Whatsapp call : ವಾಟ್ಸ್ ಆಪ್ ನಲ್ಲಿಯೂ ಒಂದೇ ಸಲ 50 ಜನರಿಗೆ ಕರೆ ಮಾಡಬಹುದು
ವಾಟ್ಸಾಪ್ ಮೆಸೆಂಜರ್ ಆಪ್ ಬಗ್ಗೆ ಹೇಳುವುದಾದರೆ, ವಾಟ್ಸಾಪ್ ನಲ್ಲಿಯೂ ವೀಡಿಯೊ ಕರೆ ಮಾಡುವ ಸೌಲಭ್ಯವಿದೆ. ಇಲ್ಲೂ ಏಕಕಾಲದಲ್ಲಿ 50 ಕ್ಕೂ ಹೆಚ್ಚು ಜನರೊಂದಿಗೆ ಗ್ರೂಪ್ ವೀಡಿಯೊ ಕರೆಗಳನ್ನು ಮಾಡಬಹುದು.
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮತ್ತು Calling Appಗಳು ಲಭ್ಯವಿವೆ. ಈ ಎಲ್ಲಾ ಆಪ್ ಗಳು ಒಂದಕ್ಕಿಂತ ಒಂದು ಭಿನ್ನ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ನೀಡುತ್ತವೆ. ಇನ್ನು ವಾಟ್ಸಾಪ್ ಮೆಸೆಂಜರ್ (Whatsapp messenger) ಆಪ್ ಬಗ್ಗೆ ಹೇಳುವುದಾದರೆ, ವಾಟ್ಸಾಪ್ ನಲ್ಲಿಯೂ ವೀಡಿಯೊ ಕರೆ ಮಾಡುವ ಸೌಲಭ್ಯವಿದೆ. ಇಲ್ಲೂ ಏಕಕಾಲದಲ್ಲಿ 50 ಕ್ಕೂ ಹೆಚ್ಚು ಜನರೊಂದಿಗೆ ಗ್ರೂಪ್ ವೀಡಿಯೊ ಕರೆಗಳನ್ನು (Group video call) ಮಾಡಬಹುದು.
ಇದರಲ್ಲಿ, ಮೆಸೆಂಜರ್ ಅಪ್ಲಿಕೇಶನ್ ಬಳಸಿ ಅಥವಾ ಮೊಬೈಲ್ ಅಥವಾ ವೆಬ್ ಬ್ರೌಸರ್‌ನಲ್ಲಿ ಮೆಸೆಂಜರ್ ವೆಬ್‌ಸೈಟ್ ತೆರೆಯುವ ಮೂಲಕ, ದೊಡ್ಡ ಗ್ರೂಪ್ ನೊಂದಿಗೆ ವೀಡಿಯೊ ಚಾಟ್ ಮಾಡಬಹುದು. WhatsAppನಲ್ಲಿ ಗ್ರೂಪ್ ಚಾಟ್ ಮಾಡುವುದಾದರೆ, ತಮ್ಮ ಕಾಂಟಾಕ್ಟ್ ಗಳಿಗೆ ಇಂವೈಟ್ ಲಿಂಕ್ ಗಳನ್ನು ಕಳುಹಿಸಬಹುದು. ಈ ಮೂಲಕ ನಿಮ್ಮ ಗ್ರೂಪ್ ಚಾಟ್ ಗೆ ಸೇರಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಫೇಸ್‌ಬುಕ್ (Facebook) ಖಾತೆ ಅಥವಾ ಮೆಸೆಂಜರ್ ಅಪ್ಲಿಕೇಶನ್ ಹೊಂದಿಲ್ಲದಿದ್ದರೂ ಸಹ ಲಿಂಕ್ ಮೂಲಕ ಗ್ರೂಪ್ ವಿಡಿಯೋಗೆ (group video) ಜಾಯಿನ್ ಆಗಬಹುದು.
ಇದನ್ನೂ ಓದಿ : ಎಚ್ಚರವಿರಲಿ..! ನಿಮ್ಮ ವಾಟ್ಸಾಪ್ ಚಾಟ್ಸ್ ಮತ್ತು ಖಾಸಗೀ ಫೋಟೋಸ್ ಹೀಗೆ ಲೀಕ್ ಆಗಬಹುದು..!
ಹಾಗಿದ್ದರೆ ಇದನ್ನು ಉಪಯೋಗಿಸುವುದು ಹೇಗೆ ?
1. WhatsApp ವೆಬ್ ಅಥವಾ ಡೆಸ್ಕ್‌ಟಾಪ್ ತೆರೆಯಿರಿ
2. ಯಾರನ್ನು ವಿಡಿಯೋ ಕಾಲಿಂಗ್ ಗೆ ವೈಟ್ ಮಾಡಲು ಬಯಸುತ್ತೀರೋ ಅವರ ಚಾಟ್ ಗೆ ಹೋಗಿ
3. ಸ್ಕ್ರೀನ್ ಮೇಲೆ ಕಾಣುವ ಆಟಾಚ್ಮೆಂಟ್ ಐಕಾನ್ ಮೇಲೆ ಟ್ಯಾಪ್ ಮಾಡಿ
4. ಆಟ್ಯಾಚ್ ಮೆಮಟ್ ಐಕಾನ್ ಓಪನ್ ಮಾಡಿದ ಕೂಡಲೇ ಇಲ್ಲಿ ಅನೇಕ ಆಯ್ಕೆಗಳು ಕಾಣುತ್ತವೆ. ಇಲ್ಲಿ ಡಾಕ್ಯುಮೆಂಟ್, ಕ್ಯಾಮೆರಾ, ಗ್ಯಾಲರಿ, ಆಡಿಯೋ, ಪೇಮೆಂಟ್ ಮತ್ತು ರೂಮ್ ನಂಥಹ ಆಯ್ಕೆಗಳಿರುತ್ತವೆ.
5. ಇಲ್ಲಿ 'Rooms' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
6.'Rooms' ಮೇಲೆ ಕ್ಲಿಕ್ ಮಾಡುತ್ತಿದ್ದಂತೆ, continue in messanger to create a room ಆಯ್ಕೆಯನ್ನು ನೋಡುತ್ತೀರಿ
7. ಇಲ್ಲಿ ’Continue in Messenger’ ಆಯ್ಕೆಯನ್ನು ಕ್ಲಿಕ್ ಮಾಡಿ.
ಇಷ್ಟಾದ ಮೇಲೆ ಈ ಸೌಲಭ್ಯವನ್ನು ಬಳಸಬಹುದು.
ಇದನ್ನೂ ಓದಿ : ಹೀಗೆ ಮಾಡಿದರೆ ವಾಟ್ಸ್ಆಪ್ ನಲ್ಲಿ ಡಿಲೀಟ್ ಮಾಡಲಾದ ಮೆಸೇಜನ್ನು ಕೂಡಾ ಓದಬಹುದು
ಇದರೊಂದಿಗೆ, ವಾಟ್ಸಾಪ್ ನಲ್ಲಿ ಸಂದೇಶಗಳನ್ನು ಕಳುಹಿಸುವುದು ಈಗ ತುಂಬಾ ಸುಲಭವಾಗುತ್ತದೆ. Fast Playback ವೈಶಿಷ್ಟ್ಯದ ಮೂಲಕ, ಬಳಕೆದಾರರು ಧ್ವನಿ ಸಂದೇಶಗಳಿಗಾಗಿ ಪ್ಲೇಬ್ಯಾಕ್ ವೇಗ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು. ಈ ಮೂಲಕ, ಒಬ್ಬರ ಧ್ವನಿಯ ಪಿಚ್ ಅನ್ನು ಬದಲಾಯಿಸದೆ ಪ್ಲೇಬ್ಯಾಕ್ ವೇಗವನ್ನು 2 ಪಟ್ಟು ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.