Flipkart Valentine Day Sale: ಪ್ರೇಮಿಗಳ ದಿನಕ್ಕೆ ಕಡಿಮೆ ಬೆಲೆಯಲ್ಲಿ ಸೂಪರ್ ಗಿಫ್ಟ್ ನೀಡಬೇಕೇ ? ಹಾಗಿದ್ದರೆ ಇಲ್ಲಿದೆ ಭರ್ಜರಿ ಸೇಲ್

Flipkart Valentine Day Sale 2023: "ಫ್ಲಿಪ್ ಹಾರ್ಟ್ ಡೇಸ್"  ಸೇಲ್  ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಫೆಬ್ರವರಿ 12 ರವರೆಗೆ  ಈ ಸೇಲ್  ನಡೆಯಲಿದೆ. Apple iPhone ನಿಂದ ಏರ್ ಪ್ಯಾಡ್‌ವರೆಗೆ,  ಸಾಕಷ್ಟು ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ.    

Written by - Ranjitha R K | Last Updated : Feb 6, 2023, 05:51 PM IST
  • ಫೆಬ್ರವರಿ 12 ರವರೆಗೆ ಫ್ಲಿಪ್‌ಕಾರ್ಟ್ ಸೇಲ್ ನಡೆಯುತ್ತಿದೆ
  • ಫ್ಲಿಪ್ಕಾರ್ಟ್ ವ್ಯಾಲೆಂಟೈನ್ಸ್ ಡೇ ಸೇಲ್
  • ಅಗ್ಗದ ಬೆಲೆಯಲ್ಲಿ ಖರೀದಿಸಿ ಫೋನ್
 Flipkart  Valentine Day Sale: ಪ್ರೇಮಿಗಳ ದಿನಕ್ಕೆ ಕಡಿಮೆ ಬೆಲೆಯಲ್ಲಿ ಸೂಪರ್ ಗಿಫ್ಟ್ ನೀಡಬೇಕೇ ? ಹಾಗಿದ್ದರೆ ಇಲ್ಲಿದೆ ಭರ್ಜರಿ ಸೇಲ್  title=

Flipkart Valentine's Day Sale : ವ್ಯಾಲೆಂಟೈನ್ಸ್ ಡೇಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಬೇಕೆಂದು ಯೋಚಿಸುತ್ತಿರುವವರಿಗೆ ಇಲ್ಲಿದೆ  ಗುಡ್ ನ್ಯೂಸ್. "ಫ್ಲಿಪ್ ಹಾರ್ಟ್ ಡೇಸ್"  ಸೇಲ್  ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಫೆಬ್ರವರಿ 12 ರವರೆಗೆ ಈ ಸೇಲ್  ನಡೆಯಲಿದೆ. Apple iPhone ನಿಂದ ಏರ್ ಪ್ಯಾಡ್‌ವರೆಗೆ,  ಸಾಕಷ್ಟು ಪ್ರಾಡಕ್ಟ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ. 

ಫ್ಲಿಪ್ಕಾರ್ಟ್ ವ್ಯಾಲೆಂಟೈನ್ಸ್ ಡೇ ಸೇಲ್: ಬ್ಯಾಂಕ್ ಕೊಡುಗೆ:
"ಫ್ಲಿಪ್ ಹಾರ್ಟ್ ಡೇಸ್"  ಸೇಲ್ ಭಾಗವಾಗಿ, Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮೇಲೆ 5 ಶೇಕಡಾ ಕ್ಯಾಶ್ಬ್ಯಾಕ್ ನೀಡಲಾಗುತ್ತಿದೆ. ಇದಲ್ಲದೇ ಫ್ಲಿಪ್‌ಕಾರ್ಟ್ ಪೇ ಲೇಟರ್ ಬಳಸುವ ಗ್ರಾಹಕರು 500 ರೂಪಾಯಿ ಮೌಲ್ಯದ ಗಿಫ್ಟ್ ಕಾರ್ಡ್ ಪಡೆಯಲಿದ್ದಾರೆ. 

ಇದನ್ನೂ ಓದಿ : ಭಾರತ ಸರ್ಕಾರದ ಮಹತ್ವದ ಕ್ರಮ: ಮತ್ತೆ ನೂರಾರು ಆ್ಯಪ್‌ಗಳನ್ನು ಬ್ಯಾನ್ ಮಾಡಲು ನಿರ್ಧಾರ

Apple iPhone 14: Apple iPhone 14 ಅನ್ನು ಈ ಸೇಲ್ ನಲ್ಲಿ 72,499 ರೂಗಳಲ್ಲಿ ಖರೀದಿಸಬಹುದು. ಅಂದರೆ ಈ ಫೋನ್ ಮೇಲೆ  ಶೇಕಡಾ 9 ರಷ್ಟು ರಿಯಾಯಿತಿ ನೀಡಲಾಗಿದೆ. ಮಾತ್ರವಲ್ಲ ಈ ಫೋನ್ ಮೇಲೆ   23,000 ರೂಪಾಯಿಗಳವರೆಗೆ ವಿನಿಮಯ ಕೊಡುಗೆ ಕೂಡಾ ನೀಡಲಾಗಿದೆ. 

Apple iPad (9th Gen): ಈ iPad ಮೇಲೆ ಶೇಕಡಾ 11 ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿ ನಂತರ  Apple iPad 29,990 ರೂಗಳಲ್ಲಿ ಲಭ್ಯವಿದೆ. ತಮ್ಮ ಹಳೆಯ ಸಾಧನವನ್ನು ವಿನಿಮಯ ಮಾಡಿಕೊಳ್ಳಲು ಬಯಸುವವರು 17,500 ರೂ.ವರೆಗೆ ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Solar generator: ಈ ಒಂದು ಸಾಧನ ಅಳವಡಿಸಿ ಸಾಕು, ವಿದ್ಯುತ್ ಬಿಲ್ ಕಟ್ಟಲೇ ಬೇಕಿಲ್ಲ.!

Motorola G52: ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರ ಪ್ರೈಮರಿ ಸೆನ್ಸಾರ್ 50MP ಆಗಿದೆ. ಇದರಲ್ಲಿ  ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಫೋನ್   35 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇದನ್ನು 12,999 ರೂಗಳಲ್ಲಿ  ಖರೀದಿಸಬಹುದು. 

ಆಪಲ್ ಏರ್‌ಪಾಡ್ಸ್ ಪ್ರೊ: ಏರ್‌ಪಾಡ್ಸ್ ಪ್ರೊ ಅನ್ನು  ಶೇಕಡಾ 23 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು. 

ಫ್ಲಿಪ್‌ಕಾರ್ಟ್‌ನಂತೆಯೇ, ಅಮೆಜಾನ್ ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ಉತ್ಪನ್ನಗಳ ಮೇಲೆ ಕೆಲವು ರಿಯಾಯಿತಿಗಳು ಮತ್ತು ಮಾರಾಟಗಳನ್ನು ಘೋಷಿಸುವ ಸಾಧ್ಯತೆಯಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News