ನವದೆಹಲಿ : Republic Day Sale 2022 : ಗಣರಾಜ್ಯೋತ್ಸವದಂದು, ಅನೇಕ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಸೇಲ್ ನಡೆಯುತ್ತಿದೆ. ಇಂದು ಫ್ಲಿಪ್‌ಕಾರ್ಟ್ (Flipkart sale) ತಿಂಗಳಾಂತ್ಯದ ಮೊಬೈಲ್ ಫೆಸ್ಟ್ ಸೇಲ್  ನಡೆಯುತ್ತಿದೆ. ಇಂದು ಮಾತ್ರ ಈ ಸೇಲ್ ನಲ್ಲಿ ಖರೀದಿಸುವ ಅವಕಾಶ ಸಿಗಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ.  5G ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಅದ್ಬುತ ಡಿಸ್ಕೌಂಟ್ (discount on flipkart) ಇರಲಿದೆ.   24 ಸಾವಿರ ಬೆಲೆಯ SAMSUNG Galaxy F42 5Gಯನ್ನು ಕೇವಲ  549 ರೂ.ಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

Samsung Galaxy F42 5G Offers ಮತ್ತು  Discounts :
SAMSUNG Galaxy F42 5G 6GB RAM + 128GB ಸ್ಟೋರೇಜ್ ರೂಪಾಂತರದ ಲಾಂಚಿಂಗ್  ಬೆಲೆ 23,999 ರೂಪಾಯಿಗಳು. ಆದರೆ ಈ ಸೇಲ್ ನಲ್ಲಿ (flipkart sale) ಈ ಫೋನ್ ಮೇಲೆ  8,000 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಅಂದರೆ, 24 ಸಾವಿರದ ಫೋನ್ 15,999 ರೂ.ಗೆ ಇಳಿಯುತ್ತದೆ.  ಇದಾದ ನಂತರ ಬ್ಯಾಂಕ್ ಆಫರ್ (Bank offer) ಎಕ್ಸ್ಚೇಂಜ್ ಆಫರ್ ಗಳು ಕೂಡಾ ಇದಕ್ಕೆ ಅನ್ವಯವಾಗಲಿದೆ. 


ಇದನ್ನೂ ಓದಿ : Reliance Jio: ಕೈಗೆಟುಕುವ ದರದಲ್ಲಿ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ 5G JioPhone


SAMSUNG Galaxy F42 5G ಎಕ್ಸ್ಚೇಂಜ್ ಆಫರ್ :
SAMSUNG Galaxy F42 5G ಮೇಲೆ  8,000  ರೂಪಾಯಿಗಳ ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ. ಇನ್ನು,  ಹಳೆಯ ಸ್ಮಾರ್ಟ್‌ಫೋನ್ (smartphone) ಅನ್ನು ವಿನಿಮಯ  (exchange) ಮಾಡಿಕೊಂಡರೆ, ಮತ್ತೆ 15,450 ರೂ. ಗಳ ಡಿಸ್ಕೌಂಟ್ (discount on smartphone) ಸಿಗಲಿದೆ. ಆದರೆ ನೆನಪಿರಲಿ ಎಕ್ಸ್ಚೇಂಜ್ ಮಾಡಲಿರುವ ಫೋನ್ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ  15,450 ರೂ. ಗಳ ರಿಯಾಯಿತಿ ಸಿಗುತ್ತದೆ. ಹೀಗೆ ಎಲ್ಲಾ ರಿಯಾಯಿತಿಗಳನ್ನು ಪಡೆಯುವುದು ಸಾಧ್ಯವಾದರೆ, SAMSUNG Galaxy F42 5G ಫೋನ್‌ ಅನ್ನು  549 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.  


SAMSUNG Galaxy F42 5G ಬ್ಯಾಂಕ್ ಆಫರ್ :
ಒಂದು ವೇಳೆ ಹಳೆಯ ಸ್ಮಾರ್ಟ್‌ಫೋನ್ ಅನ್ನು  ಎಕ್ಸ್ಚೇಂಜ್ ಮಾಡಿಕೊಳ್ಳಲು ಇಷ್ಟವಿಲ್ಲದಿದ್ದರೆ,  ಈ ಫೋನ್‌ ಖರೀದಿ ಮೇಲೆ ಬ್ಯಾಂಕ್ ಆಫರ್ ಕೂಡ ಇದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (credit card) ಅನ್ನು ಬಳಸಿ ಈ ಫೋನ್ ಖರೀದಿಸಿದರೆ, ಫೋನ್ ಮೇಲೆ 800 ರೂ .ಗಳ ತ್ವರಿತ ರಿಯಾಯಿತಿ ಸಿಗಲಿದೆ. 


ಇದನ್ನೂ ಓದಿ : Googleನಲ್ಲಿ ಕೆಲಸ ಪಡೆಯಲು ಸುವರ್ಣಾವಕಾಶ: ಈ ಸರಳ ಕೆಲಸ ಮಾಡಿದ್ರೆ ಜಾಬ್ ಸಿಗುತ್ತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.