ನವದೆಹಲಿ: ಭಾರತದಲ್ಲಿ ಇಂದಿನಿಂದ OnePlus 9R ಸೇಲ್ ಆರಂಭವಾಗಲಿದೆ.  ಈ  ಫೋನ್ ಅನ್ನು ಅಮೇಜಾನ್ ನಿಂದ (Amazon) ಖರೀದಿಸಿದರೆ, 2000 ರೂಪಾಯಿ ತನಕ ಡಿಸ್ಕೌಂಟ್ ಸಿಗಲಿದೆ. 48 ಮೆಗಾಫಿಕ್ಸೆಲ್ ಕೆಮೆರಾ ಮತ್ತು 4500 ಎಂಎಹೆಚ್ ಬ್ಯಾಟರಿ ಈ ಫೋನಿನ ವಿಶೇಷ ಆಕರ್ಷಣೆ.  OnePlus 9R ಫೋನ್ ಖರೀದಿಸುವ ಮುನ್ನ ಅದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ.


COMMERCIAL BREAK
SCROLL TO CONTINUE READING

OnePlus 9R ವಿಶೇಷತೆಗಳು:


1. 4500mAh ಬ್ಯಾಟರಿ. ಇದು 65Wಬ್ಲು ಫಾಸ್ಟ್ ಚಾರ್ಜಿಂಗ್ (Fast Charging) ಕೂಡಾ ಇದನ್ನು ಸಪೋರ್ಟ್ ಮಾಡುತ್ತದೆ.


2. 48 ಮೆಗಾಫಿಕ್ಸೆಲ್ ಕೆಮೆರಾ ಮತ್ತು 16 ಮೆಗಾಫಿಕ್ಸೆಲ್ ಇರುವ  ಅಲ್ಟ್ರಾ ವೈಡ್ ಅಂಗಲ್ ಲೆನ್ಸ್ ಮತ್ತು 5 ಮೆಗಾಫಿಕ್ಸೆಲ್ ಮೈಕ್ರೋ ಲೆನ್ಸ್ ಇದೆ. ಜೊತೆಗೆ 5 ಮೆಗಾ ಫಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ವಿಶೇಷವಾಗಿದೆ.


ಇದನ್ನೂ ಓದಿ : ಆನ್‍ಲೈನ್ ಕ್ಲಾಸಿಗೆ affordable ಲ್ಯಾಪ್‍ಟಾಪ್.! ಇಲ್ಲಿದೆ ಟಾಪ್ ಲಿಸ್ಟ್


3. ಸೆಲ್ಫಿಗಾಗಿ ಫ್ರಂಟ್‍ನಲ್ಲಿ 16 ಮೆಗಾಫಿಕ್ಸೆಲ್ ಕೆಮೆರಾ (Camera) ಇದೆ.


4. ಫೋನಿನಲ್ಲಿ 6.55 ಇಂಚಿನ FHD+ flexible AMOLED ಸ್ಕ್ರೀನ್ ಇದೆ. ಇದು ಗೇಮಿಂಗ್ ಮತ್ತು ವಿಡಿಯೋ (Video)ನೋಡುವಾಗ ವಿಶೇಷ ಅನುಭವ ನೀಡುತ್ತದೆ.


5.ಇನ್  Display ಫಿಂಗರ್ ಫ್ರಿಂಟ್ ಸೆನ್ಸಾರ್ ಇದೆ.


6. ಎರಡು ವೇರಿಯಂಟ್ ಲ್ಲಿ ಈ ಫೋನ್ (phone) ನಿಮಗೆ ಸಿಗಲಿದೆ.


ಇದನ್ನೂ ಓದಿ : ಕಳೆದುಹೋದ ಮೊಬೈಲ್ ಪತ್ತೆ ಮಾಡಿ, ಅದನ್ನು ಲಾಕ್ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ


 ಈ ಫೋನಿನ ಬೆಲೆ ಎಷ್ಟು..?
ಎರಡು ವೆರಿಯಂಟ್‍ನಲ್ಲಿ OnePlus 9R ಫೋನ್ ಲಭ್ಯ ಇದೆ. 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಇರುವ ಫೋನಿನ ಬೆಲೆ 39999. ಹಾಗೂ ಟಾಪ್ ವೇರಿಯಂಟ್ ಆಗಿರುವ 12 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಇರುವ ಫೋನಿನ ಬೆಲೆ 43,999 ರೂಪಾಯಿ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ (Debit Card)ಬಳಸುವವರಿಗೆ ಆಕರ್ಷಕ ರಿಯಾಯಿತಿ ಕೂಡಾ ಲಭ್ಯವಿದೆ. OnePlus 9R ಸೇಲ್ ಕಂಪನಿಯ ಅಧಿಕೃತ websiteನಲ್ಲಿ ಅಲ್ಲದೆ ಅಮೆಜಾನ್ (Amazon) ನಲ್ಲಿಯೂ ಇರಲಿದೆ.  SBI ಕಾರ್ಡ್ ಬಳಸುವವರಿಗೆ 2 ಸಾವಿರ ರೂಪಾಯಿಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ.


ಇದನ್ನೂ ಓದಿ : BSNL ಹೊಸ 249 ರೂಪಾಯಿ ಯೋಜನೆಯಲ್ಲಿ ಸಿಗಲಿದೆ Double Data, Free Calling ಸೌಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.