ಭಾರತ ಸರ್ಕಾರದ ಮಹತ್ವದ ಕ್ರಮ: ಮತ್ತೆ ನೂರಾರು ಆ್ಯಪ್‌ಗಳನ್ನು ಬ್ಯಾನ್ ಮಾಡಲು ನಿರ್ಧಾರ

Apps Ban: ಭಾರತದ ಆಂತರಿಕ ಭದ್ರತೆಗೆ ಧಕ್ಕೆ ತರುವಂತಹ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಆಗಾಗ್ಗೆ ನಿಷೇಧಿಸುತ್ತಲೇ ಇರುತ್ತದೆ. ಇದೀಗ ಭಾರತ ಸರ್ಕಾರ ಮತ್ತೆ ನೂರಾರು ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿದೆ. 

Written by - Yashaswini V | Last Updated : Feb 6, 2023, 02:52 PM IST
  • 94 ಸಾಲ ಒದಗಿಸುವ ಅಪ್ಲಿಕೇಶನ್‌ಗಳು ಮತ್ತು 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಸೇರಿದಂತೆ ಭಾರತ ಸರ್ಕಾರವು 232 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.
  • ಭಾರತದಲ್ಲಿ ಆ್ಯಪ್‌ಗಳನ್ನು ನಿಷೇಧಿಸುವ ಐಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
  • ಗಮನಾರ್ಹ ವಿಷಯವೆಂದರೆ, ಭಾರತದಲ್ಲಿ ಪ್ರಸ್ತುತ ನಿಷೇಧಿಸಲಾಗಿರುವ ಈ ಎಲ್ಲಾ ಆ್ಯಪ್‌ಗಳು ಚೀನಾದೊಂದಿಗೆ ಸಂಪರ್ಕ ಹೊಂದಿದ್ದವು ಎನ್ನಲಾಗಿದೆ.
ಭಾರತ ಸರ್ಕಾರದ ಮಹತ್ವದ ಕ್ರಮ: ಮತ್ತೆ ನೂರಾರು ಆ್ಯಪ್‌ಗಳನ್ನು ಬ್ಯಾನ್ ಮಾಡಲು ನಿರ್ಧಾರ  title=
Apps Ban

Apps Ban: ಭಾರತೀಯರ ಖಾಸಗಿತನಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತಿದ್ದ ನೂರಾರು ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಲಕಾಲಕ್ಕೆ ಕೆಲವು ಆ್ಯಪ್‌ಗಳು ಬ್ಯಾನ್ ಆಗುತ್ತಿದ್ದು, ಇದೀಗ ಮತ್ತೊಮ್ಮೆ 94 ಲೋನ್ ಆ್ಯಪ್‌ಗಳು ಮತ್ತು 138 ಬೆಟ್ಟಿಂಗ್ ಆ್ಯಪ್‌ಗಳು ಸೇರಿದಂತೆ ಒಟ್ಟು  232 ಆ್ಯಪ್‌ಗಳನ್ನು ನಿಷೇಧಿಸಲು ಭಾರತ ಸರ್ಕಾರ ನಿರ್ಧರ್ಸಿದೆ.

ವಾಸ್ತವವಾಗಿ, ಈ ಅಪ್ಲಿಕೇಶನ್‌ಗಳು ಭಾರತೀಯರಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತಿದ್ದು, ಭಾರತದ ಆಂತರಿಕ ಭದ್ರತೆಗೆ ಹಾಗೂ ಭಾರತೀಯರ ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದವು. ಈ ಅಪ್ಲಿಕೇಶನ್‌ಗಳಿಂದಾಗಿ ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಅಪಾಯದಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಕೇವಲ ₹10000 ಲಭ್ಯವಾಗಲಿದೆ iPhone! ಏನಿದರ ಸತ್ಯಾಸತ್ಯತೆ?

232 ಅಪ್ಲಿಕೇಶನ್‌ಗಳ ನಿಷೇಧ:
ಲಭ್ಯವಿರುವ ಮಾಹಿತಿಯ ಪ್ರಕಾರ, ಐಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ 94 ಲೋನ್ ಆ್ಯಪ್‌ಗಳು ಮತ್ತು 138 ಬೆಟ್ಟಿಂಗ್ ಆ್ಯಪ್‌ಗಳು ಸೇರಿದಂತೆ ಒಟ್ಟು  232 ಆ್ಯಪ್‌ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲು ಆದೇಶಿಸಲಾಗಿದೆ. 

ಇದನ್ನೂ ಓದಿ- Instagram Offer: Reels ತಯಾರಿಸಿ ನೀವು ಕೈತುಂಬಾ ಹಣ ಸಂಪಾದಿಸಿ! ಹೇಗೆ ಇಲ್ಲಿ ತಿಳಿಯಿರಿ

ಗಮನಾರ್ಹ ವಿಷಯವೆಂದರೆ, ಭಾರತದಲ್ಲಿ ಪ್ರಸ್ತುತ ನಿಷೇಧಿಸಲಾಗಿರುವ ಈ ಎಲ್ಲಾ ಆ್ಯಪ್‌ಗಳು ಚೀನಾದೊಂದಿಗೆ ಸಂಪರ್ಕ ಹೊಂದಿದ್ದು, ಭಾರತೀಯ ಬಳಕೆದಾರರ ವೈಯಕ್ತಿಕ ಮಾಹಿತಿ ಬಗ್ಗೆ ಬೇಹುಗಾರಿಕೆ ನಡೆಸುತ್ತಿದ್ದವು ಎಂದು ಹೇಳಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News