ಈಗ ಇನ್ನೂ ಹೆಚ್ಚು ಜನ ವೀಕ್ಷಿಸಬಹುದು ನಿಮ್ಮ whatsaap ಸ್ಟೇಟಸ್, ಬಂದಿದೆ ಹೊಸ ಫೀಚರ್

WhatsApp ನ ಹೊಸ ಅಪ್ಡೇಟ್ WhatsAppನಲ್ಲಿ 24-ಗಂಟೆಗಳವರೆಗೆ ಹಾಕುವ ಸ್ಟೇಟಸ್ ಗೆ ಸಂಬಂಧಿಸಿದ್ದಾಗಿದೆ.  ಈ ಅಪ್‌ಡೇಟ್‌ನ ನಂತರ, ಬಳಕೆದಾರರು ತಾವು ಹಾಕಿರುವ ಸ್ಟೇಟಸ್ ಅನ್ನು ಎಡಿಟ್ ಮಾಡುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Aug 13, 2021, 05:15 PM IST
  • ಹೊಸ ಅಪ್‌ಡೇಟ್‌ನೊಂದಿಗೆ ಬರುತ್ತಿದೆ ವಾಟ್ಸಾಪ್
  • ಈ ಅಪ್‌ಡೇಟ್ ಬಳಕೆದಾರರು ಹಾಕಿದ ಸ್ಟೇಟಸ್ ಮತ್ತು ಸ್ಟಿಕ್ಕರ್‌ಗಳಿಗೆ ಸಂಬಂಧಿಸಿದ್ದಾಗಿದೆ
  • ಈ ಅಪ್‌ಡೇಟ್ Instagram ನಂತೆ ಕಾಣಿಸುತ್ತದೆ.
ಈಗ ಇನ್ನೂ ಹೆಚ್ಚು ಜನ ವೀಕ್ಷಿಸಬಹುದು ನಿಮ್ಮ whatsaap ಸ್ಟೇಟಸ್, ಬಂದಿದೆ ಹೊಸ ಫೀಚರ್   title=
ಹೊಸ ಅಪ್‌ಡೇಟ್‌ನೊಂದಿಗೆ ಬರುತ್ತಿದೆ ವಾಟ್ಸಾಪ್ (file photo)

ನವದೆಹಲಿ : ಇಂದಿನ ಯುಗದಲ್ಲಿ, ಪ್ರತಿಯೊಬ್ಬರೂ ತಮ್ಮ ಮೊಬೈಲ್ ಫೋನ್‌ನಲ್ಲಿ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು (Social media app) ಅಳವಡಿಸಿಕೊಂಡಿರುತ್ತಾರೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಟ್ವಿಟರ್ ಹೀಗೆ ಈ ಎಲ್ಲಾ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ತಮ್ಮ ಮೊಬೈಲ್ ನಲ್ಲಿಯೇ ಡೌನ್ ಲೋಡ್ ಮಾಡಿಟ್ಟುಕೊಂಡಿರುತ್ತಾರೆ.  ಈ ಆಪ್‌ಗಳನ್ನು ನಿರಂತರವಾಗಿ ಅಪ್‌ಡೇಟ್‌ ಮಾಡಲಾಗುತ್ತಿರುತ್ತದೆ. ಮೂಲಗಳ ಪ್ರಕಾರ, ವಾಟ್ಸಾಪ್ ನಲ್ಲಿ ಹೊಸ ಅಪ್ಡೇಟ್ (Whatsapp update) ಅನ್ನು ತರಲಾಗಿದೆ.  

ವಾಟ್ಸಾಪ್ ಇನ್‌ಸ್ಟಾಗ್ರಾಮ್ ಆಗುತ್ತದೆ :
WhatsApp ನ ಹೊಸ ಅಪ್ಡೇಟ್ WhatsAppನಲ್ಲಿ 24-ಗಂಟೆಗಳವರೆಗೆ ಹಾಕುವ ಸ್ಟೇಟಸ್ ಗೆ ಸಂಬಂಧಿಸಿದ್ದಾಗಿದೆ.  ಈ ಅಪ್‌ಡೇಟ್‌ನ ನಂತರ, ಬಳಕೆದಾರರು ತಾವು ಹಾಕಿರುವ ಸ್ಟೇಟಸ್ ಅನ್ನು ಎಡಿಟ್ ಮಾಡುವುದು ಸಾಧ್ಯವಾಗುತ್ತದೆ. ಆಗುವ ಪ್ರಮುಖ ಬದಲಾವಣೆಯೆಂದರೆ, ಬಳಕೆದಾರರು ಸ್ಟೇಟಸ್ ಅನ್ನು ಹಾಕಿದ ನಂತರ ಪ್ರೊಫೈಲ್ ಫೋಟೊದ (Profile photo) ಸುತ್ತ ಹಸಿರು ಗುರುತು ಕಾಣಿಸಿಕೊಳ್ಳುತ್ತದೆ. ಇದು ಬಳಕೆದಾರರು ಸ್ಟೇಟಸ್ (Whatsapp status) ಅನ್ನು ಹಾಕಿದ್ದಾರೆ ಎನುವುದನ್ನು ಸೂಚಿಸುತ್ತದೆ.

ಇದನ್ನೂ  ಓದಿ : Xiaomi: ನೀವೂ ಈ MI ಫೋನ್ ಖರೀದಿಸಿದ್ದರೆ, ನಿಮ್ಮ ಫುಲ್ ಹಣ ವಾಪಸ್

 ಹಸಿರು ಗುರುತಿನ ಮೇಲೆ ಕ್ಲಿಕ್ ಮಾಡುವ ಮೂಲಕ, ಆ ಬಳಕೆದಾರನ ಸ್ಟೇಟಸ್ ನೋಡಲು ಸಾಧ್ಯವಾಗುತ್ತದೆ. ಪ್ರೊಫೈಲ್ ಫೋಟೋಡ ಸುತ್ತ  ಕಾಣಿಸುವ ಈ ಗುರುತು, Instagram ವೈಶಿಷ್ಟ್ಯವನ್ನು ನೆನಪಿಸುತ್ತದೆ. ಆದರೆ WhatsApp ನಲ್ಲಿ ಪೋಸ್ಟ್ ಮಾಡಿದ ಸ್ಟೇಟಸ್ 24 ಗಂಟೆಗಳ ನಂತರ ಕಾಣಿಸುವುದಿಲ್ಲ. 

ವಾಟ್ಸಾಪ್‌ಗಾಗಿ ಸ್ಟಿಕ್ಕರ್‌ಗಳು :
ಸ್ಟೇಟಸ್‌ಗೆ ಸಂಬಂಧಿಸಿದ ಬದಲಾವಣೆಗಳ ಜೊತೆಗೆ, WhatsApp ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಅನ್ನು ತರಲು ಸಿದ್ಧತೆ ನಡೆಸುತ್ತಿದೆ. ಇದನ್ನು ಸ್ಟಿಕರ್ ಸಜೆಶನ್ ಎಂದು ಹೆಸರಿಸಲಾಗಿದೆ. ಬಳಕೆದಾರರು ಟೈಪ್ ಮಾಡುವಾಗಲೆಲ್ಲಾ, ಈ ವೈಶಿಷ್ಟ್ಯವು ಅವರ ಪದಗಳಿಗೆ ಅನುಗುಣವಾಗಿ ಸ್ಟಿಕ್ಕರ್‌ಗಳನ್ನು ಸೂಚಿಸುತ್ತಲೇ ಇರುತ್ತದೆ. ಪ್ರಸ್ತುತ ಈ ವೈಶಿಷ್ಟ್ಯದ ಟೆಸ್ಟಿಂಗ್ ನಡೆಯುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ (IOS) ಬಳಕೆದಾರರಿಗಾಗಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇದನ್ನೂ  ಓದಿ : ನಿಮ್ಮ ಫೋನಿನಿಂದ ಈ 5 ಆ್ಯಪ್‌ಗಳನ್ನ ಈಗಲೇ ಡಿಲೀಟ್ ಮಾಡಿ, ಇಲ್ಲದಿದ್ದರೆ Hack ಆಗುತ್ತೆ Facebook ಅಕೌಂಟ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

 

Trending News