ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!
ಕೊಲ್ಕತ್ತಾ ಮೂಲದ ಹೆಲ್ತ್ ಸ್ಟಾರ್ಟಪ್ ಕಂಪನಿಯೊಂದು ಕೇರ್ ಪ್ಲಿಕ್ಸ್ ವೈಟಲ್ಸ್ CarePlix Vital`s ಎಂಬ ಆ್ಯಪ್ ಡೆವಲಪ್ ಮಾಡಿದೆ. ಇದನ್ನು ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ರಕ್ತದಲ್ಲಿ ಆಕ್ಸಿಜನ್ ಲೆವೆಲ್ , ಪಲ್ಸ್ ಲೆವೆಲ್ ಮತ್ತು ಉಸಿರಾಟದ ಲೆವೆಲ್ ಮಾನಿಟರ್ ಮಾಡಬಹುದು.
ನವದೆಹಲಿ : ಕರೊನಾ ಕಾಲದಲ್ಲಿ ಆಕ್ಸಿಮೀಟರ್ ಒಂದು ಅನಿವಾರ್ಯ ಸಾಧನ. ಇದೀಗ ನೀವು ಪ್ರತ್ಯೇಕ ಆಕ್ಸಿಮೀಟರ್ (Oximeter) ಖರೀದಿಸಬೇಕಾದ ಅಗತ್ಯವಿಲ್ಲ. ಮೊಬೈಲಿನಲ್ಲೇ ನಿಮ್ಮ ಆಕ್ಸಿಜನ್ ಲೆವೆಲ್ (Oxygen level) ಪತ್ತೆ ಮಾಡಬಹುದು.
ಕೇರ್ ಪ್ಲಿಕ್ಸ್ ವೈಟಲ್ಸ್ CarePlix Vital's ಆ್ಯಪ್ :
ಕೊಲ್ಕತ್ತಾ ಮೂಲದ ಹೆಲ್ತ್ ಸ್ಟಾರ್ಟಪ್ ಕಂಪನಿಯೊಂದು ಕೇರ್ ಪ್ಲಿಕ್ಸ್ ವೈಟಲ್ಸ್ CarePlix Vital's ಎಂಬ ಆ್ಯಪ್ ಡೆವಲಪ್ ಮಾಡಿದೆ. ಇದನ್ನು ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ರಕ್ತದಲ್ಲಿ ಆಕ್ಸಿಜನ್ ಲೆವೆಲ್ (Oxygen level) , ಪಲ್ಸ್ ಲೆವೆಲ್ ಮತ್ತು ಉಸಿರಾಟದ ಲೆವೆಲ್ ಮಾನಿಟರ್ ಮಾಡಬಹುದು. ದುಬಾರಿ ದುಡ್ಡು ತೆತ್ತು ಇನ್ನು ಅಕ್ಸಿಮೀಟರ್ (Oximeter) ಖರೀದಿಸುವ ಅಗತ್ಯವಿಲ್ಲ.
ಇದನ್ನೂ ಓದಿ : Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?
ಆಕ್ಸಿಜನ್ ಸ್ಯಾಚುರೇಶನ್ ರೇಟ್ ನೋಡುವುದು ಹೇಗೆ.?
BGR.inನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಈ ಆ್ಯಪ್ ನಲ್ಲಿ ಆಕ್ಸಿಜನ್ ರೇಟ್ ನೋಡಬೇಕಾದರೆ ಮಾಡಬೇಕಾಗಿದ್ದು ಇಷ್ಟೇ. ಸ್ಮಾರ್ಟ್ ಫೋನ್ (Smartphone) ಹಿಂಬದಿ ಕೆಮೆರಾ ಮತ್ತು ಫ್ಲ್ಯಾಶ್ ಲೈಟ್ ಇರುವ ಕಡೆ ಬೆರಳು ಇಡಬೇಕು. ಕೆಲವೇ ಕ್ಷಣಗಳಲ್ಲಿ ನಿಮ್ಮ ಆಕ್ಸಿಜನ್ ಸಾಚ್ಯುರೇಶನ್ ಲೆವೆಲ್, ಪಲ್ಸ್ ಲೆವೆಲ್ ಮತ್ತು ಉಸಿರಾಟದ ದರ ಆ್ಯಪ್ ನಲ್ಲಿ ಡಿಸ್ ಪ್ಲೆ ಆಗುತ್ತದೆ.
ಶೇ.98 ರಷ್ಟು ನಿಖರ ಫಲಿತಾಂಶ :
CarePlix Vital's ಕಂಪನಿಯ ಅಧಿಕಾರಿಗಳ ಪ್ರಕಾರ ಈ ಆ್ಯಪ್ (App) ಉಪಯೋಗಿಸಬೇಕಾದರೆ ನೊಂದಣಿ ಮಾಡಬೇಕಾಗುತ್ತದೆ. ಸಾಕಷ್ಟು ಪ್ರಯೋಗಗಳ ಬಳಿಕ ಈ ಆ್ಯಪ್ ಡೆವಲಪ್ ಮಾಡಲಾಗಿದೆ. ಕೇರ್ ಫ್ಲಿಕ್ಸ್ ವೈಟಲ್ ಶೇ. 96 ರಷ್ಟು ನಿಖರವಾಗಿ ಹಾರ್ಟ್ ರೇಟ್( Heart rate) , ಶೇ. 98ರಷ್ಟು ನಿಖರವಾಗಿ ಆಕ್ಸಿಜನ್ ಸ್ಯಾಚುರೇಶನ್ ರೇಟ್ ತೋರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Gmailನ ಈ ವೈಶಿಷ್ಟ್ಯಗಳು ಬಹುತೇಕ ಬಳಕೆದಾರರಿಗೆ ತಿಳಿದಿಲ್ಲ... ನಿಮಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.