New Ola S1 Electric Scooter Price:ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ಹೊಸ S1 EV ಅನ್ನು ಬಿಡುಗಡೆ ಮಾಡಿದೆ. ಅದರ ಎಕ್ಸ್ ಶೋ ರೂಂ ಬೆಲೆಯನ್ನು 99,999 ರೂ. ಎಂದು ನಿಗದಿ ಮಾಡಿದೆ. ಹೊಸ Ola S1 ಎಲೆಕ್ಟ್ರಿಕ್ ಸ್ಕೂಟರ್ S1 Pro ಅನ್ನು ಹೋಲುತ್ತದೆ ಮತ್ತು ಆಗಸ್ಟ್ 15 ಮತ್ತು ಆಗಸ್ಟ್ 31 ರ ನಡುವೆ ಕೇವಲ 499 ರೂ. ಪಾವತಿಸಿ ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು.  ಹೊಸ Ola S1 ಖರೀದಿಯು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಯು ಸೆಪ್ಟೆಂಬರ್ 7 ರಿಂದ ನಡೆಯಲಿದೆ.  ಮಾರುಕಟ್ಟೆಯಲ್ಲಿ ಇದು ಅಥರ್ 450X, ಸಿಂಪಲ್ ಒನ್  TVS iQube ಮತ್ತು Okinawa Okhi 90 ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿದೆ.


COMMERCIAL BREAK
SCROLL TO CONTINUE READING

ಹೊಸ Ola S1 2.98kWh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ.  ಹೊಸ Ola S1  ಒಂದೇ ಚಾರ್ಜ್‌ನಲ್ಲಿ 141 ಕಿಮೀ ವ್ಯಾಪ್ತಿಯನ್ನು ತಲುಪಲಿದೆ ಎಂದು ಹೇಳಲಾಗಿದೆ. ಹೊಸ S1 ಮ್ಯೂಸಿಕ್  ಪ್ಲೇಬ್ಯಾಕ್, ನ್ಯಾವಿಗೇಷನ್, ಕಂಪ್ಯಾನಿಯನ್ ಅಪ್ಲಿಕೇಶನ್ ಮತ್ತು ರಿವರ್ಸ್ ಮೋಡ್ ನಂತಹ  MoovOS ವೈಶಿಷ್ಟ್ಯಗಳನ್ನು  ಹೊಂದಿದೆ.  ಹೊಸ Ola S1 ಎಲೆಕ್ಟ್ರಿಕ್ ಸ್ಕೂಟರ್ S1 Pro ನಂತೆಯೇ ಕಾಣುತ್ತದೆ, ವಿನ್ಯಾಸದ ಅಂಶಗಳು ಬಹುಮಟ್ಟಿಗೆ ಒಂದೇ ಆಗಿರುತ್ತವೆ. ಇದು ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್,  ಮತ್ತು ನಿಯೋ ಮಿಂಟ್ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


ಇದನ್ನೂ ಓದಿ : ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ? ಈ ರೀತಿ ತಿಳಿಯಿರಿ


Ola S1 ಬಿಡುಗಡೆಯ ಜೊತೆಗೆ, EV ತಯಾರಕರು S1 Pro ಎಲೆಕ್ಟ್ರಿಕ್ ಸ್ಕೂಟರ್ ನ ಹೊಸ 'ಖಾಕಿ' ಬಣ್ಣದ  ಸ್ಕೀಮ್ ಅನ್ನು ಸಹ ಘೋಷಿಸಿದ್ದಾರೆ. ಸ್ವಾತಂತ್ರ್ಯದ ವರ್ಷವನ್ನು ಗುರುತಿಸುವ ನಿಟ್ಟಿನಲ್ಲಿ 'ಖಾಕಿ' ಬಣ್ಣದ ಸ್ಕೀಮ್ ನೊಂದಿಗೆ Ola S1 Pro ನ 1947 ಯೂನಿಟ್  ತಯಾರಿಸಲಾಗುತ್ತಿದೆ. Ola S1 Pro ಖಾಕಿ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆ 1.49 ಲಕ್ಷ ರೂ ಪಾಯಿ  ಆಗಿರಲಿದೆ. 


500 ಕಿಮೀ ವ್ಯಾಪ್ತಿಯೊಂದಿಗೆ ಎಲೆಕ್ಟ್ರಿಕ್ ಕಾರಿನ ಘೋಷಣೆ :
ಇದರೊಂದಿಗೆ ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಸಹ ಪರಿಚಯಿಸಿದೆ. ಇದು 2024 ರಲ್ಲಿ ಬಿಡುಗಡೆಯಾಗಲಿದೆ. ಓಲಾ ಎಲೆಕ್ಟ್ರಿಕ್‌ನ ಸಿಇಒ ಭವಿಶ್ ಅಗರ್ವಾಲ್ ಮಾತನಾಡಿ, ಇದು ಭಾರತದಲ್ಲಿ ತಯಾರಾದ ಅತ್ಯಂತ ಸ್ಪೋರ್ಟಿ ಲುಕ್ ಕಾರ್ ಆಗಲಿದೆ. ಓಲಾದ ಎಲೆಕ್ಟ್ರಿಕ್ ಕಾರು 4 ಸೆಕೆಂಡ್‌ಗಳಲ್ಲಿ ಗಂಟೆಗೆ 0-100 ಕಿಲೋಮೀಟರ್ ವೇಗವನ್ನು ತಲುಪುತ್ತದೆ ಮತ್ತು 500 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹೊಸ ಓಲಾ ಎಲೆಕ್ಟ್ರಿಕ್ ಕಾರು ಅಸಿಸ್ಟೆಡ್ ಡ್ರೈವ್ ತಂತ್ರಜ್ಞಾನ, ಕೀಲೆಸ್ ಆಪರೇಷನ್ ಮತ್ತು ಓಲಾಸ್ ಮೂವ್ ಓಎಸ್ ಅನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ : ಈ ಬಲ್ಬ್ ಕಡಿಮೆ ವಿದ್ಯುತ್ ನಲ್ಲಿ ಮನೆಯೆಲ್ಲಾ ಬೆಳಗುತ್ತದೆ , ಬ್ಲೂಟೂತ್‌ಗೆ ಕನೆಕ್ಟ್ ಮಾಡಿದರೆ ಹಾಡೂ ಕೇಳಬಹುದು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.