ನವದೆಹಲಿ: PUBG ಆಡುವವರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಪಬ್‌ಜಿ ಕಾರ್ಪೊರೇಷನ್ ತನ್ನ ಜನಪ್ರಿಯ ಆಟವನ್ನು ಭಾರತದಲ್ಲಿ ರಿಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಇದರ ಅಧಿಕೃತ ಪ್ರಕಟಣೆಯನ್ನು ಶೀಘ್ರದಲ್ಲೇ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ. ಭಾರತ-ಚೀನಾ ಗಡಿ ವಿವಾದದ ನಂತರ, PUBG ಸೇರಿದಂತೆ 224 ಅಪ್ಲಿಕೇಶನ್‌ಗಳನ್ನು ಇದುವರೆಗೆ ಭಾರತದಲ್ಲಿ ನಿಷೇಧಿಸಲಾಗಿದೆ. ಅಕ್ಟೋಬರ್ 30 ರಿಂದಲೆ ಭಾರತಕ್ಕೆ ಚಾಲನೆಯಲ್ಲಿರುವ ಸರ್ವರ್ ಅನ್ನು PUBG ನಿಲ್ಲಿಸಿದೆ.
ಇದನ್ನು ಓದಿ-ಪಬ್‌ಜಿ ಆಡಲು ಅವಕಾಶ ನೀಡದಿರುವುದಕ್ಕೆ ಅಣ್ಣನನ್ನೇ ಕೊಂದ 15 ರ ಬಾಲಕ
ಮುಂದಿನ ತಿಂಗಳು ರೀಲಾಂಚಿಂಗ್ ಘೋಷಣೆ ಸಾಧ್ಯತೆ
ಟೆಕ್ ವೆಬ್‌ಸೈಟ್ ಟೆಲಿಕಾಂಟಾಕ್ ಪ್ರಕಾರ, ಭಾರತದಲ್ಲಿ PUBGಯನ್ನು ಮರುಪ್ರಾರಂಭಿಸಲು ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಭಾರತದಲ್ಲಿ ಈ ಜನಪ್ರಿಯ ಆಟವನ್ನು ಮರುಪ್ರಾರಂಭಿಸಲು ಜಾಗತಿಕ ಕ್ಲೌಡ್ ಸೇವಾ ಪೂರೈಕೆದಾರರೊಂದಿಗೆ ಪಬ್‌ಜಿ ಕಾರ್ಪೊರೇಷನ್ ಮಾತುಕತೆ ನಡೆಸುತ್ತಿದ್ದು, ಇದರಿಂದಾಗಿ ಡೇಟಾ-ಸಂಬಂಧಿತ ವಿಷಯದ ಬಗ್ಗೆ ದೃಢವಾದ ವ್ಯವಸ್ಥೆಗಳನ್ನು ಮಾಡಲು ಕಂಪನಿ ಯೋಜಿಸಿದೆ.ಇದಲ್ಲದೆ, ಪಬ್‌ಜಿ ಕಾರ್ಪೊರೇಷನ್ ಸಹ ದೇಶದ ಕೆಲವು ಇಂಟರ್ನೆಟ್ ಸ್ಟ್ರೀಮರ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿಯಿದೆ. PUBG ಅನ್ನು ಡಿಸೆಂಬರ್ ವರೆಗೆ ಮರುಪ್ರಾರಂಭಿಸಬಹುದು.
ಇದನ್ನು ಓದಿ- ಭಾರತದಲ್ಲಿನ PUBG ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್..! ಇಂದಿನಿಂದಲೇ ಈ ನಿಯಮ ಜಾರಿ..!
PUBG ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳನ್ನು ನಿಷೇಧಿಸುವುದರ ಹಿಂದೆ ಬಳಕೆದಾರರ ಡೇಟಾ ಸಂರಕ್ಷಣೆ ಒಂದು ದೊಡ್ಡ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. PUBG ಈಗ ತನ್ನ ಡೇಟಾ ಸರ್ವರ್ ಅನ್ನು ಭಾರತದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಅಂದರೆ, ಈಗ ಯಾವುದೇ ಬಳಕೆದಾರರ ಡೇಟಾ ದೇಶದಿಂದ ಹೊರಗೆ ಹೋಗುವುದಿಲ್ಲ. ಮತ್ತು PUBG ಕಾರ್ಪೊರೇಷನ್ ಇದನ್ನು ಮಾಡಿದರೆ, ನಂತರ ಆಟದ ಮೇಲಿನ ನಿಷೇಧವನ್ನು ತೆರವುಗೊಳಿಸುವ ಸಾಧ್ಯತೆ ಇದೆ.
ಇದನ್ನು ಓದಿ- ಮಧ್ಯಪ್ರದೇಶ: ಮೊಬೈಲ್ ನಲ್ಲಿ ಆರು ಗಂಟೆ PUBG ಗೇಮ್ ಆಡಿ ಮೃತಪಟ್ಟ ಬಾಲಕ
ಭಾರತದಲ್ಲಿ ಪಿಯುಬಿಜಿ ಆಡುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತ-ಚೀನಾ ಗಡಿ ವಿವಾದದ ನಂತರ, ಸರ್ಕಾರವು ಪಿ.ಯು.ಬಿ.ಜಿ ಸೇರಿದಂತೆ ಸುಮಾರು 224 ಆ್ಯಪ್‌ಗಳನ್ನು ನಿಷೇಧ ವಿಧಿಸಿರುವುದು ಇಲ್ಲಿ ಗಮನಾರ್ಹ.