ವಾಟ್ಸಾಪ್ ಹೊಸ ವೈಶಿಷ್ಟ್ಯ: ಪ್ರತಿಯೊಬ್ಬ ಸ್ಮಾರ್ಟ್ಫೋನ್ ಬಳಕೆದಾರರು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಇದೀಗ ವಾಟ್ಸಾಪ್ ಬಳಕೆದಾರರಿಗೆ ಅನೇಕ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳು ಲಭ್ಯವಾಗಲಿವೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಮೆಟಾ ಕಂಪನಿಯು ಈ ವೈಶಿಷ್ಟ್ಯಗಳ ಪ್ರಯೋಗವನ್ನು ಪ್ರಾರಂಭಿಸಲಿದೆ. ಅದಕ್ಕೂ ಮೊದಲು, ಟೆಕ್ ವಿಷಯಗಳನ್ನು ಮೇಲ್ವಿಚಾರಣೆ ಮಾಡುವ ತಜ್ಞರು ವಾಟ್ಸಾಪ್‌ನ ಹೊಸ ವೈಶಿಷ್ಟ್ಯಗಳ ಬಗ್ಗೆ ಅನೇಕ ವಿಷಯಗಳನ್ನು ಸೋರಿಕೆ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್‌ನಲ್ಲಿ ಚಾಟ್ ಮಾಡುವುದು ಈಗ ನಿಮಗೆ ಹೆಚ್ಚು ರೋಮಾಂಚನಕಾರಿಯಾಗಲಿದೆ. ಮೆಟಾ ಕಂಪನಿಯು ಈ ಚಾಟಿಂಗ್‌ನಲ್ಲಿ 5 ಹೊಸ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆ ಹೊಸ ವೈಶಿಷ್ಟ್ಯಗಳೇನು ಎಂದು ತಿಳಿಯೋಣ...


ಇದನ್ನೂ ಓದಿ- ಟೆಕ್ ದೈತ್ಯರಿಂದ ಸುದ್ದಿ ಪ್ರಕಾಶಕರಿಗೆ ನ್ಯಾಯಯುತ ಆದಾಯ ಒದಗಿಸಲು ಸರ್ಕಾರದ ಕ್ರಮ!


ವಾಟ್ಸಾಪ್‌ನ ಈ ವೈಶಿಷ್ಟ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ:
ಟೆಕ್ ವಿಷಯಗಳನ್ನು ಮೇಲ್ವಿಚಾರಣೆ ಮಾಡುವ WABetaInfo ಪ್ರಕಾರ, ಮೆಟಾ ಕಂಪನಿಯು ವಾಟ್ಸಾಪ್‌ನಲ್ಲಿ ಅನೇಕ ಹೊಸ ವೈಶಿಷ್ಟ್ಯಗಳಿಗಾಗಿ ಸಂಶೋಧನೆ ನಡೆಸುತ್ತಿದೆ. ಈ ವೈಶಿಷ್ಟ್ಯಗಳಲ್ಲಿ ಹೆಚ್ಚಿನವು ಬಳಕೆಗೆ ಬಹುತೇಕ ಸಿದ್ಧವಾಗಿವೆ, ಆದರೆ ಅವು ಕೆಲವು ವಾರ ಅಥವಾ ತಿಂಗಳುಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. 


ಸೋರಿಕೆಯಾಗಿರುವ ಮಾಹಿತಿ ಪ್ರಕಾರ ವಾಟ್ಸಾಪ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಶೀಘ್ರದಲ್ಲೇ ಪರಿಚಯಿಸುವ ಸಾಧ್ಯತೆ ಇದೆ.
- ಓದದಿರುವ ಚಾಟ್‌ಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.


- ಬ್ಯುಸಿನೆಸ್ ಅಕೌಂಟ್ ನಲ್ಲಿಯೂ ಸಹ ಕವರ್ ಫೋಟೋಗಳು ಲಭ್ಯವಿರುತ್ತವೆ. 


- Android ಫೋನ್‌ನಿಂದ iPhone ಗೆ ಚಾಟ್‌ಗಳನ್ನು ವರ್ಗಾಯಿಸುವ ಸೌಲಭ್ಯ (ಬೀಟಾ ಅಪ್ಲಿಕೇಶನ್‌ನಲ್ಲಿ).


- ಗುಂಪು ಸದಸ್ಯತ್ವದ ಅನುಮೋದನೆ ವ್ಯವಸ್ಥೆಯನ್ನು ವಾಟ್ಸಾಪ್‌ನಲ್ಲಿ ಅಳವಡಿಸಲಾಗುವುದು.


- ವಿಂಡೋಸ್‌ಗಾಗಿ ಸ್ವಯಂಚಾಲಿತ ಮಾಧ್ಯಮ ಆಲ್ಬಮ್ ಸೌಲಭ್ಯ.


ಇದನ್ನೂ ಓದಿ- ಟ್ರೂಕಾಲರ್ ಇಲ್ಲದೆಯೂ ಕರೆ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿಯಬಹುದು ..!


ಬೀಟಾ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯಗಳು ಲಭ್ಯ:
ನೀವು ವಾಟ್ಸಾಪ್‌ನ ಈ ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಪ್ರಯತ್ನಿಸಲು ಬಯಸಿದರೆ, ನೀವು ಬೀಟಾ ಆವೃತ್ತಿಯನ್ನು ಸೇರಬೇಕಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.