ಬೆಂಗಳೂರು : OnePlus Nord 20 SE ಅನ್ನು  AliExpressನಲ್ಲಿ ಮಾರಾಟಕ್ಕೆ ಲಿಸ್ಟ್ ಮಾಡಲಾಗಿದೆ. ಸಾಧನವು ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು MediaTek ನ Helio ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಅತ್ಯಂತ ಅಗ್ಗದ OnePlus ಫೋನ್ ಇದಾಗಿದೆ. 


COMMERCIAL BREAK
SCROLL TO CONTINUE READING

OnePlus Nord 20 SE ವಿಶೇಷಣಗಳು :
OnePlus Nord 20 SE 6.5-ಇಂಚಿನ IPS LCD  ಸ್ಕ್ರೀನ್ ನೊಂದಿಗೆ ಬರುತ್ತದೆ. 720 x 1612 ಪಿಕ್ಸೆಲ್‌ಗಳ HD+ ರೆಸಲ್ಯೂಶನ್ ಮತ್ತು 600 ನಿಟ್ಸ್ ಬ್ರೈಟ್‌ನೆಸ್ ಅನ್ನು ಪ್ರೋಡ್ಯುಸ್ ಮಾಡುತ್ತದೆ. ಡಿಸ್ಪ್ಲೇ ನಾಚ್ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಬ್ಯಾಕ್ ಪ್ಯಾನೆಲ್ 50MP+ 2MP ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಪೋನ್ 4 GB RAM ಮತ್ತು 64 GB ಸ್ಟೋರೇಜ್ ನೊಂದಿಗೆ ಬರುತ್ತದೆ. ಇದರಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್ ಕೂಡಾ ನೀಡಲಾಗಿದೆ.  ಫೋನ್ Android 12 OS ಮತ್ತು OxygenOS 12.1 ನಲ್ಲಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ Digital Strike: 348 ಮೊಬೈಲ್ ಆಪ್ ಗಳ ಮೇಲೆ ಭಾರತ ಸರ್ಕಾರದ ನಿಷೇಧ, ಚೀನಾ ಆಪ್ ಗಳು ಕೂಡ ಇದರಲ್ಲಿ ಶಾಮೀಲಾಗಿವೆ


OnePlus Nord 20 SE ಬ್ಯಾಟರಿ :
Nord 20 SE 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 33W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸುರಕ್ಷತೆಗಾಗಿ, ಹ್ಯಾಂಡ್‌ಸೆಟ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು AI ಫೇಸ್ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇತರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 4G VoLTE, ವೈಫೈ, ಬ್ಲೂಟೂತ್ 5.0, GPS, USB-C ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. 


OnePlus Nord 20 SE ಬೆಲೆ :
OnePlus Nord 20 SE Oppo A77 4Gಯ ರಿಬ್ರಾಂಡೆಡ್ ಆವೃತ್ತಿಯಾಗಿದ್ದು, ಭಾರತದಲ್ಲಿ  ಇದರ ಬೆಲೆ 15,499 ರೂ. ಆಗಿದೆ. 


ಇದನ್ನೂ ಓದಿ : ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.