Vodafone ಬಳಕೆದಾರರಿಗೆ new year ಗಿಫ್ಟ್ , ಮೂರು ಪ್ಲಾನ್ ಗಳಲ್ಲಿ ಸಿಗಲಿದೆ ಭಾರೀ ಪ್ರಯೋಜನ
ಕಳೆದ ವರ್ಷ ಅನೇಕ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿತ್ತು. ಇವುಗಳಲ್ಲಿ ವೊಡಾಫೋನ್ ಕೂಡಾ ಸೇರಿದೆ. ಆದರೆ ಹೊಸ ವರ್ಷದಂದು ವೋಡಾಫೋನ್ ತನ್ನ ಬಳಕೆದಾರರಿಗಾಗಿ ವಿಶಿಷ್ಟ ಮತ್ತು ಅಗ್ಗದ ಯೋಜನೆಗಳನ್ನು ತಂದಿದೆ.
ನವದೆಹಲಿ : Vodafone new year recharge plans: ವೊಡಾಫೋನ್ (Vodafone) ತನ್ನ ಬಳಕೆದಾರರಿಗೆ ಹೊಸ ವರ್ಷದ ವಿಶೇಷ ಕೊಡುಗೆಯನ್ನು (New year Recharge Plans) ತಂದಿದೆ. ಕಂಪನಿಯು ಈ ಬಾರಿ ಮೂರು ವಿಶಿಷ್ಟ ಕೊಡುಗೆಗಳನ್ನು ಸೇರಿಸಿದೆ. ಈ ಯೋಜನೆ ಜಿಯೋ (Jio) ಮತ್ತು ಏರ್‌ಟೆಲ್‌ಗಿಂತ (Airtel) ಉತ್ತಮವಾಗಿದೆ. ಈ ಯೋಜನೆಗಳಲ್ಲಿ, ಅನಿಯಮಿತ ಕರೆ ಮತ್ತು ಡೇಟಾದಂತಹ ಸೌಲಭ್ಯಗಳು ಸಿಗಲಿದೆ.
ಕಳೆದ ವರ್ಷ ಅನೇಕ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿತ್ತು. ಇವುಗಳಲ್ಲಿ ವೊಡಾಫೋನ್ (Vodafone) ಕೂಡಾ ಸೇರಿದೆ. ಆದರೆ ಹೊಸ ವರ್ಷದಂದು ವೋಡಾಫೋನ್ ತನ್ನ ಬಳಕೆದಾರರಿಗಾಗಿ ವಿಶಿಷ್ಟ ಮತ್ತು ಅಗ್ಗದ ಯೋಜನೆಗಳನ್ನು (Vi recharge plan) ತಂದಿದೆ.
ಇದನ್ನೂ ಓದಿ : Whatsapp: ವಾಟ್ಸಾಪ್ ಗ್ರಾಹಕರಿಗೆ ಶಾಕ್! 17 ಲಕ್ಷಕ್ಕೂ ಹೆಚ್ಚು ಖಾತೆಗಳು ಬ್ಯಾನ್
3 ಅತ್ಯಂತ ವಿಶಿಷ್ಟ ಕೊಡುಗೆಗಳು ಇಲ್ಲಿವೆ
1. ಡೇಟಾ ಡಿಲೈಟ್ಸ್ (Data Delights) :
ಮೊದಲನೆಯದಾಗಿ, ಕಂಪನಿಯು ಇತ್ತೀಚೆಗೆ ಸೇರಿಸಿರುವ ವೋಡಾದ ವಿಶಿಷ್ಟ ಕೊಡುಗೆ 'ಡೇಟಾ ಡಿಲೈಟ್ಸ್' (Data Delights) ಬಗ್ಗೆ ನೋಡೋಣ. ಈ ಯೋಜನೆಯಲ್ಲಿ, ಬಳಕೆದಾರರು ಉಚಿತ ಮಾಸಿಕ 2GB ತುರ್ತು ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ತಮ್ಮ ಆಯ್ಕೆಯ ಪ್ರಕಾರ ದಿನಕ್ಕೆ ಎರಡು ಬಾರಿ ಅಥವಾ ಮರುದಿನ 1GB ಯಂತೆ ಬಳಸಬಹುದು. ಇದಕ್ಕಾಗಿ, ಮಾಸಿಕ ಬಳಕೆದಾರರು ಡೇಟಾವನ್ನು ಮರುಹೊಂದಿಸಬೇಕಾಗುತ್ತದೆ.
2. ವಾರಾಂತ್ಯದ ಡೇಟಾ ರೋಲ್ಓವರ್ (Weekend Data Rollover) :
ಕಂಪನಿಯ ಎರಡನೇ ವಿಶಿಷ್ಟ ಕೊಡುಗೆ 'Weekend Data Rollover'. ವಾರಾಂತ್ಯದ ಡೇಟಾ ರೋಲ್‌ಓವರ್ ಕೊಡುಗೆಯನ್ನು ಬಳಕೆದಾರರು ತಮ್ಮ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಬಳಸಬಹುದು. ಬಳಕೆದಾರರು ಡೇಟಾವನ್ನು ಉಳಿಸಿದರೆ, ವಾರಾಂತ್ಯದಲ್ಲಿ ಆ ಡೇಟಾವನ್ನು ಬಳಸಬಹುದು. ಆದರೆ, ಆ ವಾರದ ಡೇಟಾವನ್ನು ಆ ವಾರವೇ ಬಳಸಬೇಕಾಗುತ್ತದೆ. ಯಾವುದೇ ವಾರದ ಡೇಟಾವನ್ನು ಇನ್ಯಾವುದೋ ವಾರದಲ್ಲಿ ಬಳಸಲಾಗುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ : ಈ ರೀತಿ ಮಾಡಿದರೆ ಯಾವತ್ತೂ ಫೋನ್ ನಲ್ಲಿರಲಿದೆ ಫುಲ್ ನೆಟ್ ವರ್ಕ್ , ಒಂದು ನಿಮಿಷಕ್ಕೂ ಸಿಗ್ನಲ್ ತಪ್ಪುವುದಿಲ್ಲ
3. ಬಿಂಜ್ ಆಲ್ ನೈಟ್ (Bing All Night) :
ಮೂರನೇ ವಿಶಿಷ್ಟ ಕೊಡುಗೆ 'ಬಿಂಗ್ ಆಲ್ ನೈಟ್' (Bing All Night). ಇದು ಅತ್ಯಂತ ವಿಶೇಷವಾದ ಕೊಡುಗೆಯಾಗಿದೆ. ಇದರಲ್ಲಿ ಬಳಕೆದಾರರಿಗೆ ಪ್ರತಿ ರಾತ್ರಿ 12 ರಿಂದ 6 ಗಂಟೆಯವರೆಗೆ ಅನಿಯಮಿತ ಮೊತ್ತಕ್ಕೆ ಹೆಚ್ಚಿನ ವೇಗದ ಡೇಟಾವನ್ನು (High Speed Data) ಬಳಸಲು ಅನುಮತಿ ಸಿಗುತ್ತದೆ. ಈ ಅವಧಿಯಲ್ಲಿ ಬಳಸಲಾದ ಡೇಟಾವು ದಿನದ FUP ಡೇಟಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಮನರಂಜನೆಗಾಗಿಸಿಗಲಿದೆ ಭಾರೀ ಕೊಡುಗೆ :
ಕಂಪನಿಯು ತನ್ನ ಉಳಿದ ಯೋಜನೆಗಳೊಂದಿಗೆ ಬಳಕೆದಾರರಿಗೆ Vi Movie ಮತ್ತು TV ಪ್ರಯೋಜನಗಳನ್ನು ಸಹ ನೀಡುತ್ತದೆ. ಇದು Vodafone Idea ದಿಂದ ನೀಡಲ್ಪಡುವ OTT ಕೊಡುಗೆಯಾಗಿದೆ. 299 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಬಳಕೆದಾರರು ಈ ಪ್ರಯೋಜನವನ್ನು ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.