Samsung Galaxy A52s 5G Launch: ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5Gಯ ​​ಮೊದಲ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ಇದಕ್ಕಾಗಿ ಸ್ಯಾಮ್ಸಂಗ್ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದೆ. ಇತ್ತೀಚೆಗೆ, ಸ್ಯಾಮ್‌ಸಂಗ್ ಇಂಡಿಯಾ (Samsung India) ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಈ ಫೋನ್‌ನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಕಂಪನಿಯು ಮುಂಬರುವ 5G ಫೋನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ (Indian Market Launch) ಬಿಡುಗಡೆ ಮಾಡಲಿದೆ. ಈ ತಿಂಗಳ ಆರಂಭದಲ್ಲಿ ಯುಕೆ ನಲ್ಲಿ ಫೋನ್ ಬಿಡುಗಡೆಗೂ ಮುನ್ನವೇ ಫೋನಿನ ವಿಶೇಷತೆಗಳು ಮತ್ತು ಬೆಲೆಯ ಬಗ್ಗೆ ಸಾಕಷ್ಟು ಮಾಹಿತಿ ಬಹಿರಂಗಗೊಂಡಿದೆ.


COMMERCIAL BREAK
SCROLL TO CONTINUE READING

Samsung Galaxy A52s 5G Launch Date in India - ಈ ಕುರಿತು ಕಂಪನಿಯು ಮಾಡಿರುವ ಟ್ವೀಟ್ ನಲ್ಲಿ, ಫೋನ್ ಅನ್ನು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಇದನ್ನು ಸೆಪ್ಟೆಂಬರ್ 1, 2021 (ಬುಧವಾರ) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.


Smartphone Tips: ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಟ್ರೈ ಮಾಡಿ


Samsung Galaxy A52s 5G Specifications - ಈ ಸ್ಮಾರ್ಟ್ ಫೋನ್ ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ A52s 5G 6.5-ಇಂಚಿನ S-AMOLED ಡಿಸ್‌ಪ್ಲೇ ಹೊಂದಿದೆ. ಫೋನ್ ಪಂಚ್ ಹೋಲ್ ಸ್ಕ್ರೀನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಸ್ಕ್ರೀನ್ ಹೊಂದಿದೆ ಇದು ಆಂಡ್ರಾಯ್ಡ್ 11 ಆಧಾರಿತ One UI 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ. Snapdragon 778G ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದು 8GB ವರೆಗೆ RAM ಹೊಂದಿದೆ. ಫೋನ್ 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದನ್ನು microSD ಕಾರ್ಡ್ ಸಹಾಯದಿಂದ ವಿಸ್ತರಿಸಬಹುದು.


ಇದನ್ನೂ ಓದಿ- Smartphone: 7 ಇಂಚಿನ ಸ್ಕ್ರೀನ್‌ನೊಂದಿಗೆ ಬರುತ್ತಿದೆ ಜಬರ್ದಸ್ತ್ ಸ್ಮಾರ್ಟ್‌ಫೋನ್, 2 ದಿನಗಳವರೆಗೆ ಬಾಳಿಕೆ ಬರುತ್ತೆ ಬ್ಯಾಟರಿ, ಇಲ್ಲಿದೆ ವೈಶಿಷ್ಟ್ಯ


ಕ್ಯಾಮೆರಾ ಸೆಟಪ್ ಕುರಿತು ಹೇಳುವುದಾದರೆ, ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಫ್ರಂಟ್  ಕ್ಯಾಮೆರಾವನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ 64MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಎರಡು ಇತರ 5MP-5MP ಸೆನ್ಸರ್‌ಗಳನ್ನು ಪ್ಯಾಕ್ ಮಾಡಲಾಗಿದೆ. ಫೋನ್ 4500mAh ಬ್ಯಾಟರಿಯನ್ನು ಹೊಂದಿದೆ, ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಯಾಮ್ಸಂಗ್ ಫೋನ್ ಭಾರತದಲ್ಲಿ ಅದ್ಭುತವಾದ ಕಪ್ಪು, ಆಕರ್ಷಕ ಬಿಳಿ ಮತ್ತು ಅದ್ಭುತವಾದ ನೇರಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ.


ಇದನ್ನೂ ಓದಿ- Alert! ನಿಮ್ಮ ವಾಟ್ಸ್ ಆಪ್ ಕೂಡ ಈ ರೀತಿ ಹ್ಯಾಕ್ ಆಗಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ