ನವದೆಹಲಿ : ವಾಟ್ಸಾಪ್ (WhatsApp) ಅನ್ನುವುದು ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಮೆಸೇಜಿಂಗ್ ಆಪ್ ಆಗಿದೆ. ಪೋನ್ ಮಾಡಿ ಮಾತನಾಡುವ ಬದಲು ಹೇಳಬೇಕಾಗಿರುವುದನ್ನು ಟೈಪ್ ಮಾಡಿದರೆ ಸಾಕು. ಸುಲಭವಾಗಿ ಸಂದೇಶ ಹೋಗಿ ಬಿಡುತ್ತದೆ. ಎಷ್ಟೋ ಸಲ ಕೆಲವರು ಮೆಸೇಜ್ ಕಳುಹಿಸಿ, ನಂತರ ಡಿಲೀಟ್ ಮಾಡಿ ಬಿಡುತ್ತಾರೆ. ಹೀಗಾದಾಗ ಏನು ಡಿಲೀಟ್ ಮಾಡಲಾಗಿದೆ ಎಂದು ಎದುರಿನವರನ್ನು ಯೋಚನೆಗೆ ದೂಡುವುದು ಸಹಜ. ಈಗ ಈ ಟ್ರಿಕ್ ಬಳಸಿದರೆ ಡಿಲೀಟ್ ಮಾಡಲಾದ ಮೆಸೇಜನ್ನು ಕೂಡಾ ಸುಲಭವಾಗಿ ಓದಬಹುದು. ಇದಕ್ಕಾಗಿ ಥರ್ಡ್ ಪಾರ್ಟಿ ಸಹಾಯ ಪಡೆದುಕೊಳ್ಳಬೇಕಾಗುತ್ತದೆ.
ಹಾಗಿದ್ದರೆ ಡಿಲೀಟ್ ಮಾಡಲಾದ ಮೆಸೇಜನ್ನು ಓದಲು ಏನು ಮಾಡಬೇಕು ನೋಡೋಣ..
1. ಮೊದಲಿಗೆ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ WhatsRemoved+ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
2. ಫೋನಿನಲ್ಲಿ WhatsRemoved+ ಇನ್ ಸ್ಟಾಲ್ ಆದ ನಂತರ ಅದನ್ನು ಓಪನ್ ಮಾಡಿ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.
3. ಅಪ್ಲಿಕೇಶನ್ ಕಾರ್ಯನಿರ್ವಹಿಸಲು, ನೀವು ಫೋನ್ ನೊಟಿಫಿಕೇಶನ್ ನ ಆಕ್ಸಸ್ ನೀಡಬೇಕಾಗುತ್ತದೆ
4. ನೀವು ಇದನ್ನು ಒಪ್ಪುವುದಾದರೆ Yes ಆಯ್ಕೆಯನ್ನು ಕ್ಲಿಕ್ ಮಾಡಿ.
5.ಇದರ ನಂತರ, ಯಾವ ನೊಟಿಫಿಕೇಶನ್ ಅನ್ನು ಉಳಿಸಲು ಇಚ್ಛಿಸುತ್ತಿರೋ ಆ Application ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ : Samsung Offer: ಈ ಸ್ಯಾಮ್ಸಂಗ್ ಫೋನ್ನಲ್ಲಿ ಸಿಗುತ್ತಿದೆ 10,000 ರೂ.ವರೆಗೆ Discount
6. ಡಿಲೀಟ್ ಆದ ವಾಟ್ಸಾಪ್ ಸಂದೇಶಗಳನ್ನು ಓದಲು, ವಾಟ್ಸಾಪ್ ಸಂದೇಶಗಳನ್ನು enable ಮಾಡಿ ನಂತರ continue ಕ್ಲಿಕ್ ಮಾಡಿ.
7.ಇದಲ್ಲದೆ, ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ ಇತ್ಯಾದಿಗಳನ್ನು ಒಳಗೊಂಡಂತೆ ಇತರ ಆಯ್ಕೆಗಳು ಸಹ ಲಭ್ಯವಿರುತ್ತವೆ.
8. ಯಾವ ಫೈಲ್ ಅನ್ನು ಸೇವ್ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ
9.ಇದರ ನಂತರ ಹೊಸ ಪೇಜ್ ತೆರೆಯುತ್ತದೆ. ಇಲ್ಲಿ ಡಿಲೀಟ್ ಮಾಡಲಾದ ಎಲ್ಲಾ ಮೆಸೇಜ್ ಗಳು ಲಭ್ಯವಿರುತ್ತದೆ.
10. ಸ್ಕ್ರೀನ್ ನ ಮೇಲೆ ಡಿಟೆಕ್ಟ್ ಆಪ್ಶನ್ ಬಳಿಯಿರುವ ವಾಟ್ಸಾಪ್ (Whatsapp) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
11. ಈ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿದ ನಂತರ, ಡಿಲೀಟ್ ಮಾಡಲಾದ ಎಲ್ಲಾ ವಾಟ್ಸಾಪ್ ಸಂದೇಶಗಳನ್ನು ಓದಲು ಸಾಧ್ಯವಾಗುತ್ತದೆ.
ಇದನ್ನೂ ಓದಿ : Feature Phone: 1,000 ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಿ ಉತ್ತಮ ವೈಶಿಷ್ಟ್ಯದ ಫೀಚರ್ ಫೋನ್
ಇದರೊಂದಿಗೆ, ಈಗ ವಾಟ್ಸಾಪ್ನಲ್ಲಿ ಸಂದೇಶಗಳನ್ನು ಕಳುಹಿಸುವುದು ಕೂಡಾ ಬಹಳ ಸುಲಭ. Fast Playback ವೈಶಿಷ್ಟ್ಯದ ಮೂಲಕ, ಬಳಕೆದಾರರು ವಾಯ್ಸ್ ಮೆಸೇಜ್ ಗಾಗಿ, ಪ್ಲೇಬ್ಯಾಕ್ ಸ್ಪೀಡ್ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು. ಈ ಮೂಲಕ, ಒಬ್ಬರ ಧ್ವನಿಯ ಪಿಚ್ ಅನ್ನು ಬದಲಾಯಿಸದೆ, ಪ್ಲೇಬ್ಯಾಕ್ ವೇಗವನ್ನು 2 ಪಟ್ಟು ಹೆಚ್ಚಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.