Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?

Sound Of Universe - ವಿಜ್ಞಾನಿಗಳಿಗೆ ಬ್ರಹ್ಮಾಂಡದಿಂದ ಕೆಲ ಶಬ್ದಗಳು ಕೇಳಿಬಂದಿದ್ದು ಇವು 'ಹಮ್ ಮ್' ಮಾದರಿಯ Universe Soundಗೆ ಹೋಲುತ್ತದೆ. ಇದರಿಂದ ಇದುವರೆಗೆ ಅಡಗಿದ್ದ ಗುರುತ್ವಾಕರ್ಷಣ ಅಲೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಪ್ರಕಟಿಸಿದೆ. ಹಾಗಾದರೆ ನಾವೂ ಕೂಡ ಈ ಬ್ರಹ್ಮಾಂಡದ ಧ್ವನಿಯನ್ನೊಮ್ಮೆ ಆಲಿಸೋಣ ಬನ್ನಿ.

Written by - Nitin Tabib | Last Updated : May 23, 2021, 10:21 PM IST
  • ಬ್ರಹ್ಮಾಂಡದಿಂದ ಧ್ವನಿ ಬಂದ ಕುರಿತು ಭರವಸೆ ವ್ಯಕ್ತಪಡಿಸಿದ ವಿಜ್ಞಾನಿಗಳು.
  • ಈ ಧ್ವನಿಗಳು ಸಂಗತಿಯೊಂದರ ಸಿಗ್ನಲ್ ನೀಡುತ್ತಿವೆ ಎಂದ ವಿಜ್ಞಾನಿಗಳು.
  • ಇದಕ್ಕೂ ಮೊದಲು NASA ವಿಜ್ಞಾನಿಗಳು ಸೂರ್ಯನ ಧ್ವನಿ ಮುದ್ರಿಸಿದ್ದರು.
Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ? title=
Sound Of Universe (Video Grab)

ನವದೆಹಲಿ: Sound Of Universe - ನಮ್ಮ ಬ್ರಹ್ಮಾಂಡ ವಿಸ್ಮಯ ಸಂಗತಿಗಳ ಆಗರವಾಗಿದೆ. ಈ ವಿಸ್ಮಯ ಸಂಗತಿಗಳಿಗಾಗಿ ವಿಶ್ವಾದ್ಯಂತ ಖಗೋಳಶಾಸ್ತ್ರಜ್ಞರು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ ಹಾಗೂ ತಮ್ಮ ಪ್ರಯತ್ನಗಳಲ್ಲಿ ಅವರು ಯಶಸ್ಸನ್ನು ಕೂಡ ಕಂಡುಕೊಳ್ಳುತ್ತಿದ್ದಾರೆ. ಪ್ರಸ್ತುತ ಏಲಿಯನ್ಸ್ (Aliens) ಹಾಗೂ ಇತರೆ ಗ್ರಹಗಳ ಮೇಲೆ ಜೀವನದ ಅಸ್ತಿತ್ವದ ಸಾದ್ಯತೆಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. 

ಇವುಗಳ ಬಗ್ಗೆ ಇದುವರೆಗೆ ಯಾವುದೇ ರೀತಿಯ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚಿಗೆ ವಿಜ್ಞಾನಿಗಳು ಬ್ರಹ್ಮಾಂಡದಿಂದ ಕೆಲ ಹಮ್ಮಿಂಗ್ ಧ್ವನಿಗಳನ್ನು ಆಲಿಸಿದ್ದಾರೆ, ಇವು Universe ನ ಹಮ್ಮಿಂಗ್ ಸೌಂಡ್ (Humming Sound Of Universe) ಮಾದರಿಯನ್ನು ಹೋಲುತ್ತವೆ ಎನ್ನಲಾಗಿದೆ. ಆದರೆ. ಓದಿ ಧ್ವನಿಯಾಗಿಲ್ಲ. ಏಕೆಂದರೆ ಬ್ರಹ್ಮಾಂಡದಲ್ಲಿ ದ್ವನಿ (Universe Sound) ಕೇಳಲು ಯಾವುದೇ ಮಾಧ್ಯಮ ಇಲ್ಲ 

ಹೇಗಿದೆ ಈ ಧ್ವನಿ
ವಾಸ್ತವದಲ್ಲಿ ವಿಜ್ಞಾನಿಗಳಿಗೆ ಸಿಗ್ನಲ್ ವೊಂದು ದೊರೆತಿದೆ. ಇದು ಅಲೆಗಳ ಇರುವಿಕೆಯನ್ನು ಹೇಳುತ್ತದೆ ಎಂದು ಭಾವಿಸಲಾಗುತ್ತಿದೆ. ಇದು 'ಹಮ್ ಮ್ ಮ್ ' (Humming Sound Of The Universe) ಧ್ವನಿಯನ್ನು ಹೋಲುತ್ತದೆ. ಸ್ವಾಭಾವಿಕವಾಗಿ ಇದು ಒಂದು ಧ್ವನಿಯಾಗಿಲ್ಲ ಏಕೆಂದರೆ ಆಕಾಶದಲ್ಲಿ ಧ್ವನಿ (Sound In Space) ಉತ್ಪತ್ತಿಗಾಗಿ ಯಾವುದಾದರೊಂದು ಮಾಧ್ಯಮದ ಅವಶ್ಯಕತೆ ಇದೆ ಹಾಗೂ ಅಲ್ಲಿ ಯಾವುದೇ ಮಾಧ್ಯಮ್ ಸದ್ಯಕ್ಕಂತೂ ಇಲ್ಲ. ಹೀಗಾಗಿ ಗುರುತ್ವಾಕರ್ಷಣ ಅಲೆಗಳ (Gravitational Waves) ಕಾರಣ ಈ ಸಿಗ್ನಲ್ ಉತ್ಪತ್ತಿಯಾಗುತ್ತಿರಬೇಕು ಎಂದು ಅಂದಾಜಿಸಲಾಗುತ್ತಿದೆ.

ವಿಜ್ಞಾನಿಗಳು ಹೇಳುವುದೇನು?
ಈ ಶಬ್ದ ಗುರುತ್ವಾಕರ್ಷಣ ಅಲೆಗಳ ಕಾರಣ ಉತ್ಪತ್ತಿಯಾಗಿರಬಹುದು ಎಂದು ವಿಜಾನಿಗಳು ನೆಳುತ್ತಾರೆ. ಈ ಹಮ್ಮಿಂಗ್ ಧ್ವನಿಯನ್ನು ಉತ್ತರ ಅಮೆರಿಕಾದ ನ್ಯಾನೋ ಹರ್ಟ್ಜ್ ಒಬ್ಸೆರ್ವೆಟರಿ ಫಾರ್ ಗ್ರ್ಯಾವಿಟೆಶನಲ್ ವೇವ್ಸ್ (NANOGrav) ಪತ್ತೆಹಚ್ಚಿದೆ ಹಾಗೂ ಇದರ ನಿಷ್ಕರ್ಷಗಳನ್ನು 'ಆಸ್ಟ್ರೋಲಾಜಿಕಲ್ ಜರ್ನಲ್ ಲೆಟರ್ಸ್'ನಲ್ಲಿ ಪ್ರಕಟಿಸಲಾಗಿದೆ. 

NANOGrav, 'ಪಲ್ಸರ್'ನ ಸಂಕೇತಗಳ ಮೇಲೆ ಅಧ್ಯಯನ ನಡೆಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ, ಇವುಗಳನ್ನು ಸಾಮಾನ್ಯವಾಗಿ ಬ್ರಹ್ಮಾಂಡದ ಸಮಯ ರೂಪದಲ್ಲಿ ಭಾವಿಸಲಾಗುತ್ತದೆ. ಈ ದತ್ತಾಂಶಗಳ ಸಂಗ್ರಹಕ್ಕೆ ರೇಡಿಯೋ ಅಲೆಗಳ (Radio Waves) ವಿಸರ್ಜನೆಯನ್ನು ನಡೆಸಲಾಗುತ್ತದೆ ಹಾಗೂ ಇವು ಗುರುತ್ವಾಕರ್ಷಣ ಅಲೆಗಳ ಪ್ರಭಾವದ ಸಂಕೇತಗಳಾಗಿರಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನೂ ಓದಿ- PUC ಪರೀಕ್ಷೆಗಳ ಬಗ್ಗೆ ಮಹತ್ವದ ಮಾಹಿತಿ : ಸಚಿವ ಸುರೇಶ್ ಕುಮಾರ್!

ಈ ಅಧ್ಯಯನ ಏಕೆ ಮಹತ್ವದ್ದಾಗಿದೆ?
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಧ್ಯಯನದ ಪ್ರಮುಖ ಸಂಶೋಧಕ ಜೋಸೆಫ್ ಸೈಮನ್ (Joseph Simon), ದತಾಂಶದ ಆಧಾರದ ಮೇಲೆ ಈ ಧ್ವನಿಯ ಪ್ರಬಲ ಸಂಕೇತಗಳು ಸಿಗುತ್ತಿವೆ. ಈ ಅಲೆಗಳು ಸಂಪೂರ್ಣ ಅವಲೋಕನೆಯ ವೇಳೆ ದೊರೆದಿರುವುದು ಇಲ್ಲಿ ಉಲ್ಲೇಖನೀಯ. ಹೀಗಾಗಿ ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ ಹಾಗೂ ಈ ಧ್ವನಿ ಎಲ್ಲೆಂದ ಬರುತ್ತಿದೆ ಎಂಬುದು ತಿಳಿಯಬೇಕು ಎಂದಿದ್ದಾರೆ.

ಇದನ್ನೂ ಓದಿ- ಕೊವಿಡ್-19 ಜಾಗತಿಕ ಮಹಾಮಾರಿ, ಆದರೆ Black Fungus ಭಾರತದಲ್ಲಿಯೇ ಏಕೆ ವೇಗವಾಗಿ ಹರಡುತ್ತಿದೆ?

ಈ ಕುರಿತು NASA ಕೂಡ ಟ್ವೀಟೋಕ್ತಿ ಮಾಡಿದೆ
ಇದಕ್ಕೂ ಮೊದಲು NASA ವಿಜ್ಞಾನಿಗಳು ಕೂಡ ಸೂರ್ಯನ ಧ್ವನಿಯನ್ನು ಮುದ್ರಿಸಿ, ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು.

ಇದನ್ನೂ ಓದಿ-ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್‌ಡೌನ್‌ ವಿಸ್ತರಣೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News