ನವದೆಹಲಿ : ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿವೆ. ಈ ಪ್ರಯೋಜನಗಳಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ. ಪ್ರಿಪೇಯ್ಡ್ ಬಳಕೆದಾರರು ಕೆಲವು ಯೋಜನೆಗಳ ಜೊತೆ ಡಿಸ್ನಿ+ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

JioPostPaid Plus ಯೋಜನೆಗಳು :


ಟೆಲ್ಕೊ ನೀಡುವ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್(JioPostPaid Plus) ಯೋಜನೆಗಳು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಕೆಲವು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ನೀಡುತ್ತವೆ. ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿವೆ. ಜಿಯೋ ತನ್ನದೇ ಆದ ಜಿಯೋ ಟಿವಿ ಮತ್ತು ಜಿಯೋ ಸಿನೆಮಾಗೆ ಚಂದಾದಾರಿಕೆ  ಒದಗಿಸುತ್ತದೆ.


ಇದನ್ನೂ ಓದಿ : NOKIA ಲಾಂಚ್ ಮಾಡಿದೆ ಅದ್ಬುತ ಸ್ಮಾರ್ಟ್ ಫೋನ್, ಮೂರು ದಿನಗಳವರೆಗೆ ನಿಲ್ಲಲ್ಲಿದೆ ಬ್ಯಾಟರಿ ಚಾರ್ಜ್


Netflix, Amazon Prime, Disney+ Hotstar ಈ 3 ಸ್ಟ್ರೀಮಿಂಗ್ ಆಪ್ಲಿಕೇಶನ್ ಗಳಿಗೆ ಚಂದಾದಾರಿಕೆ ನೀಡುವ ಜಿಯೋಪೋಸ್ಟ್‌ಪೇಯ್ಡ್ ಯೋಜನೆಗಳು ಇಲ್ಲಿವೆ:


399 ರೂ. ಯೋಜನೆ: ಗ್ರಾಹಕರಿಗೆ ಲಭ್ಯವಿರುವ ಅಗ್ಗದ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ ಎಲ್ಲಾ ಮೂರು ಸ್ಟ್ರೀಮಿಂಗ್ ಆಪ್ಲಿಕೇಶನ್ ಗಳಿಗೆ ಚಂದಾದಾರಿಕೆ(Subscription)ಯನ್ನು ಒದಗಿಸುತ್ತದೆ. ಈ ಯೋಜನೆಯು 75 ಜಿಬಿ ಡೇಟಾವನ್ನು ಗರಿಷ್ಠ 200 ಜಿಬಿ ಡೇಟಾ ರೋಲ್‌ಓವರ್‌ನೊಂದಿಗೆ ನೀಡುತ್ತದೆ. 75 ಜಿಬಿ ಡೇಟಾದ ಮಿತಿಯ ನಂತರ, ಬಳಕೆದಾರರು ಪ್ರತಿ ಜಿಬಿಗೆ ₹ 10 ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ (ಎಲ್ಲಾ ಯೋಜನೆಗಳಿಗೆ ಒಂದೇ ಬೆಲೆ). ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ 1 ವರ್ಷ ವ್ಯಾಲಿಡಿಟಿ ನೀಡುತ್ತಿದೆ.


599 ರೂ. ಯೋಜನೆ: ಈ ಪ್ಲಾನ್ ನಲ್ಲಿ ಗ್ರಾಹಕರು 100 ಜಿಬಿ ಡೇಟಾ(Data) ಹಾಗೂ 200 ಜಿಬಿಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. ನಿರ್ದಿಷ್ಟ ಮಿತಿ ಮುಗಿದ ನಂತರ ಬಳಕೆದಾರರಿಗೆ ಪ್ರತಿ ಜಿಬಿಗೆ ₹ 10 ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, ಯೋಜನೆಯನ್ನು ಜಿಯೋ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಬಳಸಿಕೊಂಡು ಹೆಚ್ಚುವರಿ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.


799 ರೂ. ಯೋಜನೆ: ಈ ಯೋಜನೆಯ ಮೂಲಕ 150 ಜಿಬಿ ಡೇಟಾ ಒದಗಿಸುತ್ತದೆ ಮತ್ತು 200 ಜಿಬಿ ಡೇಟಾ ರೋಲ್‌ಓವರ್ ಅನ್ನು ಸಹ ಒದಗಿಸುತ್ತದೆ. ಈ ಯೋಜನೆ(Plans)ಯ ಪ್ರಯೋಜನಗಳನ್ನು ಕುಟುಂಬ ಯೋಜನೆಯಡಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು.


ಇದನ್ನೂ ಓದಿ : ಏರ್ಟೆಲ್ ಬಳಕೆದಾರರಿಗೆ ಆಘಾತ : ದುಬಾರಿಯಾಯಿತು ಏರ್ ಟೇಲ್ ಪ್ರಿಪೇಯ್ಡ್ ಪ್ಲಾನ್ , ನಾಳೆಯಿಂದಲೇ ಹೊಸ ದರ ಜಾರಿ


999 ರೂ. ಯೋಜನೆ: ಯೋಜನೆಯಲ್ಲಿ 200 ಜಿಬಿ ಇಂಟೆರ್ ನೆಟ್(Internet) ಮತ್ತು ಕುಟುಂಬ ಯೋಜನೆಯಡಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500 ಜಿಬಿ ಡೇಟಾ ಸಿಗಲಿದೆ.


1,499 ರೂ. ಯೋಜನೆ: ಪಟ್ಟಿಯಲ್ಲಿನ ಅತ್ಯಂತ ದುಬಾರಿ ಯೋಜನೆ ಇದಾಗಿದೆ. 300 ಜಿಬಿ ಡೇಟಾವನ್ನು ಒದಗಿಸುತ್ತದೆ ಮತ್ತು ಬಳಕೆದಾರರು ಗರಿಷ್ಠ 500 ಜಿಬಿ(GB)ಯನ್ನು ಮುಂದಿನ ದಿನ ಸಿಗಲಿದೆ. ಈ ಯೋಜನೆಯು ಕುಟುಂಬ ಯೋಜನೆಯಡಿ ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುವುದಿಲ್ಲ.


ಪ್ರಿಪೇಯ್ಡ್ ಬಳಕೆದಾರರಿಗೆ Disney+ Hotstar ಚಂದಾದಾರಿಕೆಯ ಕೆಲವು ಯೋಜನೆಗಳು:


599 ರೂ. ಯೋಜನೆ
598 ರೂ. ಯೋಜನೆ
777 ರೂ. ಯೋಜನೆ
1401 ರೂ.ಯೋಜನೆ


ಇದನ್ನೂ ಓದಿ : WhatAppನಲ್ಲಿ ಬಂತು ಹೊಸ ವೈಶಿಷ್ಟ್ಯ, ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿಯೋಣ ಬನ್ನಿ


Disney+ Hotstar ಎಲ್ಲಾ ಬಳಕೆದಾರರಿಗಾಗಿ ತಮ್ಮ ಯೋಜನೆಗಳು ಮತ್ತು ಬೆಲೆ ವಿಧಾನವನ್ನು ಪರಿಷ್ಕರಿಸಿದೆ. ಬದಲಾವಣೆಗಳು ರಿಲಯನ್ಸ್ ಜಿಯೋ ನೀಡುವ ಉಚಿತ ಚಂದಾದಾರಿಕೆಯ ಮೇಲೆ ಪರಿಣಾಮ ಬೀರಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.