ನವದೆಹಲಿ : OPPO ತನ್ನ ಹೊಸ 5G ಸ್ಮಾರ್ಟ್ಫೋನ್ OPPO F19 ಗಳನ್ನು ಇಂದು  ಅಂದರೆ ಸೆಪ್ಟೆಂಬರ್ 27 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ (Flipkart) ಖರೀದಿಸಬಹುದು.  ಒಪ್ಪೋ ಸ್ಮಾರ್ಟ್ ಫೋನ್ (OPPO Smartphone) ಚಿನ್ನದ ಬಣ್ಣದ್ದಾಗಿದ್ದು ಪೇಪರ್ ನಂತೆ ತೆಳ್ಳಗಿದೆ ಎನ್ನಲಾಗಿದೆ. ಈ ಫೋನಿನ ವೈಶಿಷ್ಟ್ಯಗಳು ಮತ್ತು ಬೆಲೆ ಎಷ್ಟಿದೆ ನೋಡೋಣ. 


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್‌ನಿಂದ OPPO F19 ಫೋನನ್ನು ಖರೀದಿಸಬಹದು
ಒಪ್ಪೋ ಈ ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಬಿಡುಗಡೆ ಮಾಡಿದ್ದು, ಇಂದಿನಿಂದ ಈ ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ನಿಂದ ಖರೀದಿಸಬಹುದಾಗಿದೆ.   22,990 ರೂಪಾಯಿ  ಬೆಲೆಯ ಈ ಫೋನನ್ನು ಫ್ಲಿಪ್‌ಕಾರ್ಟ್‌ನಿಂದ (Flipkart)  19,990 ರೂ. ಗೆ ಖರೀದಿಸಬಹುದು.  ಇನ್ನು ಫ್ಲಿಪ್‌ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (credit card) ಬಳಸಿದರೆ, ಒಂದು ಸಾವಿರ ರೂಪಾಯಿಗಳ ಹೆಚ್ಚುವರಿ  ರಿಯಾಯಿತಿ  ಸಿಗುತ್ತದೆ. OPPO F19s ಖರೀದಿಗೆ ವಿಶೇಷ ಎಕ್ಸ್‌ ಚೇಂಜ್‌ ಆಫರ್‌ ಕೂಡಾ ನೀಡಲಾಗಿದೆ. ಅಲ್ಲದೆ, 3,332 ರೂ. ಗಳ ನೋ-ಕಾಸ್ಟ್ ಇಎಂಐನಲ್ಲಿ (EMI) ಕೂಡ ಖರೀದಿಸಬಹುದು. 


ಇದನ್ನೂ ಓದಿ : iPhone 13 Mini vs iPhone 12 Mini: ಎರಡು ಮಾಡೆಲ್ ಗಳ ಭಿನ್ನ ವೈಶಿಷ್ಟಗಳು..!


 ಅದ್ಭುತ ಲುಕ್‌ : 
ಈ ಹೊಳೆಯುವ ಗೋಲ್ಡನ್ ಬಣ್ಣದ ಸ್ಮಾರ್ಟ್ಫೋನ್ (Golden Smartphone) ತುಂಬಾ ನಯವಾದ ವಿನ್ಯಾಸ ಮತ್ತು 3 ಡಿ ಕರ್ವ್ಡ್‌ ಬಾಡಿಯನ್ನು ಹೊಂದಿದೆ. ಎಜಿ ಶಿಮರಿಂಗ್‌ ಸ್ಯಾಂಡ್ ತಂತ್ರಜ್ಞಾನ ಹೊಂದಿರುವ ದೇಶದ ಮೊದಲ ಫೋನ್ ಇದಾಗಿದೆ. ಇದರಲ್ಲಿ ಫಿಂಗರ್‌ ಪ್ರಿಂಟ್‌ ರೆಜೆಸ್ಟೆಂಟ್‌  ಸೌಲಭ್ಯ ಕೂಡಾ ಇರಲಿದೆ. OPPO F19s 6.43-inch Full HD+ AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ.  


ಫೋನಿನ ಬ್ಯಾಟರಿ ಮತ್ತು ಕ್ಯಾಮೆರಾ   : 
5,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ , ಈ ಫೋನಿನ ಚಾರ್ಜಿಂಗ್‌ ದೀರ್ಘಕಾಲದವರೆಗೆ ಉಳಿಯುತ್ತದೆ.  ಅಲ್ಲದೆ, ಡಿಸ್ಚಾರ್ಜ್ ಆದ  ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಟೆಸ್ಟಿಂಗ್‌ ಸಮಯದಲ್ಲಿ   ಈ ಫೋನ್ ಕೇವಲ 5 ನಿಮಿಷಗಳಲ್ಲಿ ಫುಲ್‌ ಚಾರ್ಜ್‌ ಆಗಿದ್ದು, ಸುಮಾರು 5.5 ಗಂಟೆಗಳ ಕಾಲ ಮಾತನಾಡಲು ಸಾಧ್ಯವಾಯಿತು ಎನ್ನಲಾಗಿದೆ.  


ಇದನ್ನೂ ಓದಿ : ಭಾರತದಲ್ಲಿ ಸೆ.30ಕ್ಕೆ ಬಿಡುಗಡೆಯಾಗಲಿವೆ Vivo X70 Pro, X70 Pro+: ವೈಶಿಷ್ಟ್ಯಗಳೇನು ಗೊತ್ತೇ?


ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನ ಮೈನ್‌ ಕ್ಯಾಮೆರಾ 48MP, 2MP ಡೆಪ್ತ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಈ ಫೋನ್ ಅನ್ನು 16MP ಫ್ರಂಟ್‌ ಕ್ಯಾಮೆರಾದೊಂದಿಗೆ ಬಿಡುಗಡೆ ಮಾಡಲಾಗಿದೆ. 


ಇತರ ವೈಶಿಷ್ಟ್ಯಗಳು  :
OPPO F19s ಅನ್ನು ಒಂದೇ ರೂಪಾಂತರದಲ್ಲಿ ಲಾಂಚ್‌ ಮಾಡಲಾಗಿದೆ ಇದರಲ್ಲಿ ಬಳಕೆದಾರರು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಪಡೆಯುತ್ತಾರೆ. ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ ಈ ಸ್ಟೋರೇಜ್‌ ಅನ್ನು 256GB ವರೆಗೆ ವಿಸ್ತರಿಸಬಹುದು. ಈ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 662 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.