OnePlus Cloud 11 Launch : OnePlus 11 ಸೀರೀಸ್ ಇಂದು ಜಾಗತಿಕವಾಗಿ ಆರಂಭವಾಗಲಿದೆ. ಚೀನಾದ ಕಂಪನಿ ಇದನ್ನು ಕ್ಲೌಡ್ 11 ಲಾಂಚ್ ಈವೆಂಟ್ ಎಂದು ಹೆಸರಿಸಿದೆ. OnePlus ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯ ಜೊತೆಗೆ ಅನೇಕ IoT ಉತ್ಪನ್ನಗಳನ್ನು ಕೂಡಾ ಬಿಡುಗಡೆ ಮಾಡಲಿದೆ. ಇಲ್ಲಿಯವರೆಗೆ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, OnePlus 11 5G, OnePlus 11R 5G (OnePlus Ace 2), OnePlus ಕೀಬೋರ್ಡ್ 81 Pro, OnePlus Pad, OnePlus Buds Pro 2 ಮತ್ತು OnePlus TV 65 Q2 Pro ಸಾಧನಗಳು ಇಂದು ಅನಾವರನಗೊಳ್ಳಲಿವೆ.    


COMMERCIAL BREAK
SCROLL TO CONTINUE READING

ಇಂದು ಸಂಜೆ 7:30 ಕ್ಕೆ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ OnePlus Cloud 11 ಬಿಡುಗಡೆಯಾಗಲಿದೆ. ಈ ಈವೆಂಟ್‌ನ ಲೈವ್ ಸ್ಟ್ರೀಮಿಂಗ್ ಅನ್ನು ಕಂಪನಿಯ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು YouTube ಚಾನಲ್ ಮೂಲಕ ಮಾಡಲಾಗುತ್ತದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಈ ಈವೆಂಟ್ ಲೈವ್ ಸ್ಟ್ರೀಮ್  ಆಗಲಿದೆ. 


ಇದನ್ನೂ ಓದಿ : ಮಾರುತಿ ಎರ್ಟಿಗಾಕ್ಕಿಂತಲೂ ಅಗ್ಗ ಈ 7-ಸೀಟರ್ ಕಾರು! ವೈಶಿಷ್ಟ್ಯ ಮಾತ್ರ ಟಾಪ್ ರೇಟೆಡ್ !


OnePlus 11R ನ ವೈಶಿಷ್ಟ್ಯಗಳು :
OnePlus 11R (OnePlus Ace 2) ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ 6.74-ಇಂಚಿನ OLED ಡಿಸ್ಪ್ಲೇ ಪ್ಯಾನೆಲ್‌ನೊಂದಿಗೆ ಬರುತ್ತದೆ.  ಕರ್ವ್ದ್ ಡಿಸ್ಪ್ಲೇ ವಿನ್ಯಾಸದೊಂದಿಗೆ ಈ ಫೋನ್ ಬಿಡುಗಡೆಯಾಗಲಿದೆ. ಫೋನ್‌ನ ಡಿಸ್ಪ್ಲೇ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್  ರೇಟ್ ಅನ್ನು ಸಪೋರ್ಟ್ ಮಾಡುತ್ತದೆ.   ಸೆಕ್ಯುರಿಟಿಗಾಗಿ ಈ ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್  ಸೆನ್ಸಾರ್ ನೀಡಬಹುದು ಎನ್ನಲಾಗಿದೆ. ಈ OnePlus ಸ್ಮಾರ್ಟ್‌ಫೋನ್ Android 13 ಆಧಾರಿತ ColorOS ನೊಂದಿಗೆ   ಮಾರುಕಟ್ಟೆಗೆ ಬಗ್ಗೆ ಇರುವ ಸಾಧ್ಯತೆ ಇದೆ. 


ಈ ಫೋನ್ Qualcomm Snapdragon 8+ Gen 1 ಪ್ರೊಸೆಸರ್ ಅನ್ನು ಹೊಂದಿರಲಿದೆ ಎನ್ನುವುದನ್ನು OnePlus ಈಗಾಗಲೇ ದೃಢಪಡಿಸಿದೆ. ಇದರೊಂದಿಗೆ, 5,000mAh ಬ್ಯಾಟರಿ ಮತ್ತು 100W USB ಟೈಪ್ C ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಕೂಡಾ  ಲಭ್ಯವಿರಲಿದೆ. 


ಇದನ್ನೂ ಓದಿ : Flipkart Valentine Day Sale: ಪ್ರೇಮಿಗಳ ದಿನಕ್ಕೆ ಕಡಿಮೆ ಬೆಲೆಯಲ್ಲಿ ಸೂಪರ್ ಗಿಫ್ಟ್ ನೀಡಬೇಕೇ ? ಹಾಗಿದ್ದರೆ ಇಲ್ಲಿದೆ ಭರ್ಜರಿ ಸೇಲ್


ಇನ್ನು ಈ ಫೋನ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಬರಲಿದೆ. ಇದು 50MP ಸೋನಿ IMX890  ಸೆನ್ಸಾರ್ ನೊಂದಿಗೆ ಇರಲಿದೆ.  ಇದರೊಂದಿಗೆ OIS ಅಂದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ವೈಶಿಷ್ಟ್ಯ ಕೂಡಾ ಇರಲಿದೆ. ಫೋನ್ 12MP ಅಥವಾ 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಪಡೆಯುತ್ತದೆ.


OnePlus 11 5G ನ ವೈಶಿಷ್ಟ್ಯಗಳು :
ಈ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಿರುವ OnePlus 11 ನ ವೈಶಿಷ್ಟ್ಯಗಳನ್ನು ನೋಡುವುದಾದರೆ, ಅದರ ವೈಶಿಷ್ಟ್ಯಗಳು ಮತ್ತು ವಿನ್ಯಾಸವು OnePlus 11R ನಂತೆಯೇ ಇರುತ್ತದೆ. ಇದು Qualcomm Snapdragon 8 Gen 2 ಮೊಬೈಲ್ ಪ್ರೊಸೆಸರ್ ಅನ್ನು ಪಡೆಯುತ್ತದೆ. ಅಲ್ಲದೆ, ಈ ಫೋನ್ 16GB LPDDR5X RAM ಮತ್ತು 256GB ವರೆಗೆ  ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ. ಫೋನ್ 5,000mAh ಬ್ಯಾಟರಿಯೊಂದಿಗೆ 100W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಪಡೆಯಲಿದೆ. ಈ ಫೋನ್ ಟೈಟಾನ್ ಬ್ಲಾಕ್ ಮತ್ತು ಎಟರ್ನಲ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬರಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.