ನವದೆಹಲಿ : ದೇಶದ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಆಗಾಗ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ನೀಡುತ್ತದೆ. ಇಂದು ನಾವು ನಿಮಗಾಗಿ ಜಿಯೋದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಬಗ್ಗೆ ಮಾಹಿತ್ ತಂದಿದ್ದೇವೆ, ಇದರಲ್ಲಿ ಗ್ರಾಹಕರು ಕಡಿಮೆ ಹಣದಲ್ಲಿ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಿದೆ. ಜಿಯೋದ ಅಂತಹದ ಕೆಲವು ಪ್ರಮುಖ ರೀಚಾರ್ಜ್ ಯೋಜನೆಗಳು ಹೀಗಿವೆ...


COMMERCIAL BREAK
SCROLL TO CONTINUE READING

ಜಿಯೋ 149 ರೂ. ರಿಚಾರ್ಜ್ ಪ್ಲಾನ್


ಇದು ಜಿಯೋದ ಅತ್ಯುತ್ತಮ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್(Jio Prepaid Recharge) ಆಗಿದೆ. ಗ್ರಾಹಕರು ಕೇವಲ 149 ರೂ. ರಿಚಾರ್ಜ್ ಮಾಡಿ ಮತ್ತೆ ಪಡೆಯಿರಿ 1GB ಇಂಟರ್ನೆಟ್, ಅನಿಯಮಿತ ಧ್ವನಿ ಕರೆಗಳು ಮತ್ತು 100 SMS ಗಳನ್ನು 24 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ. ಇದರೊಂದಿಗೆ, ಜಿಯೋಟಿವಿ, ಜಿಯೋ ಸಿನಿಮಾ, ಜಿಯೋಕ್ಲೌಡ್ ಮುಂತಾದ ಎಲ್ಲಾ ಜಿಯೋ ಆಪ್‌ಗಳ ಉಚಿತ ಚಂದಾದಾರಿಕೆಯೂ ಈ ಯೋಜನೆಯಲ್ಲಿ ಲಭ್ಯವಿರುತ್ತದೆ. 24 ಜಿಬಿ ಇಂಟರ್ನೆಟ್‌ನೊಂದಿಗೆ ಈ 24 ದಿನದ ಪ್ಲಾನ್‌ನಲ್ಲಿ, ನೀವು ಒಂದು ದಿನಕ್ಕೆ 1 ಜಿಬಿ ಡೇಟಾ ಖಾಲಿಯಾದರೆ, ನಿಮ್ಮ ಡೇಟಾ ವೇಗವು 64 ಕೆಬಿಪಿಎಸ್‌ಗೆ ಕಡಿಮೆಯಾಗುತ್ತದೆ.


ಇದನ್ನೂ ಓದಿ : Oppo: ಶಕ್ತಿಯುತ ಬ್ಯಾಟರಿ, ಉತ್ತಮ ಕ್ಯಾಮೆರಾದೊಂದಿಗೆ ರಹಸ್ಯವಾಗಿ ಜಬರ್ದಸ್ತ್ Smartphone ಬಿಡುಗಡೆ ಮಾಡಿದ ಒಪ್ಪೋ


ಜಿಯೋ 129 ರೂ. ರಿಚಾರ್ಜ್ ಪ್ಲಾನ್


ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು. ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಒಟ್ಟು 2GB ಡೇಟಾ ಹಾಗೂ ಎಲ್ಲಾ ಜಿಯೋ ಆಪ್‌ಗಳಿಗೆ(Jio Apps) ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಅಲ್ಲದೆ, ಗ್ರಾಹಕರು ಒಟ್ಟು 300 SMS ಮತ್ತು ಅನಿಯಮಿತ ಧ್ವನಿ ಕರೆಗಳನ್ನು ಪಡೆಯುತ್ತಾರೆ.


ಜಿಯೋ 98 ರೂ. ರಿಚಾರ್ಜ್ ಪ್ಲಾನ್


ಇದು ರಿಲಯನ್ಸ್ ಜಿಯೋದ ಅಗ್ಗದ ರೀಚಾರ್ಜ್ ಪ್ಲಾನ್(Jio Recharge Plans) ಆಗಿದ್ದು ಇದು 14 ದಿನಗಳ ವ್ಯಾಲಿಡಿಟಿ ಹೊಂದಿದೆ. ಚಂದಾದಾರರು ಪ್ರತಿದಿನ 1.5GB ಇಂಟರ್ನೆಟ್ ಪಡೆಯುತ್ತಾರೆ ಅಂದರೆ ಪ್ರತಿಯೊಬ್ಬ ಗ್ರಾಹಕರು ಈ ಯೋಜನೆಯ ಮಾನ್ಯತೆಯ ಸಮಯದಲ್ಲಿ ಒಟ್ಟು 21GB ಡೇಟಾವನ್ನು ಪಡೆಯುತ್ತಾರೆ. ಒಂದು ದಿನದ ನಿಗದಿತ ಡೇಟಾ ಖಾಲಿಯಾದಾಗ, ಡೇಟಾ ವೇಗವು 64kbps ಗೆ ಕಡಿಮೆಯಾಗುತ್ತದೆ. ಈ ಯೋಜನೆಯಲ್ಲಿಯೂ, ಗ್ರಾಹಕರು ಅನಿಯಮಿತ ಧ್ವನಿ ಕರೆ ಮತ್ತು ಎಲ್ಲಾ ಜಿಯೋ ಆಪ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ.


ಇದನ್ನೂ ಓದಿ : ಸ್ಮಾರ್ಟ್ ಫೋನ್ ಡಿಸ್ಪ್ಲೇ ಹೋದರೆ ಉಚಿತವಾಗಿ ಬದಲಿಸಲಿದೆ ಕಂಪನಿ, ಜೊತೆಗೆ ಸಿಗಲಿದೆ 10 ಸಾವಿರ ರೂ.ಗಳ ಲಾಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.