ಇನ್ನು ರೇಷನ್ ಗಾಗಿ ಅಂಗಡಿ ಮುಂದೆ ಕಾಯುವ ಅಗತ್ಯವಿಲ್ಲ ; ಈ ಆಪ್ ಇದ್ದರೆ ಮನೆ ಬಾಗಿಲಿಗೇ ಬರಲಿದೆ ಪಡಿತರ

ಕರೋನಾ  ಕಾಲದಲ್ಲಿ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಅನೇಕ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಪಡಿತರವನ್ನು ಕೂಡಾ ಹೋಂ ಡೆಲಿವೆರಿ ಪಡೆದುಕೊಳ್ಳಬಹುದು.  

Written by - Ranjitha R K | Last Updated : Apr 16, 2021, 03:48 PM IST
  • ರೇಶನ್ ಗಾಗಿ ಜನ ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ ಕಾಯಬೇಕಿಲ್ಲ
  • ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಿ
  • ಮನೆ ಬಾಗಿಲಿಗೇ ಪೂರೈಕೆಯಾಗುತ್ತದೆ ಪಡಿತರ
ಇನ್ನು ರೇಷನ್ ಗಾಗಿ ಅಂಗಡಿ ಮುಂದೆ ಕಾಯುವ ಅಗತ್ಯವಿಲ್ಲ ;  ಈ ಆಪ್ ಇದ್ದರೆ ಮನೆ ಬಾಗಿಲಿಗೇ ಬರಲಿದೆ ಪಡಿತರ  title=
ರೇಶನ್ ಗಾಗಿ ಜನ ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ ಕಾಯಬೇಕಿಲ್ಲ (file photo)

ನವದೆಹಲಿ: Ration Card App:  ದೇಶದಲ್ಲಿ ಕರೋನಾ ಮಹಾ ಮಾರಿಯ (Coronavirus) ಕರಾಳ ಚಾಯೆ ಆವರಿಸಿದೆ. ಈ ಹೊತ್ತಿನಲ್ಲಿ ಜನ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಹೆದರುವಂತಾಗಿದೆ. ಆದರೆ ಅಗತ್ಯ ವಸ್ತುಗಳಿಗಾದರೂ ಜನ ಹೊರ ಬರಲೇ ಬೇಕು. ಇನ್ನು ರೇಶನ್ ಗಾಗಿ ಜನ ಸರತಿಯ ಸಾಲಿನಲ್ಲಿ ಗಂಟೆ ಗಟ್ಟಲೆ ನಿಲ್ಲಬೇಕಾಗುತ್ತದೆ. ಇದು ಕೂಡಾ ಈ ದಿನಗಳಲ್ಲಿ ಅಪಾಯ ತಂದೊಡ್ಡುವ ಎಲ್ಲಾ ಸಾಧ್ಯತೆಗಳಿವೆ. 

App ಮೂಲಕ ಬುಕ್ ಮಾಡಿದರೆ ಮನೆ ಬಾಗಿಲಿಗೇ ಬರಲಿದೆ ಪಡಿತರ : 
ಕರೋನಾ (Coronavirus) ಕಾಲದಲ್ಲಿ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಅನೇಕ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಪಡಿತರವನ್ನು ಕೂಡಾ ಹೋಂ ಡೆಲಿವೆರಿ (Home delivery) ಪಡೆದುಕೊಳ್ಳಬಹುದು. ಮೊಬೈಲ್ ಆಪ್ (Mobile App) ಮೂಲಕ ಪಡಿತರವನ್ನು ಆರ್ಡರ್ ಮಾಡಿದರೆ ನಿರ್ದಿಷ್ಟ ಸಮಯಕ್ಕೆ ನಿಮ್ಮ ಮನೆ ಬಾಗಿಲಿಗೆ ಪಡಿತರವನ್ನು ಪೂರೈಸಲಾಗುತ್ತದೆ. Mera Ration app ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಅಂಗವಾಗಿ ಈ ಆಪ್ ಅನ್ನು ಆರಂಭಿಸಲಾಗಿದೆ. ಈ ಆಪ್ ಅನ್ನು ಡೌನ್‌ಲೋಡ್‌ ಮಾಡುವುದರಿಂದ ಹಿಡಿದು ಪಡಿತರ ಆರ್ಡರ್ ಮಾಡುವವರೆಗಿನ ಸಂಪೂರ್ಣ ಪ್ರಕ್ರಿಯೆ ಹೇಗೆ ನೊಡೋಣ .. 

ಇದನ್ನೂ ಓದಿ :  Post Office ಖಾತೆದಾರರಿಗೆ ಬಿಗ್ ರಿಲೀಫ್! ಮಿನಿಮಂ ಬ್ಯಾಲೆನ್ಸ್ ಬಗ್ಗೆ ಮಹತ್ವದ ನಿರ್ಧಾರ

Mera Ration app ಡೌನ್‌ಲೋಡ್ ಮಾಡುವುದು ಹೇಗೆ ? : ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ Google Play Store ಗೆ ಹೋಗಿ. Mera Ration app  ಅನ್ನು ಸರ್ಚ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. 

Mera Ration app  ರಿಜಿಸ್ಟ್ರೇಷನ್ :  ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನಿಮ್ಮ ಪಡಿತರ ಚೀಟಿಯನ್ನು ಅದರಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ, ಮೊದಲು ಅಪ್ಲಿಕೇಶನ್ ತೆರೆಯಿರಿ. ಅಲ್ಲಿ Registration  ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಹಾಕಿ ಸಬ್ಮಿಟ್ ಬಟನ್ ಒತ್ತಿ.

ಇದನ್ನೂ ಓದಿ :  Free LPG Cylinder: ಯಾವುದೇ ಪುರಾವೆಯಿಲ್ಲದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಫ್ರೀ ಆಗಿ ಪಡೆಯಲು ಇದು ಸುಲಭ ಮಾರ್ಗ

Mera Ration ಅಪ್ಲಿಕೇಶನ್‌ನ ಪ್ರಯೋಜನಗಳು:
ಈ ಮೊಬೈಲ್ ಅಪ್ಲಿಕೇಶನ್ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಅಲೆಯುತ್ತಿರುವ ಕಾರ್ಮಿಕರಿಗೆ ಆಯಾ ನಗರದಲ್ಲಿ ಪಡಿತರ ಅಂಗಡಿ (Ration Store) ಎಲ್ಲಿರುತ್ತದೆ ಎಂಬ ಮಾಹಿತಿ ಇರುವುದಿಲ್ಲ.  ಈ ಆಪ್ ನಲ್ಲಿ ಪಡಿತರ  ಅಂಗಡಿಯ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಅಲ್ಲದೆ ನಿಮ್ಮ ಕುಟುಂಬಕ್ಕೆ ಎಷ್ಟು ಪಡಿತರ ಸಿಗಲಿದೆ ಎಂಬ ಮಾಹಿತಿಯೂ ಇದರಲ್ಲಿ ತಿಳಿಯುತ್ತದೆ. ಈ ಅಪ್ಲಿಕೇಶನ್‌ ಮೂಲಕ ನಿಮ್ಮ ಹಿಂದಿನ ವಹಿವಾಟಿನ ವಿವರಗಳನ್ನು ಸಹ ನೀವು ತಿಳಿದುಕೊಳ್ಳಬಹುದು. ಈ ಅಪ್ಲಿಕೇಶನ್ ಸದ್ಯಕ್ಕೆ ಹಿಂದಿ (Hindi)ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ  ಇದು ಇತರ 14 ಭಾಷೆಗಳಲ್ಲಿಯೂ ಈ ಆಪ್ ನಲ್ಲಿ ಮಾಹಿತಿ ಲಭ್ಯವಾಗಲಿದೆ. ಮತ್ತೊಂದು ಮುಖ್ಯ ವಿಚಾರವೆಂದರೆ, ಈ ಅಪ್ಲಿಕೇಶನ್‌ ನಲ್ಲಿ ಯಾವಾಗ ಮತ್ತು ಯಾವ ಅಂಗಡಿಯಿಂದ ಪಡಿತರವನ್ನು ತರಲಾಗಿದೆ ಎಂಬ ಮಾಹಿತಿ ಕೂಡಾ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News