ನವದೆಹಲಿ : ವಾಟ್ಸಾಪ್ ಚಾಟ್ ಲೀಕ್ (whatsapp chat leak) ಆಗುವುದು. ವಾಟ್ಸಾಪ್ ಖಾಸಗೀ ಫೋಟೋ ಲೀಕ್ ಆಗುವ ಸುದ್ದಿಗಳನ್ನು ನೀವು ನೋಡುತ್ತಲೇ ಇರುತ್ತೀರಿ. ವಾಟ್ಸಾಪ್ ಚಾಟ್ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಎಂದು ಹೇಳುತ್ತದೆ ವಾಟ್ಸಾಪ್ (whatsapp) ಕಂಪನಿ. ಅದರರ್ಥ ವಾಟ್ಸಾಪ್ ಚಾಟ್ ಅನ್ನು ಕಳುಹಿಸಿದವರಿಗೆ ಮತ್ತು ರಿಸೀವ್ ಮಾಡಿದವರಿಗೆ ಮಾತ್ರ ಓದಲು ಸಾಧ್ಯ. ಹೀಗಿರುವಾಗ ವಾಟ್ಸಾಪ್ ಚಾಟ್ ಹೇಗೆ ಲೀಕ್ ಆಗುತ್ತದೆ. ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ವಾಟ್ಸಾಪ್ ಚಾಟ್ ಎಲ್ಲಿ ಲೀಕ್ ಆಗಬಹುದು ಗೊತ್ತಾ..?
ವಾಟ್ಸಾಪ್ (whatsapp) ಚಾಟ್ ಬ್ಯಾಕಪ್ ಗೂಗಲ್ ಡ್ರೈವ್ (google drive)ನಲ್ಲಿರುತ್ತದೆ. ನೀವು ಸ್ವಯಂ ನಿಮ್ಮ ಇಮೇಲ್ ಐಡಿ ಮೂಲಕ ಇದಕ್ಕೆ ಲಿಂಕ್ ಮಾಡಿರುತ್ತೀರಿ. ವಾಟ್ಸಾಪ್ ಬ್ಯಾಕಪ್ ಸೆಟ್ಟಿಂಗ್ ಗೆ ಹೋಗಿ ಇದನ್ನು ನೋಡಬಹುದಾಗಿದೆ. ತುಂಬಾ ಜನ ತಮ್ಮ ಚಾಟ್ ಆಟೋ ಬ್ಯಾಕಪ್ ಇಟ್ಟಿರುತ್ತಾರೆ. ಅಂದರೆ, ಚಾಟ್ಸ್ ತನ್ನಿಂತಾನಾಗಿಯೇ ಗೂಗಲ್ ಡ್ರೈವ್ ನಲ್ಲಿ ಬ್ಯಾಕಪ್ ಆಗುತ್ತದೆ. ಇದರಿಂದ ಹಳೆಯ ಚಾಟ್ಸ್ ಹುಡುಕುವಾಗ ಮತ್ತು ಪೋನ್ ಬದಲಾಯಿಸುವಾಗ ಸುಲಭವಾಗುತ್ತದೆ. ನಿಮ್ಮ ವಾಟ್ಸಾಪ್ ಚಾಟ್ ಲೀಕ್ (whats app chat leak) ಆಗುವುದು ಇಲ್ಲಿಯೇ. ಹೇಗೆ ಗೊತ್ತಾ..? ಸಮಸ್ಯೆ ಇರುವುದು ಇಲ್ಲಿಯೇ.
ಇದನ್ನೂ ಓದಿ : ಅದ್ಭುತ ವೈಶಿಷ್ಟ್ಯಗಳೊಂದಿಗೆ ಲಾಂಚ್ ಆಗಲಿದೆ Xiaomi Mi 11 Lite ಸ್ಮಾರ್ಟ್ ಫೋನ್
ವಾಟ್ಸಾಪ್ ಚಾಟ್ ಹೀಗೆ ಲೀಕ್ ಆಗುತ್ತದೆ :
ವಾಟ್ಸಾಪ್ ಚಾಟ್ (whatsapp chat) ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಹೌದು. ಆದರೆ, ಆ ಚಾಟ್ ಗೂಗಲ್ ಡ್ರೈವ್ ನಲ್ಲಿ ಬ್ಯಾಕಪ್ ಆಗಿ ಬಿಡುತ್ತದೆ. ಈ ಗೂಗಲ್ ಡ್ರೈವ್ ಎನ್ ಕ್ರಿಪ್ಟೆಡ್ ಅಲ್ಲ. ಚಾಟ್ಸ್ ನಲ್ಲಿರುವ ಫೋಟೋಸ್ ವಿಡಿಯೋಸ್ ಗೂಗಲ್ ಡ್ರೈವ್ ನಲ್ಲಿ ಸೇವ್ ಆಗುತ್ತಿರುತ್ತದೆ. ಹೀಗಿರುವಾಗ ಯೂಸರ್ ಜಿಮೇಲ್ (gmail) ಅಕೌಂಟ್ ಅಕ್ಸೆಸ್ ಮಾಡಿ ಬಿಟ್ಟರೆ ಎಲ್ಲಾ ಚಾಟ್ ಹಿಸ್ಟರಿ ಮತ್ತು ಬ್ಯಾಕಪ್ ಪೋಟೋಸ್ ಮತ್ತು ವಿಡಿಯೋ ಸಹಿತ ಸಿಕ್ಕಿ ಬಿಡುತ್ತದೆ. ತುಂಬಾ ಕೇಸ್ ಗಳಲ್ಲಿ ವಾಟ್ಸಾಪ್ ಚಾಟ್ ಲೀಕ್ ಆಗಿರುವುದು ಇಲ್ಲಿಯೇ.
ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಆಗುತ್ತಿದೆ ಗೂಗಲ್ ಡ್ರೈವ್:
ಖುಷಿಯ ಸುದ್ದಿ ಏನೆಂದರೆ ಗೂಗಲ್ ಡ್ರೈವ್ ಕೂಡಾ ಇದೀಗ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಆಗುತ್ತಿದೆ. ಅಂದರೆ ಮುಂದಿನ ದಿನಗಳಲ್ಲಿ ಬ್ಯಾಕಪ್ (backup)ಕೂಡಾ ಸೇಫ್ ಆಗಿರುತ್ತದೆ. ಅಲ್ಲಿಯ ತನಕ ಅಲರ್ಟ್ ಆಗಿರುವುದು ಬಿಟ್ಟರೆ ಬೇರೆ ಮಾರ್ಗ ಇಲ್ಲ.
ಇದನ್ನೂ ಓದಿ : ಹೀಗೆ ಮಾಡಿದರೆ ವಾಟ್ಸ್ಆಪ್ ನಲ್ಲಿ ಡಿಲೀಟ್ ಮಾಡಲಾದ ಮೆಸೇಜನ್ನು ಕೂಡಾ ಓದಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ