ನೀವು ಮಾಡುವ ಆ ಒಂದು WhatsApp chat ಅನ್ನು ಎಲ್ಲರಿಂದ ಮುಚ್ಚಿಡ ಬೇಕಾ? ಬಹಳ ಸುಲಭ ಹೈಡಿಂಗ್ ಟೆಕ್ನಿಕ್

WhatsApp lock chat : ನಾವು ಎಲ್ಲರಿಂದ ಮರೆ ಮಾಡಬೇಕು ಎಂದುಕೊಂಡಿರುವ ಚ್ಯಾಟ್ ಅನ್ನು ಸುಲಭವಾಗಿ ಹೈಡ್ ಮಾಡುವ ಟೆಕ್ನಿಕ್ ಅನ್ನು  WhatsApp ಪರಿಚಯಿಸಿದೆ.   

Written by - Ranjitha R K | Last Updated : Aug 6, 2024, 11:10 AM IST
  • WhatsApp ಅನ್ನು ಪ್ರಪಂಚದಾದ್ಯಂತ ಶತಕೋಟಿ ಜನರು ಬಳಸುತ್ತಾರೆ.
  • ಚಾಟ್‌ನ ಹೊರತಾಗಿ ಅನೇಕ ಕೆಲಸಗಳಿಗಾಗಿ WhatsApp ಬಳಕೆಯಾಗುತ್ತದೆ.
  • ಇದನ್ನು ವ್ಯಾಪಾರ ಮತ್ತು ಕಚೇರಿ ಕೆಲಸಗಳಿಗೂ ಬಳಸಲಾಗುತ್ತದೆ.
ನೀವು ಮಾಡುವ ಆ ಒಂದು WhatsApp chat ಅನ್ನು ಎಲ್ಲರಿಂದ ಮುಚ್ಚಿಡ ಬೇಕಾ? ಬಹಳ ಸುಲಭ ಹೈಡಿಂಗ್ ಟೆಕ್ನಿಕ್ title=

How to hide WhatsApp lock chats : WhatsApp ಅನ್ನು ಪ್ರಪಂಚದಾದ್ಯಂತ ಶತಕೋಟಿ ಜನರು ಬಳಸುತ್ತಾರೆ.ಈ ಅಪ್ಲಿಕೇಶನ್‌ನೊಂದಿಗೆ ಫೋಟೋ,  ವೀಡಿಯೊಗಳನ್ನು ಹಂಚಿಕೊಳ್ಳಬಹುದು, ಸಮೀಕ್ಷೆಗಳನ್ನು ಮಾಡಬಹುದು. ಚಾಟ್‌ನ ಹೊರತಾಗಿ ಅನೇಕ ಕೆಲಸಗಳಿಗಾಗಿ WhatsApp ಬಳಕೆಯಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಇದನ್ನು ವ್ಯಾಪಾರ ಮತ್ತು ಕಚೇರಿ ಕೆಲಸಗಳಿಗೂ ಬಳಸಲಾಗುತ್ತದೆ. 

ನಿಮ್ಮ ಚಾಟ್‌ಗಳನ್ನು ಸುರಕ್ಷಿತವಾಗಿರಿಸಲು WhatsApp ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರಿಚಯಿಸಿದೆ.ಇದರೊಂದಿಗೆ,ನಿಮ್ಮ ಮೆಸೇಜ್ ಗಳು ಪರಸ್ಪರ ಸುರಕ್ಷಿತವಾಗಿರುತ್ತವೆ.ಆದರೆ, ನೀವು ನಿಮ್ಮ ಫೋನ್ ಅನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಕೈಯ್ಯಲ್ಲಿ ನೀಡಿದಾಗ ನಿಮ್ಮ WhatsApp ಸುರಕ್ಷಿತವಾಗಿ ಇರಬಹುದೇ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಅಂದರೆ ಸ್ನೇಹಿತರು,ಕುಟುಂಬ ಸದಸ್ಯರಿಂದಲೂ ಮುಚ್ಚಿಡಬೇಕಾದ ಚ್ಯಾಟ್ ನಿಮ್ಮ ಮೊಬೈಲ್ ನಲ್ಲಿದ್ದಾಗ ಏನು ಮಾಡುವುದು? ಬಳಕೆದಾರರ ಈ ಯೋಚನೆಯನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಚಾಟ್ ಲಾಕ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.ಅದರ ಮೂಲಕ ನೀವು ನಿಮ್ಮ ಖಾಸಗಿ ಚಾಟ್‌ಗಳನ್ನು ಹೈಡ್ ಮಾಡಬಹುದು. 

ಇದನ್ನೂ ಓದಿ : Amazon Great Freedom Festival Sale: ಸ್ಮಾರ್ಟ್ ಟಿವಿ, ವಾಷಿಂಗ್ ಮೆಷಿನ್‌ಗಳಿಂದ ರೆಫ್ರಿಜರೇಟರ್‌ಗಳವರೆಗೆ ಬಂಪರ್ ಡಿಸ್ಕೌಂಟ್

WhatsApp ನ ಚಾಟ್ ಲಾಕ್ ವೈಶಿಷ್ಟ್ಯವು ಖಾಸಗಿ ಚಾಟ್‌ಗಳನ್ನು ಫೋಲ್ಡರ್‌ ನಿಂದ ಮರೆ ಮಾಡುತ್ತದೆ.ಅದನ್ನು ನೀವು ನಿಮ್ಮ ಫಿಂಗರ್‌ಪ್ರಿಂಟ್, ಮುಖ ಅಥವಾ ಪಾಸ್‌ವರ್ಡ್‌ನೊಂದಿಗೆ ಮಾತ್ರ ತೆರೆಯಬಹುದು.ಕುತೂಹಲಕಾರಿ ವಿಷಯವೆಂದರೆ ಚಾಟ್ ಲಾಕ್ ಫೋಲ್ಡರ್ ಅನ್ನು ಹೈಡ್ ಮಾಡಲು WhatsApp ಅನುಮತಿ ನೀಡುತ್ತದೆ. ಇದಕ್ಕಾಗಿ ನೀವು ರಹಸ್ಯ ಕೋಡ್ ಅನ್ನು ನಮೂದಿಸಬೇಕು.ಆಗ ಈ ಚಾಟ್ ಫೋಲ್ಡರ್  ಸಂಪೂರ್ಣವಾಗಿ ಮರೆಯಾಗುತ್ತದೆ.ನೀವು ಸರ್ಚ್ ಲಿಸ್ಟ್ ನಲ್ಲಿ ಹಾಕಿರುವ ಸಿಕ್ರೆಟ್ ಕೋಡ್‌ ಮೂಲಕ ಮಾತ್ರ ಅದನ್ನು ಓಪನ್ ಮಾಡಬಹುದು.   

ವಾಟ್ಸಾಪ್ ಲಾಕ್ ಚಾಟ್‌ಗಳನ್ನು ಮರೆಮಾಡುವುದು ಹೇಗೆ? : 
ಹಂತ 1: WhatsApp ಓಪನ್ ಮಾಡಿ ಹೈಡ್ ಮಾಡಬೇಕಾಗಿರುವ ಚಾಟ್ ಅನ್ನು ಸರ್ಚ್ ಮಾಡಿ. 
ಹಂತ 2: ಆ ಚಾಟ್ ಅನ್ನು ಒತ್ತಿ ಹಿಡಿದುಕೊಳ್ಳಿ,ಅದು ಮೆನುವನ್ನು ತೆರೆಯುತ್ತದೆ. ಅಲ್ಲಿಂದ 'ಲಾಕ್ ಚಾಟ್'ಆಯ್ಕೆಮಾಡಿ.
ಹಂತ 3: 'ಕಂಟಿನ್ಯೂ'ಕ್ಲಿಕ್ ಮಾಡಿ ಮತ್ತು ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಮುಖದೊಂದಿಗೆ ನಿಮ್ಮ ಚಾಟ್ ಅನ್ನು ಲಾಕ್ ಮಾಡಿ.

ಇದನ್ನೂ ಓದಿ : ಹುಡುಗಿಯರು ಒಬ್ಬರೇ ಇರುವಾಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನಂತೆ !

ಲಾಕ್ ಮಾಡಿದ ಫೋಲ್ಡರ್ ಅನ್ನು ಮರೆಮಾಡುವುದು ಹೇಗೆ? :
ಹಂತ 1: ನಿಮ್ಮ ಲಾಕ್ ಆಗಿರುವ ಚಾಟ್ ಫೋಲ್ಡರ್ ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 2: 'ಚಾಟ್ ಲಾಕ್ ಸೆಟ್ಟಿಂಗ್ಸ್'ಆಯ್ಕೆಮಾಡಿ.
ಹಂತ 3: 'ಸಿಕ್ರೆಟ್ ಕೋಡ್'ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಲಾಕ್ ಆಗಿರುವ ಚಾಟ್ ಫೋಲ್ಡರ್ ಅನ್ನು ತೆರೆಯಲು ನಿಮಗೆ ಬೇಕಾದ ಕೋಡ್ ಅನ್ನು ನಮೂದಿಸಿ.
ಹಂತ 4: 'ನೆಕ್ಸ್ಟ್'ಕ್ಲಿಕ್ ಮಾಡಿ, ಕೋಡ್ ಅನ್ನು ಮತ್ತೊಮ್ಮೆ ನಮೂದಿಸಿ ಮತ್ತು 'ಡನ್  ' ಟ್ಯಾಪ್ ಮಾಡಿ.
ಹಂತ 5: ಈಗ 'ಹೈಡ್ ಲಾಕ್ ಚಾಟ್ಸ್' ಅನ್ನು ಆನ್ ಮಾಡಿ. ಇಷ್ಟಾದ ಮೇಲೆ ಲಾಕ್ ಆಗಿರುವ ಚಾಟ್‌ಗಳ ಫೋಲ್ಡರ್ ನಿಮ್ಮ WhatsApp ಮುಖಪುಟದಿಂದ ಹೈಡ್ ಆಗುತ್ತದೆ. 
ಹಂತ 6: ನಿಮ್ಮ ಲಾಕ್ ಆಗಿರುವ ಚಾಟ್ ಫೋಲ್ಡರ್ ತೆರೆಯಲು, WhatsApp ಹೋಮ್ ಪೇಜ್‌ನಲ್ಲಿರುವ ಸರ್ಚ್ ಬಾರ್‌ನಲ್ಲಿ ನಿಮ್ಮ 'ಸಿಕ್ರೆಟ್ ಕೋಡ್' ಅನ್ನು ನಮೂದಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

Trending News