ಐಫೋನ್ SE 4 ನ ಡಮ್ಮಿ ಯೂನಿಟ್ ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈ ಫೋನ್ ಮೇಲ್ನೋಟಕ್ಕೆ ಐಫೋನ್ 14 ರಂತೆಯೇ ಕಾಣಿಸಬಹುದು. ಆದರೆ, iPhone SE 4 ಹಳೆಯ ವಿನ್ಯಾಸವನ್ನು ಹೊಂದಿರುವುದಿಲ್ಲ ಎನ್ನಲಾಗಿದೆ. ಇದು  ಹೊಸ ವಿನ್ಯಾಸವನ್ನು ಹೊಂದಿದ್ದು ಫ್ಲಾಟ್ ಅಂಚುಗಳನ್ನು ಹೊಂದಿರುತ್ತದೆ ಮತ್ತು Face ID ಸಿಸ್ಟಮ್‌ಗಾಗಿ ಸಣ್ಣ  ನಾಚ್ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಡಮ್ಮಿ ಯೂನಿಟ್ ನ ಗಾತ್ರವು iPhone SE (146.7mm x 71.5mm x 7.8mm) ಯಂತೆಯೇ ಇರುತ್ತದೆ ಎಂದು ಹೇಳಲಾಗುತ್ತಿದೆ.ಐಫೋನ್ SE 4 ನ ಗಾತ್ರವೂ ಒಂದೇ ಆಗಿರುತ್ತದೆ ಎನ್ನಲಾಗಿದೆ.ಆದರೆ ಐಫೋನ್ 14 ಪ್ಲಸ್ (6.7-ಇಂಚಿನ ಡಿಸ್ಪ್ಲೇ) ಗಾತ್ರದ ಐಫೋನ್ ಎಸ್ಇ 4 ಪ್ಲಸ್ ಸಹ ಬರಬಹುದು ಎಂದು ತೋರಿಸುವ ಡಮ್ಮಿ ಯುನಿಟ್ ಗಳು ಕೂಡ ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ : 2024ರ Top-10 ಡಿಜಿಟಲ್ ಸ್ಟಾರ್ಸ್ ಪಟ್ಟಿ ಬಿಡುಗಡೆ ಮಾಡಿದ Forbes


ಐಫೋನ್ ಎಸ್ಇ 4 ಪ್ಲಸ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಇದು ಬಜೆಟ್ ಸ್ನೇಹಿ ಫೋನ್‌ ಆಗಿರಲಿದೆ ಎನ್ನುವ ಕಾರಣ ಗ್ರ್ಹಾಕರು ಈ ಫೋನ್ ಬಿಡುಗಡೆಗೆ ಉತ್ಸಾಹದಿಂದ ಕಾಯುತ್ತಿದ್ದಾರೆ. ಆದರೆ ಇದೀಗ ಲಭ್ಯವಿರುವ ಎಲ್ಲಾ ಮಾಹಿತಿಯು ಲೀಕ್ ಆಗಿರುವ ಮಾಹಿತಿಯೇ ಹೊರತು  ಆಪಲ್ ಇದನ್ನು ಅಧಿಕೃತವಾಗಿ ದೃಢೀಕರಿಸಿಲ್ಲ.  


iPhone SE 4 ವಿನ್ಯಾಸವು iPhone 14 ನಂತೆ ಇರುವ ಸಾಧ್ಯತೆಯಿದೆ. ಆದರೆ iPhone SE 4 Plus ಯಾವ್ಗಾ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ಕೂಡಾ ಸ್ಪಷ್ಟ ಮಾಹಿತಿ ಇಲ್ಲ. ಮುಂಬರುವ ಉತ್ಪನ್ನಗಳ ಬಗ್ಗೆ ಆಪಲ್ ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ.ಆದ್ದರಿಂದ ಅಭಿಮಾನಿಗಳು ಐಫೋನ್ SE 4 ಹೇಗೆ ಕಾಣುತ್ತದೆ ಮತ್ತು ಅದು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಅಧಿಕೃತ ಪ್ರಕಟಣೆಗಾಗಿ ಕಾಯಬೇಕಾಗಿದೆ.


ಇದನ್ನೂ ಓದಿ : ಮಂಗಳನ ಮೇಲ್ಮೈಯಲ್ಲಿ ಮಾನವನ ಮುಖ ? ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.