100kmplಗಿಂತ ಹೆಚ್ಚು ಮೈಲೇಜ್ ನೀಡುತ್ತೆ ಈ ಸ್ಕೂಟರ್: ಬೆಲೆ ಇಷ್ಟೊಂದು ಕಡಿಮೆಯೇ!

ಜನಪ್ರಿಯ ದ್ವಿಚಕ್ರ ವಾಹನ ಕಂಪನಿ ಯಮಹಾ ಭಾರತೀಯ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು 'ಮೈಲೇಜ್ ಚಾಲೆಂಜ್ ಚಟುವಟಿಕೆ' ಆಯೋಜಿಸಿದೆ. ಇಲ್ಲಿ ಕಂಪನಿಯು ತನ್ನ 125cc ಹೈಬ್ರಿಡ್ ಸ್ಕೂಟರ್‌ಗಳ ಮೈಲೇಜ್ ಅನ್ನು ಪರೀಕ್ಷಿಸಿದೆ.

Written by - Bhavishya Shetty | Last Updated : Aug 30, 2022, 11:04 AM IST
    • ಯಮಹಾ ಭಾರತೀಯ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು 'ಮೈಲೇಜ್ ಚಾಲೆಂಜ್ ಚಟುವಟಿಕೆ' ಆಯೋಜಿಸಿದೆ
    • ಇಲ್ಲಿ ಕಂಪನಿಯು ತನ್ನ 125cc ಹೈಬ್ರಿಡ್ ಸ್ಕೂಟರ್‌ಗಳ ಮೈಲೇಜ್ ಅನ್ನು ಪರೀಕ್ಷಿಸಿದೆ
    • Yamaha Fascino 125 Fi ಹೈಬ್ರಿಡ್ ಬೆಲೆ ರೂ 76,000 (ಎಕ್ಸ್ ಶೋ ರೂಂ)
100kmplಗಿಂತ ಹೆಚ್ಚು ಮೈಲೇಜ್ ನೀಡುತ್ತೆ ಈ ಸ್ಕೂಟರ್: ಬೆಲೆ ಇಷ್ಟೊಂದು ಕಡಿಮೆಯೇ! title=
Yamaha Scooters

ಸ್ಕೂಟರ್‌ಗಳು ಬೈಕ್‌ಗಳಿಗಿಂತ ಸುಲಭವಾಗಿ ಕಾರ್ಯನಿರ್ವಹಿಸುತ್ತವೆ, ಜೊತೆಗೆ ಶೇಖರಣಾ ಸೌಲಭ್ಯಗಳನ್ನು ಒದಗಿಸುತ್ತವೆ. ಆದರೆ, ಹೆಚ್ಚಿನ ಮೈಲೇಜ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಹಲವರು ಸ್ಕೂಟರ್ ಖರೀದಿಸುವುದಿಲ್ಲ. ಆದರೆ ಈಗ ಅಂತಹ ಸ್ಕೂಟರ್‌ಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿದ್ದು, ಇದರಿಂದ ಬೈಕ್‌ಗಳು ಹಿಂದೆ ಬಿದ್ದಿವೆ. ಇದು ನೈಜ ಪ್ರಪಂಚದ ಪರೀಕ್ಷೆಯಲ್ಲಿ 100kmpl ಗಿಂತ ಹೆಚ್ಚು ಮೈಲೇಜ್ ನೀಡಿದೆ. ವಿಶೇಷವೆಂದರೆ ಬೆಲೆಯಲ್ಲಿ ಬಹುತೇಕ ಹೀರೋ ಸ್ಪ್ಲೆಂಡರ್ ನಂತೆಯೇ ಇದೆ. ಹೆಚ್ಚಿನ ವಿವರಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.  

ಇದನ್ನೂ ಓದಿ: ಈ ಕನಸುಗಳ ಬಗ್ಗೆ ಬೇರೆಯವರೊಂದಿಗೆ ಚರ್ಚೆ ಮಾಡಿದರೆ ಶುಭ ಫಲ ಸಿಗುವುದಿಲ್ಲ

ಜನಪ್ರಿಯ ದ್ವಿಚಕ್ರ ವಾಹನ ಕಂಪನಿ ಯಮಹಾ ಭಾರತೀಯ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು 'ಮೈಲೇಜ್ ಚಾಲೆಂಜ್ ಚಟುವಟಿಕೆ' ಆಯೋಜಿಸಿದೆ. ಇಲ್ಲಿ ಕಂಪನಿಯು ತನ್ನ 125cc ಹೈಬ್ರಿಡ್ ಸ್ಕೂಟರ್‌ಗಳ ಮೈಲೇಜ್ ಅನ್ನು ಪರೀಕ್ಷಿಸಿದೆ. ಯಮಹಾದ 125cc ಹೈಬ್ರಿಡ್ ಸ್ಕೂಟರ್ ಮಾದರಿ ಶ್ರೇಣಿಯು Fascino 125 Fi ಹೈಬ್ರಿಡ್, Ray ZR 125 Fi ಹೈಬ್ರಿಡ್ ಮತ್ತು ಸ್ಟ್ರೀಟ್ ರ್ಯಾಲಿ 125 Fi ಹೈಬ್ರಿಡ್ ಅನ್ನು ಒಳಗೊಂಡಿದೆ.

Yamaha Fascino 125 Fi ಹೈಬ್ರಿಡ್ ಬೆಲೆ ರೂ 76,000 (ಎಕ್ಸ್ ಶೋ ರೂಂ). 100 ಕ್ಕೂ ಹೆಚ್ಚು ಯಮಹಾ ಗ್ರಾಹಕರು ಈ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು. ಈ ಸವಾಲಿನ ಚಟುವಟಿಕೆಯಲ್ಲಿ ಯಮಹಾದ ಹೈಬ್ರಿಡ್ ಸ್ಕೂಟರ್‌ಗಳು 106.89 km/l ವರೆಗೆ ಮೈಲೇಜ್ ನೀಡಿವೆ.

ಚಾಲೆಂಜ್ ಸಮಯದಲ್ಲಿ, ಭಾಗವಹಿಸುವವರು 30 ಕಿ.ಮೀ. ಪ್ರಯಾಣ ಮಾಡಬೇಕಿತ್ತು. ಅವರ ಪಯಣ ನಗರ ಸಂಚಾರ, ಏರಿಳಿತ, ತೆರೆದ ರಸ್ತೆಗಳ ಮಿಶ್ರಣವಾಗಿತ್ತು. ಮೈಲೇಜ್ ಪರೀಕ್ಷೆ ಮಾತ್ರವಲ್ಲದೆ ಸ್ಕೂಟರ್‌ನ ಸಸ್ಪೆನ್ಷನ್, ಬ್ರೇಕಿಂಗ್, ಪಿಕಪ್ ಮತ್ತು ವೇಗವನ್ನು ಇತರ ವಿಷಯಗಳೊಂದಿಗೆ ಪರೀಕ್ಷಿಸಲಾಯಿತು. ಮೈಲೇಜ್ ಚಾಲೆಂಜ್ ಚಟುವಟಿಕೆಯು ಭಾಗವಹಿಸುವವರಿಗೆ ನೀಡಿದ ಬ್ರೀಫಿಂಗ್ ಸೆಷನ್‌ನೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಅವರ ಸ್ಕೂಟರ್‌ಗಳಿಗೆ ಇಂಧನ ತುಂಬಿಸಿ ಪ್ರಯಾಣಕ್ಕೆ ಕಳುಹಿಸಲಾಯಿತು. 

ಇದನ್ನೂ ಓದಿ: Google Chrome Feature: ಬ್ರೌಸಿಂಗ್ ಮಾತ್ರವಲ್ಲ, ಲೈಬ್ರೆರಿಯಾಗಿಯೂ ಕಾರ್ಯನಿರ್ವಹಿಸುತ್ತೆ ಗೂಗಲ್

ಅತಿ ಹೆಚ್ಚು ಮೈಲೇಜ್ ಪಡೆಯುವ ಸವಾರರಿಗೆ ಉಡುಗೊರೆ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. 5 ವಿಜೇತರ ಪಟ್ಟಿ ಈ ಕೆಳಗಿನಂತಿದೆ.

1. ರಿಯಾ -106.89 ಕೆಎಂಪಿಎಲ್

2. ಜಾನ್ಸನ್ ಥಾಮಸ್ - 106 ಕೆಎಂಪಿಎಲ್

3. ಅವನಿ - 104.27 ಕೆಎಂಪಿಎಲ್

4. ಜನೇಶೋ - 101.29 ಕೆಎಂಪಿಎಲ್

5. ಮನು - 97.53kmpl

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News