ನವದೆಹಲಿ: ಗೂಗಲ್ನಲ್ಲಿ ಕೆಲಸ(Google Jobs) ಮಾಡಲು ಬಯಸುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲೂ ಕಚೇರಿ ಜಾಗಕ್ಕಾಗಿ ಸ್ಥಳ ಹುಡುಕಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ ಗೂಗಲ್ ತನ್ನ ಹೊಸ ಕಚೇರಿಯನ್ನು ತೆರೆಯುವ ನಿರೀಕ್ಷೆಯಿದೆ.
ಇಲ್ಲಿ ಗೂಗಲ್ನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ
ಗೂಗಲ್ ಭಾರತದಲ್ಲಿ ತನ್ನ ಹೊಸ ಕಚೇರಿಗೆ ನೇಮಕಾತಿ(Google Recruitment)ಯನ್ನು ಪ್ರಾರಂಭಿಸಿದೆ. ಈ ಹೊಸ ನೇಮಕಾತಿಗಳ ಪ್ರಕ್ರಿಯೆಯು ಗೂಗಲ್ನ ಗುರುಗ್ರಾಮ್, ಹೈದರಾಬಾದ್ ಮತ್ತು ಬೆಂಗಳೂರು ಕಚೇರಿಗಳಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ABS System: ಅಪಘಾತ ಸಂಭವಿಸಿದಾಗ ಪ್ರಾಣ ಉಳಿಸುತ್ತೆ ABS, ಏನಿದು ABS?
ಸುಧಾರಿತ ಕ್ಲೌಡ್ ತಂತ್ರಜ್ಞಾನಕ್ಕಾಗಿ ನೇಮಕಾತಿ
ಸುಧಾರಿತ ಕ್ಲೌಡ್ ತಂತ್ರಜ್ಞಾನಕ್ಕಾಗಿ(Advanced Cloud Technology) ಗೂಗಲ್ ಈ ಹೊಸ ನೇಮಕಾತಿಗಳನ್ನು ಮಾಡುತ್ತಿದೆ. ಭಾರತದ ಗೂಗಲ್ ಕ್ಲೌಡ್ ಇಂಜಿನಿಯರಿಂಗ್ ನ ವಿಪಿ ಅನಿಲ್ ಬನ್ಸಾಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗೂಗಲ್ ಕ್ಲೌಡ್ಗೆ(Google Cloud) ಅಗತ್ಯವಿರುವ ಟ್ಯಾಲೆಂಟ್ ಪೂಲ್ ಭಾರತದಲ್ಲಿದೆ ಎಂದು ಅವರು ಹೇಳಿದದ್ದಾರೆ. ಭಾರತವು ಗೂಗಲ್ಗೆ ಉತ್ತಮ ಸ್ಥಳವಾಗಿದೆ.
ಜಾಗತಿಕ ಎಂಜಿನಿಯರಿಂಗ್ ತಂಡದೊಂದಿಗೆ ಒಟ್ಟಾಗಿ ಕೆಲಸ
ಕಳೆದ 12 ತಿಂಗಳುಗಳಲ್ಲಿ ಭಾರತದಲ್ಲಿ ನಿರ್ಮಿಸಲಿರುವ ಅಭಿವೃದ್ಧಿ ಕೇಂದ್ರಕ್ಕಾಗಿ ಭಾರತದ ಉನ್ನತ ಎಂಜಿನಿಯರಿಂಗ್ ಪ್ರತಿಭೆಗಳನ್ನು ನೇಮಿಸಿಕೊಳ್ಳಲಾಗಿದೆ(Job In Google) ಎಂದು ಅವರು ಹೇಳಿದ್ದಾರೆ. ಭಾರತದ ಈ ಪ್ರತಿಭೆಗಳು ಜಾಗತಿಕ ಎಂಜಿನಿಯರಿಂಗ್ ತಂಡದ ಸಹಯೋಗದೊಂದಿಗೆ ಸುಧಾರಿತ ಕ್ಲೌಡ್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಾರೆ ಅಂತಾ ತಿಳಿಸಿದ್ದಾರೆ. ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಭಾವಹಿಸಿ ತಮ್ಮ ಕನಸನ್ನು ನನಸು(Great opportunity) ಮಾಡಿಕೊಳ್ಳಬಹುದಾಗಿದೆ. ಗೂಗಲ್ ನಲ್ಲಿ ಕೆಲಸಕ್ಕೆ ಆಯ್ಕೆಯಾದರೆ ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯಗಳು ಸಿಗಲಿವೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿರುವ ಈ ತಂತ್ರಜ್ಞಾನದಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವೆಚ್ಚ ಅರ್ಧದಷ್ಟು ಇಳಿಯಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.