Alert! ನಿಮ್ಮ ವಾಟ್ಸ್ ಆಪ್ ಕೂಡ ಈ ರೀತಿ ಹ್ಯಾಕ್ ಆಗಬಹುದು

WhatsApp Fraud - ವಾಟ್ಸ್ ಆಪ್ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ನಿತ್ಯ ಸಾಕಷ್ಟು ಸೈಬರ್ ಹಗರಣಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಇಂತಹ ಒಂದು ಹಗರಣ ಎಂದರೆ ಅದು ವೆರಿಫಿಕೆಶನ್ ಕೋಡ್ ಹಗರಣ. ಏನಿದು ಪರಿಶೀಲನೆ ಹಗರಣ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Aug 29, 2021, 05:06 PM IST
  • ವಾಟ್ಸಾಪ್ ನಲ್ಲಿ ಹೊಸ ಸೈಬರ್ ಹಗರಣ ನಡೆಯುತ್ತಿದೆ
  • ಪರಿಶೀಲನೆ ಕೋಡ್ ಹಗರಣವು ನಿಮಗೆ ಸ್ನೇಹಿತರ ಹೆಸರಿನಲ್ಲಿ ಸಂದೇಶ ನೀಡುತ್ತದೆ
  • ಪರಿಶೀಲನೆ ಕೋಡ್‌ಗೆ ಸಂಬಂಧಿಸಿದ ಸಂದೇಶದ ಬಗ್ಗೆ ಎಚ್ಚರದಿಂದಿರಿ
Alert! ನಿಮ್ಮ ವಾಟ್ಸ್ ಆಪ್ ಕೂಡ ಈ ರೀತಿ ಹ್ಯಾಕ್ ಆಗಬಹುದು title=
WhatsApp Fraud (File Photo)

ನವದೆಹಲಿ: WhatsApp Fraud - ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ಜನರ ಅವಲಂಬನೆ, ಸೈಬರ್ ಕಳ್ಳತನದ ಅಂಕಿಅಂಶಗಳು ನಿರಂತರವಾಗಿ ಹೆಚ್ಚಿಸುತ್ತಿದೆ. ಸಾಮಾಜಿಕ ಮಾಧ್ಯಮವು ವಿಷಯಗಳನ್ನು ತುಂಬಾ ಸರಳವಾಗಿಸುತ್ತಿದ್ದರೂ, ಸೈಬರ್ ಕಳ್ಳತನವು ಬಳಕೆದಾರರ ಇಮೇಜ್, ಅವರ  ಹಣ ಮತ್ತು ಅವರ ಜೀವವನ್ನು ಅಪಾಯಕ್ಕೆ ತಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ (WhatsApp) ಸೈಬರ್ ಅಪರಾಧಗಳು (Cyber Crime)ಹೆಚ್ಚಾಗಿದೆ. ಇಂತಹುದೇ ಒಂದು ಸೈಬರ್ ಹಗರಣವೆಂದರೆ ಅದು 'ಪರಿಶೀಲನೆ ಕೋಡ್ ಹಗರಣ'ಈ ಹಗರಣದ ಮೂಲಕ ಜನರ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಇದನ್ನು ಹೇಗೆ ತಪ್ಪಿಸಬಹುದು ತಿಳಿಯೋಣ ಬನ್ನಿ.

ಏನಿದು ವೆರಿಫಿಕೆಶನ್ ಕೋಡ್ ಹಗರಣ?
ಇತ್ತೀಚಿನ ದಿನಗಳಲ್ಲಿ ಈ ದಿ ಸೈಬರ್ ಹಗರಣವು (Cyber Fraud) ಬಹಳಷ್ಟು ಜನರಿಗೆ ಹಾನಿ ಮಾಡುತ್ತಿದೆ. ಈ ಹಗರಣದ ನೆಪದಲ್ಲಿ, ಅನೇಕ ಜನರು ತಮ್ಮ WhatsApp ಖಾತೆಗಳನ್ನು ಹ್ಯಾಕರ್‌ಗಳಿಗೆ ನೀಡುತ್ತಿದ್ದಾರೆ. ಸ್ಕ್ಯಾಮರ್‌ಗಳು ವಾಟ್ಸಾಪ್‌ನ ಪರಿಶೀಲನೆ ಕೋಡ್ ಮೂಲಕ ಜನರ ಖಾತೆಗಳನ್ನು ಹ್ಯಾಕ್ ಮಾಡುವುದು ಮಾತ್ರವಲ್ಲ, ಹಾಗೆ ಮಾಡಲು, ಅವರು ಬಳಕೆದಾರರ ಕುಟುಂಬ ಮತ್ತು ಸ್ನೇಹಿತರ ಹೆಸರಿನಲ್ಲಿ ಬಳಕೆದಾರರ ಕಣ್ಣಲ್ಲಿ ಧೂಳೆರಚಿ ವಂಚಿಸುತ್ತಿದ್ದಾರೆ (Scam). 

ವೆರಿಫಿಕೆಶನ್ ಕೋಡ್ ಸ್ಕ್ಯಾಮ್ ಹೇಗೆ ನಡೆಸಲಾಗುತ್ತದೆ?
>> ನಿಮ್ಮ ಮೊಬೈಲ್ ಗೆ ವಾಟ್ಸ್ ಆಪ್ (WhatsApp) ನಿಂದ ಸಂದೇಶವೊಂದು ಬರಲಿದ್ದು, ಅದರಲ್ಲಿ 6 ಅಂಕಿಯ ಕೋಡ್ ಅನ್ನು ಕಳುಹಿಸಲಾಗಿರುತ್ತದೆ ಮತ್ತು ಇದು ವಾಟ್ಸಾಪ್‌ಗೆ ಲಾಗ್ ಇನ್ ಮಾಡಲು ಟೂ ಫ್ಯಾಕ್ಟರ್ ಅಥಂಟಿಕೆಶನ್
ಕೋಡ್ ಆಗಿದೆ.

>>ಸಂದೇಶದಲ್ಲಿ ನೀವು ಈ ಕೋಡ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂದೂ ಕೂಡ ಹೇಳಲಾಗಿರುತ್ತದೆ

>>ಇದರ ನಂತರ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಸಂಖ್ಯೆಯಿಂದ ಅವರು ನಿಮಗೆ 6 ಅಂಕಿಗಳ ಪರಿಶೀಲನಾ ಕೋಡ್ ಅನ್ನು ತಪ್ಪಾಗಿ ಕಳುಹಿಸಿದ್ದಾರೆ ಎಂಬ ಸಂದೇಶ ಬರುತ್ತದೆ.

>>ಇದಾದ ಬಳಿಕ ನಿಮಗೆ ನಿಮ್ಮ ಯಾವುದಾದರೊಂದು ಸ್ನೇಹಿತ ಅಥವಾ ಸಂಬಂಧಿಯಿಂದ ಸಂದೇಶ ಬರಲಿದ್ದು, ಅವರು ತಪ್ಪಾಗಿ ನಿಮಗೆ ತಮ್ಮ 6 ಅಂಕಿಯ ವೆರಿಫಿಕೆಶನ್ ಕಳುಹಿಸಿದ್ದಾರೆ ಎಂದು ಬರೆದಿರುತ್ತದೆ.

>> ವೆರಿಫಿಕೆಶನ್ ಕೋಡ್ ತಮ್ಮ ಅಗತ್ಯತೆಯಾಗಿದ್ದು, ಅದನ್ನು ತಕ್ಷಣಕ್ಕೆ ಮರುಕಳುಹಿಸುವಂತೆ 

>> ಇಲ್ಲಿ ಖುದ್ದು ಹ್ಯಾಕರ್ ಗಳೆ ನಿಮ್ಮ ಸಂಬಂಧಿ ಅಥವಾ ಸ್ನೇಹಿತ ಎಂದು ನಿಮಗೆ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ಇದೆಲ್ಲವೂ  ಹಗರಣದ ಭಾಗವಾಗಿದೆ.

ಇದನ್ನೂ ಓದಿ-Airtel ಮತ್ತು Vi ಪ್ಲಾನ್ ಗಳನ್ನು ಹಿಂದಿಕ್ಕಿದ Jio ; ಕೇವಲ 75 ರೂ. ರಿಚಾರ್ಜ್ ನಲ್ಲಿ ಸಿಗಲಿದೆ ಅನ್ಲಿಮಿಟೆಡ್ ಕರೆ ಮತ್ತು ಈ ಸೌಲಭ್ಯ

ಇದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು?
ಒಂದು ವೇಳೆ ನಿಮ್ಮ ಬಳಿಯೂ ಕೂಡ ಈ ರೀತಿಯ ಯಾವುದೇ ಸಂದೇಶ ಬಂದರೆ, ಅದರತ್ತ ಗಮನ ಕೊಡಬೇಡಿ. ತಕ್ಷಣವೆ ಆ ಸಂಖ್ಯೆಯ ಕುರಿತು ವರದಿ ಮಾಡಿ ಅದನ್ನು ನಿರ್ಬಂಧಿಸಿ. ಅಂತಹ ಯಾವುದೇ ಕೋಡ್ ಅನ್ನು ನೀವು ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ.

ಇದನ್ನೂ ಓದಿ-ಅತ್ಯಂತ ಕಡಿಮೆ ದರದ smartphone ಖರೀದಿಸಬೇಕೇ ? ಈ ದಿನದಿಂದ ಆರಂಭವಾಗಲಿದೆ jioPhone Next ಪ್ರಿ ಬುಕಿಂಗ್

ವಾಟ್ಸ್ ಆಪ್ ಎಂದಿಗೂ ಕೂಡ ಒಂದು ವ್ಯಕ್ತಿಯ ಅಥವಾ ಸಂಖ್ಯೆಗೆ ಸಂಬಂಧಿಸಿದ ವೆರಿಫಿಕೆಶನ್ ಕೋಡ್ ಅನ್ನು ಆ ವ್ಯಕ್ತಿಯ ಸ್ನೇಹಿತ ಅಥವಾ ಸಂಬಂಧಿಗೆ ಕಳುಹಿಸುವುದಿಲ್ಲ.

ಇದನ್ನೂ ಓದಿ-BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

Trending News