ನವದೆಹಲಿ: ಅತ್ಯಂತ ಜನಪ್ರಿಯ ಅಪ್ಲಿಕೇಶನ್ ವಾಟ್ಸಾಪ್  ತ್ವರಿತ ಮೆಸೇಜಿಂಗ್ ಆಪ್ ಆಗಿದ್ದು ಇಡೀ ವಿಶ್ವದಾದ್ಯಂತ ಬಹಳಷ್ಟು ಮಂದಿ ಇದನ್ನು ಬಳಸುತ್ತಿದ್ದಾರೆ. ಈ ಕಾರಣದಿಂದಾಗಿ ಇದು ಬಳಕೆದಾರರಿಗೆ ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ. ಇದೀಗ ವಾಟ್ಸಾಪ್ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ತನ್ನ ವಿಶೇಷ ಕಣ್ಮರೆಯಾಗುವ (Disappearing) ಅಂದರೆ ಡಿಸ್ಅಪಿಯರಿಂಗ್ ಸಂದೇಶ ವೈಶಿಷ್ಟ್ಯವನ್ನು ನವೀಕರಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದರಲ್ಲಿ  ನವೀಕರಣದ ನಂತರ, ಬಳಕೆದಾರರ ಸಂದೇಶವನ್ನು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವು 7 ದಿನಗಳ ಅವಧಿಯೊಂದಿಗೆ ಮಾತ್ರ ಲಭ್ಯವಿದೆ.


COMMERCIAL BREAK
SCROLL TO CONTINUE READING

ಹೊಸ ವೈಶಿಷ್ಟ್ಯಗಳ ಪರೀಕ್ಷೆ ಮುಂದುವರೆದಿದೆ:
WABetaInfo ವೆಬ್‌ಸೈಟ್‌ನ ಪ್ರಕಾರ, ಈ ವಿಶೇಷ ಸಂದೇಶದ ವೈಶಿಷ್ಟ್ಯವನ್ನು ವಾಟ್ಸಾಪ್‌ನ (Whatsapp) ಹೊಸ ಆವೃತ್ತಿಯಲ್ಲಿ ನೀಡಲಾಗುವುದು. ಪ್ರಸ್ತುತ ಈ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ನ ಐಒಎಸ್ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಹೊಸ ವೈಶಿಷ್ಟ್ಯವು ಬಂದ ನಂತರ, ಕಣ್ಮರೆಯಾಗುತ್ತಿರುವ ವೈಶಿಷ್ಟ್ಯವನ್ನು ಆನ್ ಮಾಡಲು ಅಥವಾ ಅದನ್ನು ಆಫ್ ಮಾಡಲು ಬಳಕೆದಾರರಿಗೆ ಸೌಲಭ್ಯವಿದೆ. ಈ ವೈಶಿಷ್ಟ್ಯವನ್ನು ಆನ್ ಮಾಡಿದ ನಂತರ, 24 ಗಂಟೆಗಳ ನಂತರ ವಾಟ್ಸಾಪ್ ಸಂದೇಶಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ.


ಇದನ್ನೂ ಓದಿ - Whatsapp: ಗುಲಾಬಿ ಬಣ್ಣದಲ್ಲಿ ಬರಲಿದೆಯೇ ವಾಟ್ಸಾಪ್, ಇದರ ಸತ್ಯಾಸತ್ಯತೆ ತಿಳಿಯಿರಿ


24 ಗಂಟೆಗಳ ಅಥವಾ 7 ದಿನಗಳ ನಂತರ ಸಂದೇಶಗಳು ಕಣ್ಮರೆಯಾಗುತ್ತವೆ:
ವಾಟ್ಸಾಪ್ನ ಹೊಸ ವೈಶಿಷ್ಟ್ಯವು (New Whatsapp Feature) 24 ಗಂಟೆಗಳ ಅಥವಾ ಏಳು ದಿನಗಳ ನಂತರ ಸಂದೇಶವನ್ನು ಕಣ್ಮರೆಯಾಗುವ ಸೌಲಭ್ಯವನ್ನು ಹೊಂದಿರುತ್ತದೆ. ಇದರರ್ಥ ಬಳಕೆದಾರರು ತಮ್ಮ ಇಚ್ಛೆಗೆ ಅನುಗುಣವಾಗಿ ಸಂದೇಶವನ್ನು 24 ಗಂಟೆಗಳ ನಂತರ ಅಥವಾ 7 ದಿನಗಳ ನಂತರ ಕಣ್ಮರೆಯಾಗುವಂತೆ ಮಾಡಬಹುದು. ಇದಲ್ಲದೆ, ನೀವು ಡಿಸ್ಅಪಿಯರಿಂಗ್ ವೈಶಿಷ್ಟ್ಯವನ್ನು ಆಫ್ ಮಾಡಿದರೆ, ನಿಮ್ಮ ಸಂದೇಶಗಳು ಕಣ್ಮರೆಯಾಗುವುದಿಲ್ಲ. ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಈ ವೈಶಿಷ್ಟ್ಯವನ್ನು ಹೊರತರಲಾಗುವುದು. ಪ್ರಸ್ತುತ ಇದು ಪ್ರಾಯೋಗಿಕ ಹಂತದಲ್ಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ- Scam Alert : ಎಚ್ಚರ! WhatsApp ನಲ್ಲಿ ಬರುವ ಈ ಲಿಂಕ್‌ ಕ್ಲಿಕ್ ಮಾಡಬೇಡಿ ಪೊಲೀಸರಿಂದ ಎಚ್ಚರಿಕೆ!


ಈ ವೈಶಿಷ್ಟ್ಯವು ಕಳೆದ ವರ್ಷ ಬಂದಿತು
ಕಳೆದ ವರ್ಷ, ವಾಟ್ಸಾಪ್ ಎಲ್ಲಾ ಬಳಕೆದಾರರಿಗಾಗಿ ಕಣ್ಮರೆಯಾಗುತ್ತಿರುವ ಸಂದೇಶಗಳ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ವೈಶಿಷ್ಟ್ಯವೆಂದರೆ ಅದು ಸಕ್ರಿಯಗೊಂಡ ನಂತರ, ವಾಟ್ಸಾಪ್‌ನಲ್ಲಿ ಕಳುಹಿಸಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಒಂದು ವಾರದ ನಂತರ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.


ವಾಟ್ಸಾಪ್ನ ಇತ್ತೀಚಿನ ವೈಶಿಷ್ಟ್ಯ:
ವಾಟ್ಸಾಪ್ ಮಾರ್ಚ್ 2021 ರಲ್ಲಿ ವಿಶೇಷ ವೈಶಿಷ್ಟ್ಯವನ್ನು ಪರಿಚಯಿಸಿತು, ಇದನ್ನು ಮ್ಯೂಟ್ ವಿಡಿಯೋ ಎಂದು ಕರೆಯಲಾಗುತ್ತದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ವೀಡಿಯೊ ಕಳುಹಿಸುವ ಮೊದಲು ತಮ್ಮ ಧ್ವನಿಯನ್ನು ಮ್ಯೂಟ್ ಮಾಡಲು ಸಾಧ್ಯವಾಗುತ್ತದೆ. ಅಂದರೆ, ಇತರ ಬಳಕೆದಾರರು ವೀಡಿಯೊ ಪಡೆದಾಗ, ಅದರಲ್ಲಿ ಯಾವುದೇ ಧ್ವನಿ ಇರುವುದಿಲ್ಲ. ವಾಟ್ಸಾಪ್ ಈ ವೈಶಿಷ್ಟ್ಯದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿದೆ. 

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.