11 ದೇಶಗಲ್ಲಿ ChatGPT App ಬಿಡುಗಡೆ ಮಾಡಿದ OpenAI!
ChatGPT App Launch : US, ಅಲ್ಬೇನಿಯಾ, ಕ್ರೊಯೇಷಿಯಾ, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಜಮೈಕಾ, ಕೊರಿಯಾ, ನ್ಯೂಜಿಲೆಂಡ್, ನಿಕರಾಗುವಾ, ನೈಜೀರಿಯಾ ಮತ್ತು UK ಸೇರಿದಂತೆ 11 ದೇಶಗಳಲ್ಲಿ ಲಾಂಚ್ ಮಾಡಲಾಗಿದೆ.
ChatGPT App Launch : OpenAI ತನ್ನ iOS ಅಪ್ಲಿಕೇಶನ್ ಅನ್ನು 11ದೇಶಗಳಲ್ಲಿ ಬಿಡುಗಡೆ ಮಾಡಿದೆ.
ಇದನ್ನು ಮೊದಲು US ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ US, ಅಲ್ಬೇನಿಯಾ, ಕ್ರೊಯೇಷಿಯಾ, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಜಮೈಕಾ, ಕೊರಿಯಾ, ನ್ಯೂಜಿಲೆಂಡ್, ನಿಕರಾಗುವಾ, ನೈಜೀರಿಯಾ ಮತ್ತು UK ಸೇರಿದಂತೆ 11 ದೇಶಗಳಲ್ಲಿ ಲಾಂಚ್ ಮಾಡಲಾಗಿದೆ. ಅಂದರೆ ಈ ದೇಶದ ಬಳಕೆದಾರರು ಬಳಕೆದಾರರು Apple App Store ನಲ್ಲಿ ChatGPT ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
ಭಾರತದ ಬಳಕೆದಾರರಿಗೆ ChatGPT App ಯಾವಾಗ ಲಭ್ಯ :
ಭಾರತದಲ್ಲಿChatGPT iOS ನಲ್ಲಿ ಇನ್ನೂ ಲಭ್ಯವಾಗಿಲ್ಲ. ಮುಂಬರುವ ವಾರಗಳಲ್ಲಿ ಈ ಸೇವೆಯನ್ನು ಹೆಚ್ಚಿನ ದೇಶಗಳಿಗೆ ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಶೇರ್ ಲಿಂಕ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ChatGPT ಕನ್ವರ್ ಸೇಶನ್ ಗಾಗಿ ಮತ್ತು ಶೇರ್ ಮಾಡುವುದಕ್ಕಾಗಿ ಸಹಾಯ ಮಾಡುತ್ತದೆ.
ಇದನ್ನೂ ಓದಿ : ಆಗಸದಲ್ಲಿನ ಅಪಾಯಗಳು: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುವುದು ಯಾಕೆ ಗಂಭೀರ ತೊಂದರೆ?
ಹೊಸ ವೈಶಿಷ್ಟ್ಯದ ಸೇರ್ಪಡೆ :
ನೀವು ಶೇರ್ ಮಾಡಿರುವ ಲಿಂಕ್ ಅನ್ನು ಯಾರು ರಿಸೀವ್ ಮಾಡುತ್ತಾರೆಯೋ ಅವರು ಆ ಕನ್ವರ್ ಸೇಶನ್ ವೀಕ್ಷಿಸಬಹುದಾಗಿದೆ. ಅಥವಾ ಥ್ರೆಡ್ ಅನ್ನು ಮುಂದುವರಿಸಲು ಅವರ ಚಾಟ್‌ಗೆ ಕಾಪಿ ಮಾಡಬಹುದಾಗಿದೆ. ಈ ವೈಶಿಷ್ಟ್ಯವು ಪ್ರಸ್ತುತ ಆಲ್ಫಾದಲ್ಲಿ ಪರೀಕ್ಷಕರ ಒಂದು ಸಣ್ಣ ಗುಂಪಿಗೆ ಮಾತ್ರ ಹೊರತರಲಾಗಿದೆ. ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಇದನ್ನೂ ವಿಸ್ತರಿಸಲು ಯೋಜಿಸಲಾಗಿದೆ ಎಂದು ಓಪನ್ AI ಹೇಳಿದೆ.
ಮೈಕ್ರೋಸಾಫ್ಟ್ ಬೆಂಬಲಿತ ಕಂಪನಿಯು ಪೇಯ್ಡ್ ಬಳಕೆದಾರರಿಗೆ ಪ್ರಸ್ತುತ ಬೀಟಾದಲ್ಲಿರುವ Bing ಜೊತೆಗೆ ಬ್ರೌಸಿಂಗ್ ವೈಶಿಷ್ಟ್ಯವನ್ನು ಸಂಯೋಜಿಸಿದೆ. ChatGPT ಬಳಕೆದಾರರು iOS ನಲ್ಲಿ ಚಾಟ್ ಹಿಸ್ಟರಿ ಯನ್ನು ಡಿಸೇಬಲ್ ಮಾಡಬಹುದಾಗಿದೆ.
ಇದನ್ನೂ ಓದಿ : ಮಾರುಕಟ್ಟೆಗೆ ಕಾಲಿಡಲಿರುವ Hyundai Exter ಅನ್ನು ಕೇವಲ 11ಸಾವಿರ ರೂಪಾಯಿಗೆ ಬುಕ್ ಮಾಡಿ ಕೊಳ್ಳಿ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ