Whatsapp: ಗುಲಾಬಿ ಬಣ್ಣದಲ್ಲಿ ಬರಲಿದೆಯೇ ವಾಟ್ಸಾಪ್, ಇದರ ಸತ್ಯಾಸತ್ಯತೆ ತಿಳಿಯಿರಿ

ನಿಮ್ಮ ವಾಟ್ಸಾಪ್ ನಿಜವಾಗಿಯೂ ಗುಲಾಬಿ ಬಣ್ಣದಲ್ಲಿ ಬರಲಿದೆಯೇ ಮತ್ತು ಅದಕ್ಕೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತದೆಯೇ? ಇದರ ಹಿಂದಿನ ಸತ್ಯಾಸತ್ಯತೆ ಏನು?   

Written by - Yashaswini V | Last Updated : Apr 19, 2021, 01:30 PM IST
  • ಪಿಂಕ್ ವಾಟ್ಸಾಪ್ ಬಗ್ಗೆ ಜಾಗರೂಕರಾಗಿರಿ!
  • ಎಪಿಕೆ ಡೌನ್‌ಲೋಡ್ ಲಿಂಕ್‌ನೊಂದಿಗೆ ವಾಟ್ಸಾಪ್ ಗ್ರೂಪ್ ವೈರಸ್ ಹರಡಲು ಪ್ರಯತ್ನಿಸುತ್ತಿದೆ
  • ಪಿಂಕ್ ವಾಟ್ಸಾಪ್ ಹೆಸರಿನ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ
Whatsapp: ಗುಲಾಬಿ ಬಣ್ಣದಲ್ಲಿ ಬರಲಿದೆಯೇ ವಾಟ್ಸಾಪ್, ಇದರ ಸತ್ಯಾಸತ್ಯತೆ ತಿಳಿಯಿರಿ title=
Fact Check Viral Message on WhatsApp claiming to change into pink color

Fact Check Viral Message on WhatsApp claiming to change into pink color: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಗುಲಾಬಿ ಬಣ್ಣದಲ್ಲಿ ಬರಲಿದೆ ಎಂಬ ಸಂದೇಶ ಸಾಕಷ್ಟು ವೈರಲ್ ಆಗುತ್ತಿದೆ. ವಾಸ್ತವವಾಗಿ ವೈರಸ್ ಅನ್ನು ಲಿಂಕ್ ಮೂಲಕ ಫೋನ್‌ನಲ್ಲಿ ಕಳುಹಿಸುವ ಬಗ್ಗೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಈ ಲಿಂಕ್‌ನಲ್ಲಿ, ಪಿಂಕ್ ವಾಟ್ಸಾಪ್  (Pink WhatsApp) ಬರಲಿದೆ ಮತ್ತು ಅದಕ್ಕೆ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ. 

ಸೈಬರ್ ಭದ್ರತಾ ತಜ್ಞರ ಪ್ರಕಾರ, ಇದು ವಾಟ್ಸಾಪ್ (WhatsApp) ಅಪ್‌ಡೇಟ್‌ಗಳಂತಹ ಅಧಿಕೃತ ನವೀಕರಣಗಳಿಗಾಗಿ ಎಂದು ಲಿಂಕ್‌ನಲ್ಲಿ ಹೇಳಲಾಗಿದೆ. ಆದರೆ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಸಂಬಂಧಪಟ್ಟ ಬಳಕೆದಾರರ ಫೋನ್ ಹ್ಯಾಕ್ ಆಗುತ್ತದೆ ಮತ್ತು ಅವರಿಗೆ ವಾಟ್ಸಾಪ್ ಬಳಸಲು ಸಾಧ್ಯವಾಗದಿರಬಹುದು ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ - Mobile Battery: ನಿಮ್ಮ ಮೊಬೈಲ್ ನಲ್ಲಿ ಚಾರ್ಜ್​ ನಿಲ್ಲುತ್ತಿಲ್ಲವೇ? ಅದಕ್ಕೆ ಈ ಆ್ಯಪ್ ಡೌನ್ ಲೋಡ್ ಮಾಡ್ಕೊಳ್ಳಿ!

ಸೈಬರ್‌ ಸೆಕ್ಯುರಿಟಿ ತಜ್ಞ ರಾಜಶೇಖರ್ ರಾಜಾರಿಯಾ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿರುವ "ಪಿಂಕ್ ವಾಟ್ಸಾಪ್ ಬಗ್ಗೆ ಜಾಗರೂಕರಾಗಿರಿ! ಎಪಿಕೆ ಡೌನ್‌ಲೋಡ್ ಲಿಂಕ್‌ನೊಂದಿಗೆ ವಾಟ್ಸಾಪ್ ಗ್ರೂಪ್ ವೈರಸ್ ಹರಡಲು ಪ್ರಯತ್ನಿಸುತ್ತಿದೆ. ಪಿಂಕ್ ವಾಟ್ಸಾಪ್ ಹೆಸರಿನ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಫೋನ್ ಬಳಸುವುದು ಕಷ್ಟವಾಗುತ್ತದೆ" ಎಂದು ಹೇಳಿದ್ದಾರೆ. 

ಸೈಬರ್‌ ಸೆಕ್ಯುರಿಟಿ ಕಂಪನಿ ವಾಯೇಜರ್ ಇನ್ಫೋಸೆಕ್‌ನ ನಿರ್ದೇಶಕ ಜಿತನ್ ಜೈನ್, ಬಳಕೆದಾರರು ಗೂಗಲ್ ಅಥವಾ ಆಪಲ್‌ನ ಅಧಿಕೃತ ಆಪ್ ಸ್ಟೋರ್‌ ಬದಲಿಗೆ ಬೇರೆ ಯಾವುದೇ ಆಪ್ ಮುಖಾಂತರ ಯಾವುದೇ ಮೊಬೈಲ್ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ - Cheapest Recharge Plan: ಕೇವಲ ರೂ.129ಕ್ಕೆ 24ದಿನಗಳ ಉಚಿತ ಕಾಲಿಂಗ್, ಡೇಟಾ, Prime Video ನೋಡುವ ಅವಕಾಶ

ಈ ರೀತಿಯ ಅಪ್ಲಿಕೇಶನ್‌ನೊಂದಿಗೆ ವೈರಸ್ ನಿಮ್ಮ ಫೋನ್ ನುಸುಳಬಹುದು ಮತ್ತು ಫೋಟೋಗಳು, ಎಸ್‌ಎಂಎಸ್, ಸಂಪರ್ಕಗಳು ಮುಂತಾದ ಮಾಹಿತಿಯನ್ನು ಕದಿಯಬಹುದು ಎಂದು ಅವರು ವಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಇಲ್ಲವೇ ಇ-ಮೇಲ್ ಮೂಲಕ "ಯಾರಾದರೂ ಅನುಮಾನಾಸ್ಪದ ಸಂದೇಶ ಸ್ವೀಕರಿಸಿದರೆ, ಸಮಗ್ರ ತನಿಖೆ ನಡೆಸಿ ಮತ್ತು ಉತ್ತರಿಸುವ ಮೊದಲು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ". ಸಾಧ್ಯವಾದಷ್ಟು ವೈರಲ್ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗದಿರಿ ಎಂದು ಸಲಹೆ ನೀಡಲಾಗಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News