ನೀವು ಸಂತೋಷವಾಗಿರದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ಕಂಪನಿಗೆ ವರ್ಗಾಯಿಸುವ ಸೌಲಭ್ಯವನ್ನು ನೀವು ಪಡೆಯುತ್ತೀರಿ. ಇದನ್ನು ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಎಂದು ಕರೆಯಲಾಗುತ್ತದೆ. ಆದರೆ, ವಂಚಕರು ಹಳೆಯ ಎಂಎನ್‌ಪಿ ನಿಯಮಗಳ ಲಾಭ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿ, TRAI ಇತ್ತೀಚೆಗೆ MNP ಯ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News