OPPO ಬಿಡುಗಡೆ ಮಾಡಿದೆ 15,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್
OPPO A57s Launch Specifications Price: OPPO A57s ಅನ್ನು ಇತ್ತೀಚೆಗೆ ಕಂಪನಿಯ A ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನಲ್ಲಿ HD+ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಡ್ಯುಯಲ್ ಕ್ಯಾಮೆರಾ ಸೆಟಪ್ ಹೀಗೆ ಹಲವು ಫೀಚರ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ.
OPPO A57s Launch Specifications Price : ಸ್ಮಾರ್ಟ್ಫೋನ್ ಬ್ರ್ಯಾಂಡ್ ಒಪ್ಪೋ OPPO A57s ಎಂಬ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 15 ಸಾವಿರ ರೂಪಾಯಿಗಳಿಗಿಂತ ಕಡಿಮೆ. ಉತ್ತಮ ಕ್ಯಾಮೆರಾ ಜೊತೆಗೆ ಇನ್ನೂ ಹಲವು ಫೀಚರ್‌ಗಳನ್ನು ಈ ಫೋನ್‌ನಲ್ಲಿ ನೀಡಲಾಗುತ್ತಿದೆ. ಈ ಫೋನ್‌ನ ಬೆಲೆ ಎಷ್ಟು ಅದರ ವಿಶೇಷಣಗಳುಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
OPPO A57s ಲಾಂಚ್ :
OPPO A57s ಅನ್ನು ಇತ್ತೀಚೆಗೆ ಕಂಪನಿಯ A ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನಲ್ಲಿ HD+ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಡ್ಯುಯಲ್ ಕ್ಯಾಮೆರಾ ಸೆಟಪ್ ಹೀಗೆ ಹಲವು ಫೀಚರ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ OPPO A57 ನ ಅಪ್‌ಗ್ರೇಡ್ ಆವೃತ್ತಿಯಾಗಿದೆ.
ಇದನ್ನೂ ಓದಿ : ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ ಚಂದಾದಾರಿಕೆಗಳನ್ನು ಫ್ರೀ ಆಗಿ ಪಡೆಯಲು ಉತ್ತಮ ಅವಕಾಶ
OPPO A57s ವಿಶೇಷಣಗಳು :
OPPO A57sನಲ್ಲಿ, 6.56-ಇಂಚಿನ HD + IPS LCD ಡಿಸ್ಪ್ಲೇ, 1612 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 600nits ವರೆಗಿನ ಗರಿಷ್ಠ ಬ್ರೈಟ್ ನೆಸ್ ನೀಡಲಾಗುತ್ತಿದೆ. ಈ ಸ್ಮಾರ್ಟ್ಫೋನ್ Mediatek Helio G35 SoCನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ನ 64GB ಸ್ಟೋರೇಜ್ ಅನ್ನು ಮೈಕ್ರೋ SD ಕಾರ್ಡ್ ಸಹಾಯದಿಂದ ಹೆಚ್ಚಿಸಬಹುದು. OPPO A57s ಅನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 50MP ಮೈನ್ ಸೆನ್ಸಾರ್, ಮತ್ತು 2MP ಮೊನೊ ಸೆನ್ಸಾರ್ ನೀಡಲಾಗಿದೆ. ಸೆಲ್ಫಿಗಾಗಿ ಮತ್ತು ವೀಡಿಯೊ ಕಾಲ್ ಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.
ಭಾರತದಲ್ಲಿ OPPO A57s ಬೆಲೆ :
Oppoನ ಹೊಸ ಸ್ಮಾರ್ಟ್‌ಫೋನ್, OPPO A57s ಅನ್ನು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ಕ್ರೊಯೇಷಿಯಾದಲ್ಲಿ ಲಭ್ಯವಿದೆ ಆದರೆ ಅದರ ಬೆಲೆಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್ ಬೆಲೆ 13 ಸಾವಿರದಿಂದ 15 ಸಾವಿರ ರೂಪಾಯಿ ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಈ ಫೋನ್ ಬೇರೆ ದೇಶಗಳ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕೂಡಾ ಯಾವುದೇ ಮಾಹಿತಿ ಬಂದಿಲ್ಲ.
ಇದನ್ನೂ ಓದಿ : 100kmplಗಿಂತ ಹೆಚ್ಚು ಮೈಲೇಜ್ ನೀಡುತ್ತೆ ಈ ಸ್ಕೂಟರ್: ಬೆಲೆ ಇಷ್ಟೊಂದು ಕಡಿಮೆಯೇ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.