PUBG Mobile India Latest Update:  PUBG ಮೊಬೈಲ್ ಆಟ ಇಷ್ಟಪಡುವವರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇತ್ತೀಚೆಗಷ್ಟೇ ಕಂಪನಿ ಭಾರತೀಯ ಮಾರುಕಟ್ಟೆಗೆ ಪುನಃ ಪ್ರವೇಶಿಸುವ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಕಂಪನಿ ಇದಕ್ಕಾಗಿ ತನ್ನ ಸಿದ್ಧತೆಗಳನ್ನು ಆರಂಭಿಸಿದೆ. ಭಾರತೀಯ ಮೊಬೈಲ್ ಆಟಗಾರರು ಇದಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ PUBG ಅನ್ನು ದೇಶದಲ್ಲಿ ಮರುಪ್ರಾರಂಭಿಸಲಾಗುವುದು ಎಂದು ನಿರಂತರವಾಗಿ ಹೇಳಲಾಗುತ್ತಿದೆ. ಈ ಕುರಿತು ಕೆಲ ಊಹಾಪೋಹಗಳು ಕೂಡ ಕೇಳಿಬಂದಿದ್ದವು. ಆದರೆ, ಇದೀಗ ಪ್ರಕಟಗೊಂಡ ಸುದ್ದಿಯ ಪ್ರಕಾರ ಈ ಆಟ ಶೀಘ್ರದಲ್ಲಿಯೇ ಮತ್ತೆ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ನಿಮ್ಮಲ್ಲಿ ಮೂಡಿಸಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- PUBG ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಕಂಪನಿ ಕೈಗೊಂಡಿದೆ ಈ ನಿರ್ಧಾರ


ನಮ್ಮ ಸಹಯೋಗಿ ವೆಬ್ ಸೈಟ್ Zee News ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ PUBG Mobile India ಭಾರತದಲ್ಲಿ ತನ್ನ ಅಧಿಕೃತ ನೋಂದಣಿ ಪೂರ್ಣಗೊಳಿಸಿದೆ ಎನ್ನಲಾಗಿದೆ. ಟೆಕ್ ವೆಬ್ ಸೈಟ್ talksport ಪ್ರಕಾರ ಭಾರತ ಸರ್ಕಾರದ ಕಾರ್ಪೋರೆಟ್ ವ್ಯವಹಾರಗಳ ಸಚಿವಾಲಯ ಕಂಪನಿಗೆ ಅನುಮತಿ ನೀಡಿದೆ ಎನ್ನಲಾಗಿದೆ. PUBG ಭಾರತದಲ್ಲಿ PUBG India Pvt Ltd ಹೆಸರಿನಲ್ಲಿ ಕಂಪನಿಯ ನೋಂದಣಿ ಮಾಡಿದೆ.


ಇದನ್ನು ಓದಿ- ಭಾರತದಲ್ಲಿನ PUBG ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್..! ಇಂದಿನಿಂದಲೇ ಈ ನಿಯಮ ಜಾರಿ..!


ನವೆಂಬರ್ 21ರಂದು ನೋಂದಣಿ ಪ್ರಕ್ರಿಯೆ ಪೂರ್ಣ
ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ, PUBG ಭಾರತೀಯ ಆವೃತ್ತಿಯನ್ನು ಪ್ರಾರಂಭಿಸಲು ಸ್ಥಳೀಯ ಮಟ್ಟದಲ್ಲಿ ಕಂಪನಿಯನ್ನು ತೆರೆಯಲು PUBG ನಿರ್ಧರಿಸಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈ ಕಂಪನಿಯ ನೋಂದಣಿಗೆ ನವೆಂಬರ್ 21 ರಂದು ಅನುಮೋದನೆ ನೀಡಿದೆ. ಈ ಕಂಪನಿಯನ್ನು ಬೆಂಗಳೂರಿನಲ್ಲಿ ನೋಂದಾಯಿಸಲಾಗಿದೆ.


ಹಳೆ IDಯಿಂದಲೇ ನಡೆಯಲಿದೆ ಭಾರತೀಯ ಆವೃತ್ತಿ
ಇನ್ಸೈಡರ್ ಸ್ಪೋರ್ಟ್ಸ್ ಪ್ರಕಾರ, PUBG ಮೊಬೈಲ್ ಇಂಡಿಯಾ ಬಳಕೆದಾರರ ಹಳೆ ID ಯಲ್ಲಿಯೇ ಕಾರ್ಯನಿರ್ವಹಿಸಲಿದೆ.  ಗೇಮ್ ಪ್ಲೇಯರ್‌ಗಳು ಪ್ರತ್ಯೇಕ ಐಡಿ ರಚಿಸುವ ಅಗತ್ಯವಿಲ್ಲ. ಇದುವರೆಗೆ PUBG ಗ್ಲೋಬಲ್‌ನಲ್ಲಿ ಬಳಸುತ್ತಿರುವ ಐಡಿಯೊಂದಿಗೆ ಭಾರತೀಯ ಆವೃತ್ತಿ ಬಳಸಬಹುದಾಗಿದೆ.


ಇದನ್ನು ಓದಿ- ಚೀನಾ ಮೂಲದ PUBG Gameಗೆ ಸೆಡ್ಡುಹೊಡೆಯಲು ಬಂತು Akshay Kumar ಅವರ FAU-G


ಗಾತ್ರದಲ್ಲಿ 1ಜಿಬಿಗಿಂತಲೂ ಕಡಿಮೆ ಇರಲಿದೆ ಹೊಸ ಆವೃತ್ತಿ
ಭಾರತದಲ್ಲಿ ಬಿಡುಗಡೆಯಾಗುತ್ತಿರುವ PUBG ಆವೃತ್ತಿ ವಿಭಿನ್ನವಾಗಿರಲಿದೆ ಮತ್ತು ಅದರಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಈ ಬಾರಿ PUBG ಗಾತ್ರ ಚಿಕ್ಕದಾಗಿರಲಿದೆ. ಕಡಿಮೆ ತೂಕದ ಸ್ಥಾಪನೆಯು ಕಂಪನಿಯ ಕೆಲವು ಬದಲಾವಣೆಗಳಲ್ಲಿ ಒಂದಾಗಿದೆ. ಈ ವೈಶಿಷ್ಟ್ಯದಿಂದಾಗಿ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಟದ ಡೌನ್‌ಲೋಡ್ ಗಾತ್ರವನ್ನು 610 ಎಂಬಿಗೆ ಇಳಿಸಲಾಗುತ್ತಿದೆ.