Google Chrome Feature: ಬ್ರೌಸಿಂಗ್ ಮಾತ್ರವಲ್ಲ, ಲೈಬ್ರೆರಿಯಾಗಿಯೂ ಕಾರ್ಯನಿರ್ವಹಿಸುತ್ತೆ ಗೂಗಲ್ ಕ್ರೋಮ್

Google Chrome Secret Features: ಪ್ರಸ್ತುತ ಜಗತ್ತಿನಲ್ಲಿ ನಮ್ಮೆಲ್ಲಾ ಅನುಮಾನಗಳಿಗೆ ಉತ್ತರ ನೀಡಬಲ್ಲ ಒಂದೇ ಒಂದು ಸಾಧನ ಎಂದರೆ ಅದುವೇ ಗೂಗಲ್ ಕ್ರೋಮ್. ಗೂಗಲ್ ಕ್ರೋಮ್ ನಾವು ಬಗೆದಷ್ಟೂ ಕಲಿಯಬಹುದಾದ ಒಂದು ಮಹಾ ಸಾಗರವಿದ್ದಂತೆ. ಸಾಮಾನ್ಯವಾಗಿ ನಾವು ಏನನ್ನಾದರೂ ಬ್ರೌಸ್ ಮಾಡಲು ಗೂಗಲ್ ಅನ್ನು ಬಳಸುತ್ತೇವೆ. ಆದರೆ, ನಿಮಗೆ ಗೊತ್ತಾ ಗೂಗಲ್ ಕ್ರೋಮ್ ಲೈಬ್ರರಿ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅಂತಹದ್ದೇ ಒಂದು ವಿಶೇಷ ವೈಶಿಷ್ಟ್ಯದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.

Written by - Yashaswini V | Last Updated : Aug 30, 2022, 10:50 AM IST
  • ಗೂಗಲ್ ಕ್ರೋಮ್‌ನ ರೀಡಿಂಗ್ ಲಿಸ್ಟ್ ವೈಶಿಷ್ಟ್ಯದಲ್ಲಿ, ನೀವು ತಕ್ಷಣ ಲೇಖನವನ್ನು ಉಳಿಸಬಹುದು.
  • ನಿಮಗೆ ಬೇಕಾದಲ್ಲಿ ನೀವು ಅದನ್ನು ನಂತರ ಓದಬಹುದು.
  • ಇದರೊಂದಿಗೆ, ನಿಮ್ಮ ಆಯ್ಕೆಯ ಪುಸ್ತಕ ಅಥವಾ ಪುಟವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ.
Google Chrome Feature: ಬ್ರೌಸಿಂಗ್ ಮಾತ್ರವಲ್ಲ, ಲೈಬ್ರೆರಿಯಾಗಿಯೂ ಕಾರ್ಯನಿರ್ವಹಿಸುತ್ತೆ ಗೂಗಲ್ ಕ್ರೋಮ್  title=
Google Chrome Secret Features

ಗೂಗಲ್ ಕ್ರೋಮ್ ಸೀಕ್ರೆಟ್ ಫೀಚರ್‌ಗಳು: ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ  ಇಂಟರ್ನೆಟ್ ಬ್ರೌಸರ್ ಎಂದರೆ ಗೂಗಲ್ ಕ್ರೋಮ್. ಹೆಚ್ಚಿನ ಜನರು ಕ್ರೋಮ್‌ನಲ್ಲಿ ಹುಡುಕಾಟಕ್ಕೆ ಸೀಮಿತರಾಗಿದ್ದಾರೆ, ಆದರೆ ಈ ಬ್ರೌಸರ್‌ನಲ್ಲಿ ಅಂತಹ ಅನೇಕ ವೈಶಿಷ್ಟ್ಯಗಳಿವೆ, ಅದು ಎಲ್ಲರಿಗೂ ತಿಳಿದಿರುವುದಿಲ್ಲ. ಪ್ರಸ್ತುತ ಜಗತ್ತಿನಲ್ಲಿ ನಮ್ಮೆಲ್ಲಾ ಅನುಮಾನಗಳಿಗೆ ಉತ್ತರ ನೀಡಬಲ್ಲ ಒಂದೇ ಒಂದು ಸಾಧನ ಎಂದರೆ ಅದುವೇ ಗೂಗಲ್ ಕ್ರೋಮ್. ಗೂಗಲ್ ಕ್ರೋಮ್ ನಾವು ಬಗೆದಷ್ಟೂ ಕಲಿಯಬಹುದಾದ ಒಂದು ಮಹಾ ಸಾಗರವಿದ್ದಂತೆ. ಸಾಮಾನ್ಯವಾಗಿ ನಾವು ಏನನ್ನಾದರೂ ಬ್ರೌಸ್ ಮಾಡಲು ಗೂಗಲ್ ಅನ್ನು ಬಳಸುತ್ತೇವೆ. ಆದರೆ, ಗೂಗಲ್ ಕ್ರೋಮ್ ಲೈಬ್ರರಿ ಆಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಲೇಖನದಲ್ಲಿ ನಾವು ಅಂತಹ ಒಂದು ವಿಶಿಷ್ಟ ವೈಶಿಷ್ಟ್ಯದ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.

ಗೂಗಲ್ ಕ್ರೋಮ್‌ನ ರೀಡಿಂಗ್ ಲಿಸ್ಟ್ ವೈಶಿಷ್ಟ್ಯದಲ್ಲಿ, ನೀವು ತಕ್ಷಣ ಲೇಖನವನ್ನು ಉಳಿಸಬಹುದು. ನಿಮಗೆ ಬೇಕಾದಲ್ಲಿ ನೀವು ಅದನ್ನು ನಂತರ ಓದಬಹುದು. ಇದರೊಂದಿಗೆ, ನಿಮ್ಮ ಆಯ್ಕೆಯ ಪುಸ್ತಕ ಅಥವಾ ಪುಟವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಇದು ರೀಡಿಂಗ್ ಲಿಸ್ಟ್ ವೈಶಿಷ್ಟ್ಯ ಮತ್ತು ಬುಕ್‌ಮಾರ್ಕ್‌ಗಳ ಬಾರ್ ವೈಶಿಷ್ಟ್ಯವನ್ನು ಹೋಲುತ್ತದೆ. ಇದರ ಪ್ರಯೋಜನವನ್ನು ಪಡೆಯಲು, ನೀವು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬೇಕು.

ಇದನ್ನೂ ಓದಿ- ಫೋನ್‌ನಲ್ಲಿ ಈ ಲಕ್ಷಣಗಳು ಕಂಡುಬಂದರೆ ಹುಷಾರಾಗಿರಿ, ನಿಮ್ಮ ಫೋನ್ ಹ್ಯಾಕ್ ಆಗಿರಬಹುದು

ಗೂಗಲ್ ಕ್ರೋಮ್ ರೀಡಿಂಗ್ ಲಿಸ್ಟ್ ವೈಶಿಷ್ಟ್ಯವನ್ನು ಈ ರೀತಿ ಬಳಸಿ: 
* ಮೊದಲನೆಯದಾಗಿ, ನಿಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಅನ್ನು ತೆರೆಯಿರಿ.
* ಅದರ ನಂತರ ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಫೋಟೋದೊಂದಿಗೆ ನೀಡಲಾದ ಸೈಡ್ ಪ್ಯಾನಲ್ ಬಟನ್ ಮೇಲೆ ಕ್ಲಿಕ್ ಮಾಡಿ.
* ಈಗ ನಿಮ್ಮ ಪರದೆಯ ಮೇಲೆ ಫಲಕವು ತೆರೆಯುತ್ತದೆ, ಅದರಲ್ಲಿ 2 ವಿಭಾಗಗಳ ರೀಡಿಂಗ್ ಲಿಸ್ಟ್ ಮತ್ತು ಬುಕ್‌ಮಾರ್ಕ್‌ಗಳು ಇರುತ್ತವೆ.
* ನೀವು ರೀಡಿಂಗ್ ಲಿಸ್ಟ್   ಪಟ್ಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಸೇವ್ ಮಾಡಲಾದ ಎಲ್ಲಾ ಲೇಖನಗಳ ಪಟ್ಟಿ ಕಾಣಿಸುತ್ತದೆ.

ಇದನ್ನೂ ಓದಿ- ಈ ಉತ್ಪನ್ನದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಹೊರಟಿದೆ ಜಿಯೋ. ! ಗ್ರಾಹಕರಿಗೂ ಆಗಲಿದೆ ಲಾಭ

ಗೂಗಲ್ ಕ್ರೋಮ್‌ನಲ್ಲಿ ರೀಡಿಂಗ್ ಲಿಸ್ಟ್ ಅನ್ನು ಉಳಿಸುವುದು ಹೇಗೆ?
ಕೆಲಸದ ಕಾರಣದಿಂದ ಕೆಲವು ಹುಡುಕಾಟಗಳನ್ನು ಮಾಡುವಾಗ, ನೀವು ಕೆಲವು ಉತ್ತಮ ಲೇಖನಗಳನ್ನು ನೋಡುತ್ತೀರಿ, ಆದರೆ ಆ ಸಮಯದಲ್ಲಿ ನಿಮಗೆ ಅವುಗಳನ್ನು ಓದಲು ಸಮಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ವೈಶಿಷ್ಟ್ಯವು ನಿಮಗೆ ಅನುಕೂಲಕರವಾಗಿದೆ. 
>> ಮೊಬೈಲ್‌ನಲ್ಲಿ ಓದುವಾಗ ನೀವು ಲೇಖನವನ್ನು ಇಷ್ಟಪಟ್ಟಿದ್ದರೆ ಮತ್ತು ಅದನ್ನು ಸುರಕ್ಷಿತವಾಗಿಡಲು ನೀವು ಬಯಸಿದರೆ, ಆ ವಿಷಯವನ್ನು ತಕ್ಷಣ  ರೀಡಿಂಗ್ ಲಿಸ್ಟ್ ನಲ್ಲಿ ಸೇವ್ ಮಾಡಿ.
>> ಇದರ ನಂತರ, ಬಲಭಾಗದಲ್ಲಿರುವ ಪ್ರೊಫೈಲ್ ಫೋಟೋದ ಬಳಿ ನೀಡಲಾದ ಬಟನ್ ಮೇಲೆ ಕ್ಲಿಕ್ ಮಾಡಿ.
>> ಇದರ ನಂತರ ಆಡ್ ಕರೆಂಟ್ ಟ್ಯಾಬ್ ಹೆಸರಿನ ಬಟನ್ ರೀಡಿಂಗ್ ಲಿಸ್ಟ್ ವಿಭಾಗದಲ್ಲಿ ಕಾಣಿಸುತ್ತದೆ.
>> ಈಗ ಅದರ ಮೇಲೆ ಕ್ಲಿಕ್ ಮಾಡಿದ ನಂತರ, ಅದನ್ನು ರೀಡಿಂಗ್ ಲಿಸ್ಟ್ ನಲ್ಲಿ ಸೇರಿಸಲಾಗುತ್ತದೆ.
>> ಬಳಿಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ ಓದಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News