ನವದೆಹಲಿ : ನೋಟು ಅಮಾನ್ಯೀಕರಣವಾಗಿ ದೇಶ 5 ವರ್ಷ ಪೂರೈಸಿದೆ. ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಡಿಜಿಟಲ್ ಪಾವತಿಗಳು ಚಾಲ್ತಿಗೆ ಬಂದವು. ಅದಕ್ಕೂ ಮೊದಲು ಹೆಚ್ಚಿನ ಭಾರತೀಯರು ನಗದು ವಹಿವಾಟಿನ ಮೇಲೆ ಮಾತ್ರ ಅವಲಂಬಿತರಾಗಿದ್ದರು. ಈಗ ಟೀ ಅಂಗಡಿಯಾಗಲೀ, ತರಕಾರಿ ಮಾರುವವರಾಗಲೀ, ದೊಡ್ಡ ಶೋರೂಂ ಆಗಲೀ ಎಲ್ಲಾ ಕಡೆಯೂ ಯುಪಿಐ ಕೋಡ್ (UPI Code) ಅಟ್ಯಾಚ್ ಆಗಿರುತ್ತದೆ.  ಡಿಜಿಟಲ್ ಪಾವತಿಯಲ್ಲಿಯೂ ಯುಪಿಐ ಅತ್ಯಂತ ಮಹತ್ವದ್ದಾಗಿದೆ. ಹೆಚ್ಚಿನ ವಹಿವಾಟುಗಳು UPI (Unified Payments Interface) ಮೋಡ್‌ನಲ್ಲಿ ಮಾತ್ರ ನಡೆಯುತ್ತವೆ.


COMMERCIAL BREAK
SCROLL TO CONTINUE READING

ಡಿಜಿಟಲ್ ಪಾವತಿ ಮಾಡುವುದು ಬಹಳ ಮುಖ್ಯ :
ಇಂದಿನ ಸಮಯದಲ್ಲಿ, UPI ವಹಿವಾಟುಗಳನ್ನು ಮಾಡಲು ಯಾವುದೇ UPI ಅಪ್ಲಿಕೇಶನ್ ಮತ್ತು ಇಂಟರ್ನೆಟ್ ಅನ್ನು ಹೊಂದಿರುವುದು ಅವಶ್ಯಕ. ಆದರೆ ಸ್ಮಾರ್ಟ್  ಫೋನ್(Smartphone)  ಇಲ್ಲದೇ ಇಂಟರ್ ನೆಟ್ ಇಲ್ಲದೆಯೂ ಯುಪಿಐ ಮೂಲಕ ವಹಿವಾಟು ನಡೆಸಬಹುದು ಎಂಬುದು ನಿಮಗೆ ಗೊತ್ತಿದೆಯೇ? ಇಂಟರ್ನೆಟ್ ಇಲ್ಲದೆಯೇ UPI ಪಾವತಿಯನ್ನು ಮಾಡಬಹುದಾದ ಟ್ರಿಕ್ ಒಂದಿದೆ. 


ಇದನ್ನೂ ಓದಿ :  ಐದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ Xiaomi 5G ಸ್ಮಾರ್ಟ್ ಫೋನ್


ಆಫ್‌ಲೈನ್ ವಹಿವಾಟು ಮಾಡುವುದು ಹೇಗೆ ?
ಆಫ್‌ಲೈನ್ ಪಾವತಿಯನ್ನು (Offline payment) ಮಾಡಲು, ನೀವು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ USSD ಕೋಡ್ ಅನ್ನು ಡಯಲ್ ಮಾಡಬೇಕು.  ಇದರ ಸಂಪೂರ್ಣ ವಿವರ ಇಲ್ಲಿದೆ. 


1. ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ *99# ಅನ್ನು ಡಯಲ್ ಮಾಡಿ. ಇದರ ನಂತರ ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ.


2. ಈ ಸಂದೇಶವನ್ನು ಎಚ್ಚರಿಕೆಯಿಂದ ನೋಡಿ, ಇದರಲ್ಲಿ ನೀವು ಖಾತೆಯ ಬ್ಯಾಲೆನ್ಸ್, ಪ್ರೊಫೈಲ್ ವಿವರಗಳು, , ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್ ರಿಕ್ವೆಸ್ಟ್ , ಸೆಂಡ್ ಮನಿ UPI,  UPI ಪಿನ್ ಅನ್ನು ನಿರ್ವಹಿಸುವ ಆಯ್ಕೆಯನ್ನು ಕಾಣಬಹುದು. 


3. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


4. ನೀವು ಯಾರಿಗಾದರೂ ಹಣವನ್ನು ಕಳುಹಿಸಲು ಬಯಸಿದರೆ, Send Money ಮೇಲೆ ಕ್ಲಿಕ್ ಮಾಡಿ.


5 ಈಗ ನೀವು ಹಣವನ್ನು ಕಳುಹಿಸಲು ಬಯಸುವ ವ್ಯಕ್ತಿಯ ಮಾಹಿತಿಯನ್ನು ಕೇಳಲಾಗುತ್ತದೆ. ಇಲ್ಲಿ ಬಹಳ ಆಪ್ಷನ್ ಇರುತ್ತದೆ. ಅತ್ಯಂತ ಸುಲಭದ ಮಾರ್ಗ ಎಂದರೆ ಮೊಬೈಲ್ ನಂಬರ್ ಹಾಕುವುದು. ಆದರೆ ಬ್ಯಾಂಕ್ ನಲ್ಲಿ (Bank) ರಿಜಿಸ್ಟರ್ ಆದ ಮೊಬೈಲ್ ನಂಬರ್ ಅನ್ನೇ ಹಾಕಬೇಕು. 


ಇದನ್ನೂ ಓದಿ : Whatsappನಲ್ಲಿ Block ಮಾಡಲೇ ಬೇಕೆಂದಿಲ್ಲ, ಹೀಗೆ ಮಾಡಿದರೂ ಮೆಸೇಜ್ ಮಾಡಿ ಕಿರಿ ಕಿರಿ ಉಂಟು ಮಾಡುವವರಿಂದ ತಪ್ಪಿಸಿಕೊಳ್ಳಬಹುದು


6. ನೀವು ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಬಯಸದಿದ್ದರೆ,  UPI ಐಡಿ ಅಥವಾ ಬ್ಯಾಂಕ್ ಖಾತೆಯ (Bank account) ವಿವರಗಳನ್ನು ಸಹ ನಮೂದಿಸಬಹುದು.


7.ಅಗತ್ಯವಿರುವ ವಿವರಗಳನ್ನು ನಮೂದಿಸಿದ ನಂತರ, ಸಬ್ಮಿಟ್ ಮಾಡುವಾಗ ವ್ಯಕ್ತಿಯ ಹೆಸರು ಬರುತ್ತದೆ. ಒಮ್ಮೆ ಹೆಸರನ್ನು ಪರಿಶೀಲಿಸಿ, ಕಳುಹಿಸಬೇಕಾಗಿರುವ ಮೊತ್ತವನ್ನು ನಮೂದಿಸಿ.


8. ಇದರ ನಂತರ ರೆಡಿ ಆಪ್ಷನ್ ಕಾಣಿಸಿಕೊಳ್ಳುತ್ತದೆ, ಈಗ ಅದರ ಮೇಲೆ ಕ್ಲಿಕ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ರಿಮಾರ್ಕ್ಸ್ ಆಯ್ಕೆ ಕಾಣಿಸುತ್ತದೆ.  1 ಅನ್ನು ಒತ್ತುವ ಮೂಲಕ ಸ್ಕಿಪ್ ಮಾಡಿ. ಈಗ ನಿಮಗೆ UPI ಪಿನ್ ಕೇಳಲಾಗುತ್ತದೆ. ಈಗ ನಿಮ್ಮ ಪಿನ್ ನಮೂದಿಸಿ. ಇದರ ನಂತರ ವಹಿವಾಟು ನಡೆಯುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ