ಬಿಡುಗಡೆಯಾಯಿತು ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ : ಯಾವ ವೆರಿಯೆಂಟ್ ಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ
2024 New Maruti Swift:ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi (O), ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.
2024 New Maruti Swift : ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi (O), ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಬೆಲೆ 6.49 ಲಕ್ಷದಿಂದ ಆರಂಭವಾಗಿ 9.64 ಲಕ್ಷದವರೆಗೆ ಇರಲಿದೆ. ಇದು 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.ಇದರಲ್ಲಿ ನಾವೆಲ್ ಆರೆಂಜ್,ಮ್ಯಾಗ್ಮಾ ಗ್ರೇ,ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್,ಸ್ಪ್ಲೆಂಡಿಡ್ ಸಿಲ್ವರ್, ಲುಸ್ಟರ್ ಬ್ಲೂ + ಮಿಡ್‌ನೈಟ್ ಬ್ಲ್ಯಾಕ್ ರೂಫ್, ಸಿಜ್ಲಿಂ ರೆಡ್ + ಮಿಡ್‌ನೈaಟ್ ಬ್ಲ್ಯಾಕ್ ರೂಫ್ ಪರ್ಲ್ ಆರ್ಕ್ಟಿಕ್ ವೈಟ್ + ಮಿಡ್ನೈಟ್ ಕಪ್ಪು ಛಾವಣಿ.
ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ :
ಹೊಸ ಸ್ವಿಫ್ಟ್ LXi MT- ರೂ 6,49,000
ಹೊಸ ಸ್ವಿಫ್ಟ್ VXi MT- ರೂ 7,29,500
ಹೊಸ ಸ್ವಿಫ್ಟ್ VXi AMT- ರೂ 7,79,500
ಹೊಸ ಸ್ವಿಫ್ಟ್ VXi (O) MT- ರೂ 7,56,500
ಹೊಸ ಸ್ವಿಫ್ಟ್ VXi (O) 8AMT 06,500 ರೂ
ಹೊಸ ಸ್ವಿಫ್ಟ್ ZXi MT- ರೂ 8,29,500
ಹೊಸ ಸ್ವಿಫ್ಟ್ ZXi AMT- ರೂ 8,79,500
ಹೊಸ ಸ್ವಿಫ್ಟ್ ZXi (O) MT- ರೂ 8,99,500
ಹೊಸ ಸ್ವಿಫ್ಟ್ ZXi (O) AMT- ರೂ 9,49,500
Swift-DXi+ MT - ರೂ 9,14,500
ಹೊಸ ಸ್ವಿಫ್ಟ್ ZXi+ ಡ್ಯುಯಲ್-ಟೋನ್ AMT- ರೂ 9,64,500
ಇದನ್ನೂ ಓದಿ : Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ
ಎಂಜಿನ್ ಮತ್ತು ಮೈಲೇಜ್ :
ಹೊಸ ಸ್ವಿಫ್ಟ್ 1.2 ಲೀಟರ್ Z-ಸರಣಿ ಪೆಟ್ರೋಲ್ ಎಂಜಿನ್ ಹೊಂದಿದೆ.ಇದಕ್ಕೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗಿದೆ. ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವಿಲ್ಲದ ರೂಪಾಂತರವನ್ನು ಪಡೆಯುವ ಆಯ್ಕೆಯನ್ನು ಸಹ ನೀಡಲಾಗಿದೆ. ಈ ಹೊಸ ಎಂಜಿನ್ 82PS ಪವರ್ ಮತ್ತು 112Nm ಟಾರ್ಕ್ ಅನ್ನು ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಇದು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
ಈ ಹೊಸ ಎಂಜಿನ್‌ನೊಂದಿಗೆ ಮಾರುತಿ ಸ್ವಿಫ್ಟ್ ಮೈಲೇಜ್ ಕೂಡಾ ಸುಧಾರಿಸಿದೆ. ಕಂಪನಿಯ ಪ್ರಕಾರ, ಮ್ಯಾನುವಲ್ ರೂಪಾಂತರಗಳಲ್ಲಿ 10% ಮತ್ತು AMT ರೂಪಾಂತರಗಳಲ್ಲಿ 14% ಮೈಲೇಜ್ ಹೆಚ್ಚಳವಾಗಿದೆ.ಮ್ಯಾನುಯಲ್ ರೂಪಾಂತರಗಳು 24.8kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದರೆ AMT ರೂಪಾಂತರಗಳು 25.72 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ.
ಇದನ್ನೂ ಓದಿ : Sanchar Saathi Portal: ರೈಲು ಪ್ರಯಾಣದ ವೇಳೆ ಫೋನ್ ಕಳೆದು ಹೋಗಿದ್ಯಾ! ಈ ಪೋರ್ಟಲ್‌ನಲ್ಲಿ ದೂರು ನೀಡಿ
ಇದು 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್ ವೈಶಿಷ್ಟ್ಯಗಳು, ಡಿಜಿಟಲ್ ಎಸಿ ಕಂಟ್ರೋಲ್ ಪ್ಯಾನಲ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ರೈವರ್ ಫೋಕಸ್ಡ್ ಕಾಕ್‌ಪಿಟ್, ಟೈಪ್-ಎ ಮತ್ತು ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಅರ್ಕಾಮಿಸ್ ಸರೌಂಡ್ ಸೆನ್ಸ್ ಸೌಂಡ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.