ನವದೆಹಲಿ : ಈಗ ಎಲ್ಲವೂ ಡಿಜಿಟಲ್ . ಡಿಜಿಟಲ್ ಮಾಧ್ಯಮಗಳು ಎಷ್ಟು ಹೆಚ್ಚುತ್ತಿದೆಯೋ, ಆನ್‌ಲೈನ್ ವಂಚನೆಯ (Online fraud) ಪ್ರಕರಣಗಳು ಕೂಡಾ ಅಷ್ಟೇ ಹೆಚ್ಚುತ್ತಿದೆ. ಇದು ಬಳಕೆದಾರರ ಚಿಂತೆಗೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ನಿಮ್ಮ ಫೋನಿನಿಂದ ಈ ಆಪ್ ಅನ್ನು ತಕ್ಷಣವೇ ತೆಗೆದುಹಾಕಿ :
ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google play store) ಅನೇಕ ಆ್ಯಪ್ ಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಈ ಪೈಕಿ ಕೆಲವೊಂದು  ಆ್ಯಪ್ ಗಳು, ಬಳಕೆದಾರರ ಡೇಟಾ ಮತ್ತು ಹಣ ಎರಡನ್ನೂ ಕದಿಯುವ ಕೆಲಸ ಮಾಡುತ್ತಿದೆ. ಬಳಕೆದಾರರಿಂದ ನಿರಂತರ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ,  ಗೂಗಲ್ 8 ಮೊಬೈಲ್ ಅಪ್ಲಿಕೇಶನ್‌ಗಳ (Mobile app) ವಿರುದ್ಧ ಕ್ರಮ ಕೈಗೊಂಡಿತ್ತು, ಆ  ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು. ಈಗ ಮತ್ತೊಂದು  ಆ್ಯಪ್  ವಿರುದ್ದ ಗೂಗಲ್ ಈ ಕ್ರಮ ಕೈಗೊಂಡಿದ್ದು, ಗೂಗಲ್ ಪ್ಲೇ ಸ್ಟೋರ್ ನಿಂದ ಈ ಅಪಾಯಕಾರಿ ಆ್ಯಪ್ ಅನ್ನು ತೆಗೆದುಹಾಕಿದೆ. ಇದರೊಂದಿಗೆ, ಬಳಕೆದಾರರು ಕೂಡಾ ತಮ್ಮ ಫೋನ್‌ಗಳಿಂದ ಇ  ಆ್ಯಪ್  ಅನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿದೆ. 


ಇದನ್ನೂ ಓದಿ : ಎರಡು ಅಗ್ಗದ Planಗಳನ್ನು ಕೈ ಬಿಟ್ಟ Jio,ಜೊತೆಗೆ ಈ ಆಫರ್ ಕೂಡಾ ಸ್ಥಗಿತ


ಗೂಗಲ್ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ :
ಭದ್ರತಾ ಸಂಸ್ಥೆ ಟ್ರೆಂಡ್ ಮೈಕ್ರೋ (Trend Micro),  ಕ್ರಿಪ್ಟೋ ಕರೆನ್ಸಿ ಮೈನಿಂಗ್ ಮಾಡುವ ಆ್ಯಪ್‌ಗಳ ಬಗ್ಗೆ ಅಧ್ಯಯನ ಮಾಡಿದೆ.  ಕ್ರಿಪ್ಟೋ ಕರೆನ್ಸಿ ಮೈನಿಂಗ್ ಹೆಸರಿನಲ್ಲಿ ಹಲವು  ಆ್ಯಪ್‌ಗಳು, ಬಳಕೆದಾರರನ್ನು ವಂಚಿಸುತ್ತಿವೆ ಎನ್ನುವುದು ಈ ಅಧ್ಯಯನದಲ್ಲಿ ಬಹಿರಂಗವಾಗಿದೆ.  ಈ ಅಧ್ಯಯನ ವರದಿಯ ಆಧಾರದಲ್ಲಿ ಇದೀಗ, ಗೂಗಲ್ ತನ್ನ ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಅನೇಕ ಆ್ಯಪ್‌ಗಳನ್ನು ತೆಗೆದುಹಾಕಿತು.


ಈ ರೀತಿ ಮೋಸದ ಬಲೆ ಬೀಸುತ್ತಿತ್ತು : 
ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾದ ಅಪ್ಲಿಕೇಶನ್‌ಗಳಲ್ಲಿ  Ethereum (ETH)-  Pool Mining Cloud ಆಪ್  ಕೂಡ ಸೇರಿದೆ. ಈ ಆ್ಯಪ್‌ ಬಳಕೆದಾರರಿಗೆ ಆದಾಯವನ್ನು ನೀಡುವ ಹೆಸರಿನಲ್ಲಿ ಜಾಹೀರಾತುಗಳನ್ನು ತೋರಿಸಲು ಬಳಸಲಾಗುತ್ತದೆ. ಇದರಲ್ಲಿ, ಬಳಕೆದಾರರು ಮೈನಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಆ್ಯಪ್‌ ಖರೀದಿ ಮಾಡುವಂತೆಯೂ ಹೇಳಲಾಗುತ್ತಿತ್ತು. 


ಇದನ್ನೂ ಓದಿ :  Shocking News! Facebook ನಿಮ್ಮ ಖಾಸಗಿ WhatsApp ಸಂದೇಶಗಳನ್ನು ಓದುತ್ತಂತೆ! ಹೊಸ ವರದಿಯಲ್ಲಿ ಅಂಶ ಬಹಿರಂಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.