ನವದೆಹಲಿ: Geomagnetic Storm - ಸೂರ್ಯನಿಂದ ಹೊರಹೊಮ್ಮುವ ಬಲವಾದ ಚಂಡಮಾರುತದ ಅಲೆಗಳು (Solar Wind) ಇಂದು ಭೂಮಿಗೆ (Earth) ಅಪ್ಪಳಿಸುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ, ಜಿಪಿಎಸ್ ವ್ಯವಸ್ಥೆಗಳು, ಸೆಲ್‌ಫೋನ್ ನೆಟ್‌ವರ್ಕ್‌ಗಳು, ಉಪಗ್ರಹ ಟಿವಿಗಳು ಮತ್ತು ಪವರ್ ಗ್ರಿಡ್‌ಗಳನ್ನು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸೆಪ್ಟೆಂಬರ್ 26 ರಂದು ಭೂಮಿಯನ್ನು ಅಪ್ಪಳಿಸುವ ಭೂಕಾಂತೀಯ ಚಂಡಮಾರುತದ  (Geomagnetic Storm) ಬಗ್ಗೆ ಯುಎಸ್ ಸರ್ಕಾರದ ಬಾಹ್ಯಾಕಾಶ ಹವಾಮಾನ ನಿಗಾ ಸಂಸ್ಥೆ  ಎಚ್ಚರಿಕೆ ನೀಡಿದೆ. ಅಂದರೆ, ಯಾವುದೇ ಸಮಯದಲ್ಲಿ, ಇದು ಕೆಲವು ನಿಮಿಷಗಳ ಕಾಲ ಭೂಮಿಯ ಮೇಲೆ ತೊಂದರೆ ಉಂಟುಮಾಡಬಹುದು ಎಂದು ಅದು ಹೇಳಿದೆ.


COMMERCIAL BREAK
SCROLL TO CONTINUE READING

ಈ ಜಿಯೋಮ್ಯಾಗ್ನೆಟಿಕ್ ಚಂಡಮಾರುಗೆ ಹೇಗೆ ಮತ್ತು ಯಾಕೆ ಉಂಟಾಗುತ್ತದೆ?
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಪ್ರಕಾರ, ಸೂರ್ಯನ ಮೇಲ್ಮೈಯಲ್ಲಿ ದೊಡ್ಡ ಪ್ರಮಾಣದ ಸ್ಫೋಟಗಳು ಸಂಭವಿಸುತ್ತವೆ, ಈ ವೇಳೆ ಕೆಲವು ಭಾಗಗಳು ಅತ್ಯಂತ ಪ್ರಕಾಶಮಾನವಾದ ಬೆಳಕಿನಿಂದ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ, ಇದನ್ನು ಸೂರ್ಯನ ಜ್ವಾಲೆ (sun flare) ಎಂದು ಕರೆಯಲಾಗುತ್ತದೆ. ಸೂರ್ಯನ ಮೇಲ್ಮೈಯಲ್ಲಿ ಈ ಸ್ಫೋಟದಿಂದಾಗಿ, ಅದರ ಮೇಲ್ಮೈಯಿಂದ ದೊಡ್ಡ ಪ್ರಮಾಣದ ಕಾಂತೀಯ ಶಕ್ತಿಯು ಬಿಡುಗಡೆಯಾಗುತ್ತದೆ, ಈ ಕಾರಣದಿಂದಾಗಿ ಸೂರ್ಯನ ಹೊರ ಮೇಲ್ಮೈಯ ಕೆಲವು ಭಾಗವು ಬಹಿರಂಗಗೊಳ್ಳುತ್ತದೆ. ಈ ಭಾಗವನ್ನು ಕೊರೊನಲ್ ಹೋಲ್ಸ್ (Coronal Holes) ಎಂದು ಕರೆಯಲಾಗುತ್ತದೆ. ಜ್ವಾಲೆಯಂತೆ ಕಾಣುವ ಈ ರಂಧ್ರಗಳಿಂದ ಶಕ್ತಿ ಹೊರಬರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ಶಕ್ತಿಯು ಹಲವಾರು ದಿನಗಳವರೆಗೆ ನಿರಂತರವಾಗಿ ಮುಂದುವರಿದರೆ, ಬಹಳ ಸಣ್ಣ ಪರಮಾಣು ಕಣಗಳು ಹೊರಬರಲು ಪ್ರಾರಂಭಿಸುತ್ತವೆ ಮತ್ತು ಅವು ಬಾಹ್ಯಾಕಾಶದಲ್ಲಿ ಹರಡುತ್ತವೆ. ಇದನ್ನು ಭೂಕಾಂತೀಯ ಚಂಡಮಾರುತ ಎಂದು ಕರೆಯಲಾಗುತ್ತದೆ.


ಈ ಬಿರುಗಾಳಿ ಭೂಮಿಗೆ ಅಪ್ಪಳಿಸಿದರೆ ಏನಾಗುತ್ತದೆ?
ಸೂರ್ಯನ ಮೇಲ್ಮೈಯಲ್ಲಿ ಯಾವ ದಿಕ್ಕಿನಲ್ಲಿ ಸ್ಫೋಟ ಸಂಭವಿಸಿದೆ ಎಂಬುದು ಅತ್ಯಂತ ಪ್ರಮುಖವಾದ ವಿಷಯ. ಏಕೆಂದರೆ ಸ್ಫೋಟ ಸಂಭವಿಸುವ ದಿಕ್ಕಿನಲ್ಲಿ, ಅದೇ ದಿಕ್ಕಿನಲ್ಲಿ ಪರಮಾಣು ಕಣದ ಶಕ್ತಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ಫೋಟದ ದಿಕ್ಕು ಭೂಮಿಯ ಕಡೆಗೆ ಇದ್ದರೆ, ಈ ಶಕ್ತಿಯು ಭೂಮಿಯ ಮೇಲೂ ಪರಿಣಾಮ ಬೀರುತ್ತದೆ. ವಿಜ್ಞಾನಿಗಳ ಪ್ರಕಾರ, ಭೂಮಿಯ ಕಾಂತಕ್ಷೇತ್ರವು ಸೂರ್ಯನ ವಿಕಿರಣದಿಂದ ರಕ್ಷಿಸುತ್ತದೆ. ಭೂಮಿಯ ಗರ್ಭದಿಂದ ಹೊರಹೊಮ್ಮುವ ಕಾಂತೀಯ ಶಕ್ತಿಗಳು (Geomagnetic Storm Earth) ವಾತಾವರಣದ ಸುತ್ತಲೂ ಒಂದು ಕವಚವನ್ನು ರೂಪಿಸುತ್ತವೆ, ಈ ಕಣಗಳ ದಿಕ್ಕನ್ನು ಬೇರೆಡೆಗೆ ತಿರುಗಿಸುತ್ತವೆ. ಆದರೆ ಸೌರ ಬಿರುಗಾಳಿಗಳ ಸಮಯದಲ್ಲಿ, ಅವು ಭೂಮಿಯ ಕಾಂತಕ್ಷೇತ್ರವನ್ನು ಭೇದಿಸುತ್ತವೇ. ಸೌರ ಬಿರುಗಾಳಿಗಳನ್ನು ಜಿ 1 ರಿಂದ ಜಿ 5 ರವರೆಗೆ 5 ವರ್ಗಗಳಾಗಿ ವಿಂಗಡಿಸಲಾಗಿದೆ, 1 ಅತ್ಯಂತ ದುರ್ಬಲ ಮತ್ತು 5 ಹಾನಿಯನ್ನು ಉಂಟುಮಾಡುವ ವರ್ಗವಾಗಿದೆ.


ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ


ತೀವ್ರವಾದ ವಿದ್ಯುತ್ ಶಕ್ತಿಯಿಂದ ಟ್ರಾನ್ಸ್ ಫಾರ್ಮರ್ ಹಾಳಾಗುತ್ತವೆ
ಸೂರ್ಯನ ಮೇಲೆ ಏಳುವ ಬಿರುಗಾಳಿಗಳು ಉಪಗ್ರಹಗಳನ್ನು ಆಧರಿಸಿದ ತಂತ್ರಜ್ಞಾನದ ಮೇಲೆ ಪರಿಣಾಮ ಬೀರಬಹುದು ಎಂದು ನಾಸಾ ವಿಜ್ಞಾನಿಗಳು ಹೇಳುತ್ತಾರೆ. ಸೌರ ಗಾಳಿಯಿಂದಾಗಿ, ಭೂಮಿಯ ಹೊರಗಿನ ವಾತಾವರಣವನ್ನು ಬಿಸಿ ಮಾಡಬಹುದು, ಇದು ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ಹಸ್ತಕ್ಷೇಪ ಉಂಟುಮಾಡಬಹುದು. ಇದೇ ವೇಳೆ ವಿದ್ಯುತ್ ತಂತಿಗಳಲ್ಲಿನ ಪ್ರವಾಹವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಟ್ರಾನ್ಸ್ಫಾರ್ಮರ್ ಕೂಡ ಸ್ಫೋಟಿಸಬಹುದು. ಕೆಲವು ದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು. ಎಲೆಕ್ಟ್ರಿಕಲ್ ಗ್ರಿಡ್ ಮತ್ತು ಅಂತರ್ಜಾಲದ ಮೇಲಿನ ಪರಿಣಾಮದ ಮೂಲಕ ಅವುಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು.


ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!


1989 ರಲ್ಲಿ 9 ಗಂಟೆಗಳ ಬ್ಲಾಕ್ ಔಟ್ ನಡೆದಿತ್ತು
ಭೂಮಿಯ ಮೇಲೆ ಸೌರ ಚಂಡಮಾರುತದ ಅತ್ಯಂತ ಕೆಟ್ಟ ಪರಿಣಾಮವನ್ನು ಮಾರ್ಚ್ 1989 ರಲ್ಲಿ ನೋಡಲಾಗಿತ್ತು. ಸೌರ ಚಂಡಮಾರುತದಿಂದಾಗಿ ಕೆನಡಾದ ಹೈಡ್ರೋ-ಕ್ಯೂಬೆಕ್ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು 9 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದರ ನಂತರ, 1991 ರಲ್ಲಿ, ಸೌರ ಚಂಡಮಾರುತದಿಂದಾಗಿ, ಅಮೆರಿಕದ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ವೈಫಲ್ಯ ಉಂಟಾಯಿತು. ಆದರೆ ಇದು ದೊಡ್ಡ ಚಂಡಮಾರುತವಾಗಿರಲಿಲ್ಲ. 1859 ಸೆಪ್ಟೆಂಬರ್ 1-2 ರಂದು ಅತ್ಯಂತ ಭೀಕರ ಸೌರ ಚಂಡಮಾರುತ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಇದನ್ನು ಕ್ಯಾರಿಂಗ್ಟನ್ ಘಟನೆ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಅಷ್ಟೊಂದು ವಿದ್ಯುತ್, ಉಪಗ್ರಹ, ಸ್ಮಾರ್ಟ್ ಫೋನ್ ಇತ್ಯಾದಿ ಇರಲಿಲ್ಲ. ಆದ್ದರಿಂದ ಹೆಚ್ಚು ನಷ್ಟ ಸಂಭವಿಸಿರಲಿಲ್ಲ. ಆದರೆ ಆ ಸಮಯದಲ್ಲಿ ಯಾವ ಚಂಡಮಾರುತವು ಬಂದಿತು, ಅದು ಪ್ರಸ್ತುತದಲ್ಲಿ ಬಂದಿದ್ದರೆ, ಭಾರಿ ವಿನಾಶಕ್ಕೆ ಕಾರಣವಾಗುತ್ತಿತ್ತು.  ಅನೇಕ ದೇಶಗಳಲ್ಲಿ ಪವರ್ ಗ್ರಿಡ್‌ಗಳನ್ನು ಮುಚ್ಚಲಾಗುತ್ತಿತ್ತು. ಉಪಗ್ರಹಗಳು ಕೆಲಸ ಮಾಡುತ್ತಿರಲಿಲ್ಲ ಜಿಪಿಎಸ್ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿತ್ತು. ಮೊಬೈಲ್ ನೆಟ್ವರ್ಕ್ ಹಾಳಾಗುತ್ತಿತ್ತು. ರೇಡಿಯೋ ಸಂವಹನ ಹದಗೆಡುತ್ತಿತ್ತು.


ಇದನ್ನೂ ಓದಿ-Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.