OPPO EV: 2024ರಲ್ಲಿ ಭಾರತದಲ್ಲಿ ಓಡಾಡಲಿವೆ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್?
Oppo ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು 60 ಸಾವಿರ ರೂ.ಗಳ ಆಸುಪಾಸಿನಲ್ಲಿ ಇರಿಸಲಿದೆಯಂತೆ. ಒಪ್ಪೋ ಕಂಪನಿಯು ಜನರಿಗೆ ಕೈಗೆಟುವ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ ಎಂದು ವರಿಯಾಗಿದೆ.
ನವದೆಹಲಿ: Oppo ಸ್ಮಾರ್ಟ್‌ಫೋನ್‌ಗಳು ಭಾರತೀಯರಿಗೆ ತುಂಬಾ ಇಷ್ಟವಾಗಿವೆ. ಈಗ ಕಂಪನಿಯು ಹೊಸ ವಲಯದಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಹೊರಟಿದೆ. 2023 ಮತ್ತು 2024ರಲ್ಲಿ Oppo ಭಾರತದಲ್ಲಿ OPPO EV ಎಲೆಕ್ಟ್ರಿಕ್ ಸ್ಕೂಟರ್(OPPO Electric Scooter) ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ OPPO EV ಕುರಿತ ವಿವರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಯಾವಾಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬುದರ ಬಗ್ಗೆ ಇನ್ನೂ ನಿಖರ ಮಾಹಿತಿ ಲಭಿಸಿಲ್ಲ.
ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಹಿರಂಗ
OPPO EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ(OPPO Electric Scooter Price)ಯ ಬಗ್ಗೆಯೂ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದರ ಪ್ರಕಾರ Oppo ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು 60 ಸಾವಿರ ರೂ.ಗಳ ಆಸುಪಾಸಿನಲ್ಲಿ ಇರಿಸಲಿದೆಯಂತೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿರುವ ಬಹುತೇಕ ಸ್ಕೂಟರ್‌ಗಳ ಬೆಲೆ ದುಬಾರಿಯಾಗಿದೆ. ಆದರೆ ಒಪ್ಪೋ ಕಂಪನಿಯು ಜನರಿಗೆ ಕೈಗೆಟುವ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ ಎಂದು ವರಿಯಾಗಿದೆ.
ಇದನ್ನೂ ಓದಿ: Flipkart: ಸ್ಯಾಮ್‌ಸಂಗ್ 32-ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 5000 ರೂ.ಗೆ ಖರೀದಿಸಲು ಉತ್ತಮ ಅವಕಾಶ
OPPO ಎಲೆಕ್ಟ್ರಿಕ್ ಸ್ಕೂಟರ್ ಯೋಜನೆ
ಕಂಪನಿಯು ಬ್ಯಾಟರಿ ಮತ್ತು ಇತರ ಘಟಕಗಳಿಗಾಗಿ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ. ಇವುಗಳಲ್ಲಿ ಕೆಲವು ಕಂಪನಿಗಳು ಟೆಸ್ಲಾದಂತಹ ಬ್ರ್ಯಾಂಡ್‌ಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತವೆ. ಇತ್ತೀಚೆಗೆ Oppo ಇತರ BBK ಎಲೆಕ್ಟ್ರಾನಿಕ್ಸ್ ಅಂಗಸಂಸ್ಥೆಗಳಾದ Realme, OnePlus ಮತ್ತು Vivo ಜೊತೆಗೆ 2018ರಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನಗಳಿಗೆ ಟ್ರೇಡ್‌ಮಾರ್ಕ್‌ಗಳಿಗಾಗಿ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಭಾರತೀಯ ಮಾರುಕಟ್ಟೆಯ EV ಜಾಗ(OPPO EV Specifications)ವನ್ನು ಆಕ್ರಮಿಸಲು ಬಯಸುತ್ತಿರುವ ಅನೇಕ ಚೀನೀ ಟೆಕ್ ಕಂಪನಿಗಳಲ್ಲಿ ಒಪ್ಪೋ ಮೊದಲನೆಯದು.
ಕಾರು ಉತ್ಪಾದಿಸಲು ಯೋಜನೆ
ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್ ಮಾತ್ರವಲ್ಲದೆ ಟಾಟಾ ನ್ಯಾನೊದಂತಹ ಕಾಂಪ್ಯಾಕ್ಟ್ ಕಾರು(OPPO Electric Car) ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಟಾಟಾ ನ್ಯಾನೋವನ್ನು ಕಡಿಮೆ ವೆಚ್ಚದ ಕಾರಾಗಿ ಬಿಡುಗಡೆ ಮಾಡಲಾಗಿತ್ತು. Oppo ಏನಾದರೂ ಈ ಕಾರು ತಯಾಸಿದರೆ ಕೈಗೆಟುಕುವಂತೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. Oppo ಪ್ರಾಥಮಿಕವಾಗಿ ಇಂಟ್ರಾಸಿಟಿ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಕಾರುಗಳು ಮತ್ತು ಸ್ಕೂಟರ್‌ಗಳನ್ನು ವಿನ್ಯಾಸಗೊಳಿಸುತ್ತಿದೆ.
ಇದನ್ನೂ ಓದಿ: Joker Virus: ನಿಮ್ಮ ಫೋನ್ ದೋಚಲು ಬಂದಿದ್ದಾನೆ ಜೋಕರ್, ಈ 14 ಅಪ್ಲಿಕೇಶನ್‌ಗಳನ್ನು ತಕ್ಷಣ ಅಳಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.