ನವದೆಹಲಿ : ಇಲ್ಲಿಯವರೆಗೆ ನೀವು ನೋಡಿರದ ಶುಕ್ರ ಗ್ರಹದ (Venus) ಒಂದು ಭಾಗದ ಫೋಟೋ ಸೆರೆ ಹಿಡಿಯುವಲ್ಲಿ ನಾಸಾ ವಿಜ್ಞಾನಿಗಳು ದೊಡ್ಡ ಯಶಸ್ಸು ಸಾಧಿಸಿದ್ದಾರೆ.  ನಾಸಾ ಮಾಡುತ್ತಿರುವ ಪಾರ್ಕರ್ ಸೊಲಾರ್ ಪ್ರೋಬ್ (Parker Solar Probe) ಶುಕ್ರಗ್ರಹದ ಅಪರೂಪದ ಚಿತ್ರ ಕ್ಲಿಕ್ ಮಾಡಿ ಭೂಮಿಗೆ (Earth) ರವಾನಿಸಿದೆ.  ಪಾರ್ಕರ್ ಸೋಲಾರ್ ತನ್ನ ವೈಡ್ ಫೀಲ್ಡ್ ಇಮೇಜರ್ (WISPR) ಮೂಲಕ ಈ ಚಿತ್ರ ತೆಗೆದಿದೆ. ಈ ಚಿತ್ರ ನೋಡಿ ವಿಜ್ಞಾನಿಗಳು ದಂಗಾಗಿ ಹೋಗಿದ್ದಾರೆ. 


COMMERCIAL BREAK
SCROLL TO CONTINUE READING

ಆ ಫೋಟೋದಲ್ಲಿ ಏನಿದೆ..?
ಶುಕ್ರ ಗ್ರಹದ (Venus) ರಾತ್ರಿಯ ಚಿತ್ರಣ ಈ ಫೋಟೋದಲ್ಲಿದೆ. ಆ ಫೋಟೋ ದಟ್ಟ ಮೋಡವನ್ನು ಸೆರೆ ಹಿಡಿದಿರಬಹುದೆಂದು ನಾಸಾ (NASA) ವಿಜ್ಞಾನಿಗಳು ಮೊದಲು ಭಾವಿಸಿದ್ದರು. ಫೋಟೋದಲ್ಲಿ ಕ್ಲಾರಿಟಿ ಕೂಡಾ ಸಿಗಲಿಕ್ಕಿಲ್ಲ ಎಂಬುದು ಅವರ ಕಲ್ಪನೆಯಾಗಿತ್ತು. ಯಾಕೆಂದರೆ ಈ  ಹಿಂದೆ ರವಾನೆಯಾದ ಫೋಟೋದಲ್ಲಿ (Photo) ಮೋಡಗಳಿದ್ದ ಕಾರಣ ಶುಕ್ರನ ಸ್ಪಷ್ಟ ಫೋಟೋ ಸಿಕ್ಕಿರಲಿಲ್ಲ. ಆದರೆ, ಈ ಸಲ ಶುಕ್ರನ ಸ್ಪಷ್ಟ ಫೋಟೋ ಮೊದಲ ಸಲ ವಿಜ್ಞಾನಿಗಳಿಗೆ ದಕ್ಕಿದೆ. 


ಇದನ್ನೂ ಓದಿ : Isro's Bhuvan Vs Google Maps:ವಿದೇಶಿ ಆಪ್ ಮರೆತ್ಹೋಗಿ, ನಿಮಗೆ ದಾರಿ ತೋರಿಸಲಿದೆ ISROದ Bhuvan App


ಪಾರ್ಕರ್ ಸೋಲಾರ್ ಕೆಲಸ ಏನು..?
ಸೂರ್ಯನ ಮೇಲೆ ಅತ್ಯಂತ ನಿಕಟವಾಗಿ ಕಣ್ಣಿಡುವುದು ನಾಸಾದ ಪಾರ್ಕರ್ (Parker Solar) ಸೋಲಾರ್ ಉದ್ದೇಶ. 2018ರಲ್ಲಿ ಅದನ್ನು ರವಾನಿಸಲಾಗಿತ್ತು. ಸೂರ್ಯನ (Sun) ಸಮೀಪದ ಕಣ, ಶಾಖ, ಅನಿಲ ಇತ್ಯಾದಿ ಅಂಶಗಳು ಅದು ಅಧ್ಯಯನ ಮಾಡುತ್ತದೆ. ತನ್ನ ಈ ಮಿಶನ್ ಸಮಯದಲ್ಲಿ ಸೂರ್ಯನಿಗೆ ಸಮೀಪ ಹೋಗುವಾಗ ಪಾರ್ಕರ್ ಸೋಲಾರ್ ಶುಕ್ರಗ್ರಹದ ಅತೀ ಸಮೀಪದಿಂದಲೇ ಹಾದು ಹೋಗುತ್ತದೆ. ಇದೇ ಸಮಯದಲ್ಲಿ ಪಾರ್ಕರ್ ಸೋಲಾರ್ ಶುಕ್ರ ಗ್ರಹದ ಫೋಟೋ ಸೆರೆ ಹಿಡಿದಿದೆ. 


ಫೋಟೋದಲ್ಲಿ ಅಂತಾದ್ದೇನಿದೆ.?
ಮೋಡಗಳಿಂದ (cloud) ಆವರಿಸಿಕೊಂಡಿರುವ ಶುಕ್ರನ ಚಿತ್ರ ಇಲ್ಲಿ ಕಾಣಿಸುತ್ತದೆ. ಅದು ಶುಕ್ರನ ಭೂಮಧ್ಯ ರೇಖೆಯ ಸಮೀಪದ ಚಿತ್ರವಾಗಿದೆ. ಈ ಪ್ರದೇಶ ಉಳಿದ ಪ್ರದೇಶಗಳಿಗಿಂತ 30 ಪಟ್ಟು ಹೆಚ್ಚು ಶೀತ ವಾತಾವರಣ ಹೊಂದಿರುತ್ತದೆ. ಜಪಾನಿನ (Japan) ವೀನಸ್ ಪ್ರೋಬ್ ಮಿಶನ್ ತೆಗೆದ ಫೋಟೋವನ್ನೇ ಹೋಲುತ್ತದೆ ಪಾರ್ಕರ್ ಸೋಲಾರ್ ತೆಗೆದ ಚಿತ್ರ.


ಇದನ್ನೂ ಓದಿ : ಆಗಸದಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳ Satellite ಓಟಕ್ಕೆ ಮುನ್ನುಡಿ ಬರೆದ ISRO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.