Research On Anti-Aging Formula: ಮುಪ್ಪಾವಸ್ಥೆ, ಸುಕ್ಕುಗಟ್ಟಿದ ದೇಹ ಯಾರಿಗೆ ಇಷ್ಟ ಹೇಳಿ. ವಿಶ್ವದ ಬಹುತೇಕ ಜನರು ತಾವು ಯಾವಾಗಲೂ ಯೌವನಭರಿತವಾಗಿ ಮತ್ತು ಸುಂದರವಾಗಿ ಕಾಣಬಯಸುತ್ತಾರೆ. ಅನೇಕ ಜನರು ಇದಕ್ಕಾಗಿ ವಿವಿಧ ರೀತಿಯ ಉತ್ಪನ್ನಗಳನ್ನು ಸಹ ಬಳಸುತ್ತಾರೆ. ಪ್ರಸ್ತುತ, ಸೌಂದರ್ಯ ಉತ್ಪನ್ನಗಳ ಮಾರುಕಟ್ಟೆಯು ತುಂಬಾ ದೊಡ್ಡದಾಗಿದೆ, ಆದರೆ ಪ್ರತಿದಿನ ಬಳಸುವ ಈ ರಾಸಾಯನಿಕಯುಕ್ತ ಉತ್ಪನ್ನಗಳು ನಿಮ್ಮನ್ನು ದೀರ್ಘಕಾಲ ಯುವಕರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಮುಂದೊಂದು ದಿನ 50 ವರ್ಷದ ವ್ಯಕ್ತಿ ಕೂಡ 30 ವರ್ಷ ವಯಸ್ಸಿನವನಂತೆ ಕಾಣುತ್ತಾನೆ ಎಂದು ನಿಮಗೆ ಹೇಳಿದರೆ! ಶಾಕ್ ತಗುಲಿದ ಅನುಭವವಾಯ್ತಾ?  ಹೌದು, ಹಾರ್ವರ್ಡ್ ಸಂಶೋಧಕರು ಇದನ್ನು ನಿಜವೆಂದು ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವೃದ್ಧರನ್ನು ಯೌವನವಾಗಿ ಕಾಣುವಂತೆ ಮಾಡುವ ಫಾರ್ಮುಲಾವೊಂದನ್ನು ಪ್ರತಿಪಾದಿಸಿದ್ದಾರೆ. ಈ ಸಂಶೋಧನೆಯು ನಿಮ್ಮನ್ನು ಯೌವನವಾಗಿ ಕಾಣುವಂತೆ ಮಾಡುವುದಲ್ಲದೆ, ನಿಮ್ಮ ದೈಹಿಕ ಶಕ್ತಿಯೂ ಹಾಗೆಯೇ ಉಳಿಯುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸಾವನ್ನು ಟಕ್ಕಂತ ಮುಟ್ಟಿ ಬಂದವರ ಅನುಭವ ಹೇಗಿರುತ್ತೆ ಗೊತ್ತಾ? ತಜ್ಞರು ಹೇಳಿದ್ದು ಹೀಗೆ!


ಸಂಶೋಧನೆಯ ವಿಶೇಷತೆ ಏನು?
ಬೋಸ್ಟನ್‌ನ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಕೆಲವು ಸಂಶೋಧನೆಗಳನ್ನು ಮಾಡಲಾಗಿದೆ. ಇದರಲ್ಲಿ ಮತ್ತೆ ಬಲಹೀನವಾಗಿ ಕಾಣುತ್ತಿದ್ದ ಇಲಿಗಳು ಆರೋಗ್ಯವಂತರಾಗಿ ದೃಢವಾದ ಸ್ನಾಯುಗಳನ್ನು ಪಡೆದುಕೊಂಡಿವೆ. ಇದರೊಂದಿಗೆ ವಯೋಸಹಜವಾಗಿ ದೃಷ್ಟಿ ದುರ್ಬಲಗೊಂಡ ಇಲಿಗಳೂ ಕೂಡ ಗುಣಮುಖಗೊಂಡಿವೆ. ಈ ಸಂಶೋಧನೆಯನ್ನು ಹಾವರ್ಡ್ ವೈದ್ಯಕೀಯ ಶಾಲೆ ಮತ್ತು ಬೋಸ್ಟನ್ ವಿಶ್ವವಿದ್ಯಾಲಯ ಜಂಟಿಯಾಗಿ ನಡೆಸಿವೆ. ಈ ಸಂಶೋಧನೆಯ ಮಾದರಿ ಗಾತ್ರವು ತುಂಬಾ ಚಿಕ್ಕದಾಗಿದ್ದರೂ, ಉಳಿದವುಗಳಲ್ಲಿ ಸಂಶೋಧನೆಯು ಯಶಸ್ವಿಯಾದರೆ, 50 ವರ್ಷದ ವ್ಯಕ್ತಿಯನ್ನು ಸಹ 30 ವರ್ಷದ ವ್ಯಕ್ತಿಯಂತೆ ತೋರಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ, ಇದರಲ್ಲಿ ವ್ಯಕ್ತಿಯು ಯುವಕರಂತೆಯೇ ಆರೋಗ್ಯಕರವಾಗಿರುತ್ತಾನೆ ಮತ್ತು ಆತನ ಸ್ನಾಯುಗಳು ಸಹ ಮೊದಲಿನಂತೆಯೇ ಇರುತ್ತವೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.


ಇದನ್ನೂ ಓದಿ-ಹೆಚ್ಚಿನ ಸಂಖ್ಯೆಯ ವಿವಾಹಿತ ಭಾರತೀಯರು ಡೇಟಿಂಗ್ ನಡೆಸುತ್ತಿದ್ದಾರಂತೆ! ದತ್ತಾಂಶ ಬಿಡುಗಡೆ ಮಾಡಿದ ಆಪ್


ವಯಸ್ಸನ್ನು ಇನ್ನೂ ಹೆಚ್ಚಿಸಬಹುದು
ಈ ಸಂಶೋಧನೆಯನ್ನು ಸೆಲ್‌ನಲ್ಲಿ ಲಾಸ್ ಆಫ್ ಎಪಿಜೆನೆಟಿಕ್ ಇನ್ಫಾರ್ಮೇಶನ್ ಆಸ್ ಎ ಕಾಸ್ ಆಫ್ ಮ್ಯಾಮಲ್ಸ್ ಏಜಿಂಗ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ, ವಯಸ್ಸಾದ ಮತ್ತು ದುರ್ಬಲ ಇಲಿಗಳನ್ನು ಮತ್ತೆ ಯುವ ಮತ್ತು ಆರೋಗ್ಯಕರ ಇಲಿಗಳನ್ನಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳ ಭಾರಿ ಬೆಚ್ಚಿಬೀಳಿಸುವ ಹೇಳಿಕೆ ಎಂದರೆ, ಈ ಫಾರ್ಮುಲಾ ಬಳಸಿ ಓರ್ವ ಯುವಕನನ್ನು ವೃದ್ಧನನ್ನಾಗಿ ಕೂಡ ಮಾರ್ಪಡಿಸಬಹುದಂತೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.