BSNL ಸಿಮ್ ಗಾಗಿ ಬಹಳ ದಿನ ಕಾಯುವ ಅಗತ್ಯ ಇಲ್ಲ!ಆರ್ಡರ್ ಮಾಡಿದ 90 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಸಿಮ್ !
BSNL 4G SIM home delivery :ಇದೀಗ BSNL ಸಿಮ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ ಒಂದೂವರೆ ಗಂಟೆಗಳ ಒಳಗೆ ಸಿಮ್ ಕಾರ್ಡ್ ಮನೆ ಬಾಗಿಲಿಗೆ ಬರುತ್ತದೆ.
BSNL 4G SIM home delivery : ಭಾರತ ಸರ್ಕಾರದ ಟೆಲಿಕಾಂ ಕಂಪನಿ BSNL ದೇಶಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸುತ್ತಿದೆ ಮತ್ತು 5G ನೆಟ್‌ವರ್ಕ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.ಇತ್ತೀಚೆಗಷ್ಟೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಕ್ಟೋಬರ್ ಅಂತ್ಯದ ವೇಳೆಗೆ 80,000 ಟವರ್‌ಗಳನ್ನು ಮತ್ತು ಮುಂದಿನ ವರ್ಷದ ಮಾರ್ಚ್‌ನೊಳಗೆ ಉಳಿದ 21,000 ಟವರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.ಅಂದರೆ ಅವರ ಹೇಳಿಕೆ ಪ್ರಕಾರ, ಮಾರ್ಚ್ 2025ರ ವೇಳೆಗೆ 4G ನೆಟ್‌ವರ್ಕ್‌ನ ಒಂದು ಲಕ್ಷ ಟವರ್‌ಗಳನ್ನು ಸ್ಥಾಪಿಸಲಾಗುವುದು. ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್‌ನಲ್ಲಿ ಮಾತ್ರ 5G ಸೇವೆಗಳನ್ನು ಬಳಸಬಹುದು ಮತ್ತು 5G ಸೇವೆಗಳಿಗಾಗಿ ಟವರ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಕೆಲಸ ನಡೆಯುತ್ತಿದೆ.
ಪ್ರಿಪೇಯ್ಡ್ ಪ್ಲಾನ್ ದುಬಾರಿಯಾಗಿರುವುದರ ಲಾಭವಾಗಿದ್ದು BSNLಗೆ :
ಇತ್ತೀಚೆಗೆ ಮೊಬೈಲ್ ಕಂಪನಿಗಳು ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಇದಾದ ನಂತರ ಜಿಯೋ,ಏರ್‌ಟೆಲ್ ಮತ್ತು ವಿಐ ತೊರೆದು ಬಿಎಸ್‌ಎನ್‌ಎಲ್ ನತ್ತ ಸಾಕಷ್ಟು ಮಂದಿ ಮುಖ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಸರ್ಕಾರಿ ಕಂಪನಿಯು ಜುಲೈ 2024ರಲ್ಲಿ ಆಂಧ್ರಪ್ರದೇಶದಲ್ಲಿ217,000 ಹೊಸ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದೆ.
ಇದನ್ನೂ ಓದಿ : ಅಮೆಜಾನ್ ಸೇಲ್‌ನಲ್ಲಿ ನೆಚ್ಚಿನ ಬ್ರ್ಯಾಂಡ್ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡೀಲ್, ಮತ್ತೆ ಸಿಗಲ್ಲ ಈ ಅವಕಾಶ!
ಸಿಮ್ ಅನ್ನು ಆರ್ಡರ್ ಮಾಡಬಹುದು :
BSNL ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ.ಇದರಿಂದಾಗಿ ಅನೇಕ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್ ಕಚೇರಿಗಳಲ್ಲಿ ಸಿಮ್ ಕಾರ್ಡ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.ಅಲ್ಲಿ ಸಿಮ್ ಗಾಗಿ ಸರತಿ ಸಾಲು ಬಹಲ್ ದೊಡ್ಡದಿರುತ್ತದೆ.ಆದರೆ ಇದಕ್ಕೂ ಪರಿಹಾರವಿದೆ. BSNL ಸಿಮ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.ಈ ಮೂಲಕ ನೀವು ಕುಳಿತಲ್ಲಿಗೆ ಸಿಮ್ ಡೆಲಿವೆರಿಯಾಗುತ್ತದೆ.
TelecomTalk ವೆಬ್‌ಸೈಟ್ ಪ್ರಕಾರ, BSNL ಸಹ ಪ್ರೂನ್ ಹೆಸರಿನ ಕಂಪನಿಯ ಸಹಯೋಗದೊಂದಿಗೆ ಸಿಮ್ ಕಾರ್ಡ್‌ಗಳನ್ನು ಮನೆಗೆ ತಲುಪಿಸಲು ಪ್ರಾರಂಭಿಸಿದೆ.ಈ ಹಿಂದೆ ಇತರ ಮೊಬೈಲ್ ಕಂಪನಿಗಳು ಈ ಕೆಲಸ ಮಾಡುತ್ತಿತ್ತು.ಆದರೆ, ಈಗ BSNL ಸಹ ಈ ಸೌಲಭ್ಯವನ್ನು ಪ್ರಾರಂಭಿಸಿದೆ.Google Play Store ನಿಂದ Prune ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.ಇಲ್ಲಿ ಸಿಮ್ ಆರ್ಡರ್ ಮಾಡಿದ 90 ನಿಮಿಷಗಳಲ್ಲಿ ಸಿಮ್ ವಿತರಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ : ನೀವು ಮಾಡುವ ಆ ಒಂದು WhatsApp chat ಅನ್ನು ಎಲ್ಲರಿಂದ ಮುಚ್ಚಿಡ ಬೇಕಾ? ಬಹಳ ಸುಲಭ ಹೈಡಿಂಗ್ ಟೆಕ್ನಿಕ್
BSNL ಸಿಮ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹೇಗೆ? :
ಹಂತ 1: https://prune.co.in/ವೆಬ್‌ಸೈಟ್‌ಗೆ ಹೋಗಿ
ಹಂತ 2: ಸಿಮ್ ಕಾರ್ಡ್ ಖರೀದಿಸಿ ಬಟನ್ ಕ್ಲಿಕ್ ಮಾಡಿ.
ಹಂತ 3: BSNL ಅನ್ನು ಆಪರೇಟರ್ ಆಗಿ ಆಯ್ಕೆಮಾಡಿ.ನಿಮ್ಮ ಆಯ್ಕೆಯ FRC ಯೋಜನೆಯನ್ನು ಆಯ್ಕೆಮಾಡಿ (FRC ಎಂದರೆ ಮೊದಲ ರೀಚಾರ್ಜ್ ಕೂಪನ್, ಇದು SIM ಅನ್ನು ಸಕ್ರಿಯಗೊಳಿಸಲು ಮೊದಲ ರೀಚಾರ್ಜ್ ಆಗಿದೆ).
ಹಂತ 4: ಅಗತ್ಯವಿರುವ ಮಾಹಿತಿ ಮತ್ತು OTP ನಮೂದಿಸಿ.ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಯಂತಹ ವೆಬ್‌ಸೈಟ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಇದರ ನಂತರ, ವೆಬ್‌ಸೈಟ್ ಕಳುಹಿಸಿದ ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ಸಹ ನಮೂದಿಸಿ.
ಹಂತ 5: ಅಂತಿಮವಾಗಿ, ನಿಮ್ಮ ಸಿಮ್ ಡೆಲಿವೆರಿ ಮಾಡಬೇಕಾಗಿರುವ ವಿಳಾಸವನ್ನು ನಮೂದಿಸಿ. ವೆಬ್‌ಸೈಟ್‌ನಲ್ಲಿನ ಉಳಿದ ಸೂಚನೆಗಳನ್ನು ಫಾಲೋ ಮಾಡಿ.
ಮುಂದಿನ 90 ನಿಮಿಷಗಳಲ್ಲಿ ನಿಮ್ಮ ಸಿಮ್ ಕಾರ್ಡ್ ನಿಮ್ಮ ಮನೆಗೆ ತಲುಪುತ್ತದೆ. SIM ಕಾರ್ಡ್ ಅನ್ನು ತಕ್ಷಣವೇ ಆಕ್ಟಿವ್ ಮಾಡಲಾಗುತ್ತದೆ. ನಿಮ್ಮ ಗುರುತಿನ (KYC)ನಿಮ್ಮ ಮನೆಯಲ್ಲಿ ಮಾಡಬೇಕಾಗುತ್ತದೆ. ಪ್ರಸ್ತುತ BSNL ಹರಿಯಾಣ (ಗುರುಗ್ರಾಮ) ಮತ್ತು ಉತ್ತರ ಪ್ರದೇಶ (ಗಾಜಿಯಾಬಾದ್) ನಲ್ಲಿ ಈ ಸೌಲಭ್ಯವನ್ನು ಒದಗಿಸುತ್ತಿದೆ.
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ