ಬೆಂಗಳೂರು:  ಇ-ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಮೇ 25 ರಿಂದ  ಮೇ 27 ರವರೆಗೆ  'ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್' (Amazon Smartphone Upgrade Days) ಸೆಲ್ ಅನ್ನು ಆಯೋಜಿಸಲಾಗಿದೆ. ಈ ಸೇಲ್ ಅಡಿಯಲ್ಲಿ, ಬಳಕೆದಾರರು ಅನೇಕ ಸ್ಮಾರ್ಟ್‌ಫೋನ್ ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.


COMMERCIAL BREAK
SCROLL TO CONTINUE READING

ಈ ಸೇಲ್ ಅಡಿಯಲ್ಲಿ ಉತ್ತಮ ವ್ಯವಹಾರದ ಬಗ್ಗೆ ಹೇಳುವುದಾದರೆ, 108 ಎಂಪಿ ಕ್ಯಾಮೆರಾ ಸ್ಮಾರ್ಟ್ಫೋನ್ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ (Redmi Note 10 Pro Max) ಅನ್ನು ಬಂಪರ್ ರಿಯಾಯಿತಿ ಮತ್ತು ಆಕರ್ಷಕ ಕೊಡುಗೆಗಳಲ್ಲಿ ಖರೀದಿಸಲು ನಿಮಗೆ ಅವಕಾಶ ಸಿಗುತ್ತಿದೆ. ಈ ಫೋನ್‌ನಲ್ಲಿ ಸಿಗುವ ಕೊಡುಗೆಗಳ ಬಗ್ಗೆ ವಿವರವಾಗಿ ತಿಳಿಯೋಣ…


ಇದನ್ನೂ ಓದಿ- Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ


ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್‌ನಲ್ಲಿ ಬಂಪರ್ ರಿಯಾಯಿತಿ (Bumper discount on Redmi Note 10 Pro Max) :
ಅಮೆಜಾನ್ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ ಅಡಿಯಲ್ಲಿ ನೀವು 66GB+64GB ಮಾದರಿಯನ್ನು 18,999 ರೂ.ಗಳಿಗೆ ಮತ್ತು 6 ಜಿಬಿ + 128 ಜಿಬಿ ಸ್ಟೋರೇಜ್ ಮಾದರಿಯನ್ನು 19,999 ರೂಗಳಿಗೆ ಖರೀದಿಸಬಹುದು. 8 ಜಿಬಿ + 128 ಜಿಬಿ ಶೇಖರಣಾ ಮಾದರಿ 21,999 ರೂ.ಗಳಿಗೆ ಲಭ್ಯವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ಬಜಾಜ್ ಫಿನ್‌ಸರ್ವ್ ಕಾರ್ಡ್ ಮೂಲಕ ಖರೀದಿಸುವ ಬಳಕೆದಾರರು 6 ತಿಂಗಳ ಕಾಲ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯುತ್ತಾರೆ. ಅದರ ನಂತರ 6 ಜಿಬಿ ಮಾದರಿಗೆ ತಿಂಗಳಿಗೆ 3,333 ರೂ.ಗಳ ಇಎಂಐ ಪಾವತಿಸಬೇಕಾಗುವುದು.


ಅದೇ ಸಮಯದಲ್ಲಿ, ಬಳಕೆದಾರರು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್‌ನಲ್ಲಿ ಶೇಕಡಾ 10 ರಷ್ಟು ಅಂದರೆ 1,000 ರೂ. ಇನ್ಸ್ಟಾಂಟ್ ಡಿಸ್ಕೌಂಟ್ ಪಡೆಯಬಹುದು. 


ಇದನ್ನೂ ಓದಿ- Post Office Savings Scheme: ಪೋಸ್ಟ್ ಆಫೀಸ್‌ನ ಅತ್ಯಂತ ಲಾಭದಾಯಕ ಯೋಜನೆ, ಕೇವಲ 5 ವರ್ಷ ಹೂಡಿಕೆ ಮಾಡಿ ಮೇಲೆ 14 ಲಕ್ಷ ರೂ. ಗಳಿಸಿ


ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್‌ನ ಉತ್ತಮ ವೈಶಿಷ್ಟ್ಯಗಳು:
ರೆಡ್‌ಮಿ ನೋಟ್ 10 ಪ್ರೊ ಮ್ಯಾಕ್ಸ್‌ನಲ್ಲಿ ವಿಶೇಷ ಲಕ್ಷಣವಾಗಿ, 108 ಎಂಪಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಬಳಕೆದಾರರಿಗೆ ಉತ್ತಮ ಛಾಯಾಗ್ರಹಣದ ಅನುಭವವನ್ನು ನೀಡುತ್ತದೆ. ಪವರ್ ಬ್ಯಾಕಪ್‌ಗಾಗಿ, ಇದು 5020mAh ನ ಬಲವಾದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಫೋನ್ 6.67 ಇಂಚಿನ ಪೂರ್ಣ ಎಚ್ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು 120 Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಪ್ರೀಮಿಯಂ ಲುಕ್ ಹೊಂದಿರುವ ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732 ಜಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸೆಲ್ಫಿಗಾಗಿ 16 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.